»   » ಇನ್ನೆರಡು ವರ್ಷ ರಾಕಿಂಗ್ ಸ್ಟಾರ್ ಯಶ್ ಫುಲ್ ಬಿಜಿ

ಇನ್ನೆರಡು ವರ್ಷ ರಾಕಿಂಗ್ ಸ್ಟಾರ್ ಯಶ್ ಫುಲ್ ಬಿಜಿ

Posted By:
Subscribe to Filmibeat Kannada

'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹೀಗೆ ಹಿಟ್ ಮೇಲೆ ಹಿಟ್ ಕೊಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಗೆ ಇನ್ನೆರಡು ವರ್ಷ ಪುರುಸೊತ್ತೇ ಇಲ್ಲ!

ಗಾಂಧಿನಗರದ ಹೊಸ ಚಿನ್ನದ ಹುಡುಗನಾಗಿಬಿಟ್ಟಿರುವ ಯಶ್ ಕಾಲ್ ಶೀಟ್ ಗಾಗಿ ನಿರ್ಮಾಪಕರು ದುಂಬಾಲು ಬೀಳ್ತಿದ್ದಾರೆ. ಆದ್ರೆ, ಆ ನಿರ್ಮಾಪಕರು ತರುತ್ತಿರುವ ಕಥೆಯನ್ನ ಕೇಳುವುದಕ್ಕೂ ಯಶ್ ಬಳಿ ಟೈಮ್ ಇಲ್ಲ ಅಂದ್ರೆ ನೀವು ನಂಬಲೇ ಬೇಕು.


ಅಷ್ಟೊಂದು ಬಿಜಿಯಾಗ್ಬಿಟ್ಟಿರುವ ಕನ್ನಡದ ಹುಲಿ ಯಶ್, ಯಾವ್ಯಾವ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಕುತೂಹಲ ಸದ್ಯ ಎಲ್ಲಾ ಕನ್ನಡಿಗರಿಗೂ ಕಾಡುತ್ತಿದೆ. ಈಗಾಗಲೇ ಜಗಜ್ಜಾಹೀರಾಗಿರುವಂತೆ ಯಶ್ ಮುಂದಿನ ಸಿನಿಮಾ 'ಮಾಸ್ಟರ್ ಪೀಸ್'.


Yash's upcoming movies list

ಸಂಭಾಷಣೆ ಬರೆಯುತ್ತಿದ್ದ ಮಂಜು ಮಾಂಡವ್ಯ ಚೊಚ್ಚಲ ಬಾರಿ ನಿರ್ದೇಶನ ಮಾಡುತ್ತಿರುವ ಚಿತ್ರ 'ಮಾಸ್ಟರ್ ಪೀಸ್'. 'ನಿನ್ನಿಂದಲೇ' ಚಿತ್ರಕ್ಕೆ 'ಹೊಂಬಾಳೆ ಫಿಲ್ಮ್ಸ್' ಬ್ಯಾನರ್ ನಡಿ ಬಂಡವಾಳ ಹಾಕಿದ್ದ ವಿಜಯ್ ಕಿರಗಂದೂರ್ 'ಮಾಸ್ಟರ್ ಪೀಸ್' ನಿರ್ಮಾಪಕ.


ಅಪ್ಪಟ ದೇಶಭಕ್ತಿ ಚಿತ್ರವಾಗಿರುವ 'ಮಾಸ್ಟರ್ ಪೀಸ್' ನಲ್ಲಿ ಶಾನ್ವಿ ಶ್ರೀವಾಸ್ತವ ಯಶ್ ಗೆ ಜೋಡಿಯಾಗಿದ್ದಾರೆ. ಯಶ್ ಹುಟ್ಟುಹಬ್ಬದಂದೇ 'ಮಾಸ್ಟರ್ ಪೀಸ್' ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಗಳಿಸಿದೆ. [ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]


ಈ ಚಿತ್ರ ಬಿಟ್ಟರೆ ಯಶ್ ಕೈಲಿ ಬೇರೆ ಯಾವ ಸಿನಿಮಾ ಇದೆ ಅಂತ ನೀವು ಮೂಗು ಮುರಿದರೆ, ಸ್ವಲ್ಪ ತಾಳಿ...ಯಶ್ ಕೈಯಲ್ಲಿರುವ ಚಿತ್ರಗಳ ಪಟ್ಟಿ ದೊಡ್ಡದಿದೆ. 'ಮಾಸ್ಟರ್ ಪೀಸ್' ನಿರ್ಮಾಪಕ ವಿಜಯ್ ಕಿರಗಂದೂರ್ ಜೊತೆಯಲ್ಲೇ ಯಶ್ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ.


masterpiece

'ಹೊಂಬಾಳೆ ಫಿಲ್ಮ್ಸ್' ನಡಿ 'ಪ್ರೊಡಕ್ಷನ್ ನಂ.4' ಆಗಲಿರುವ ಈ ಚಿತ್ರಕ್ಕೆ ನಿರ್ದೇಶಕ ಯಾರು ಗೊತ್ತಾ? ಸೂಪರ್ ಹಿಟ್ 'ಉಗ್ರಂ' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. 'ಉಗ್ರಂ' ಹಿಟ್ ಆದ್ಮೇಲೆ ಸ್ಕ್ರಿಪ್ಟ್ ವರ್ಕ್ ನಲ್ಲಿ ತಲ್ಲೀನರಾಗಿರುವ ಪ್ರಶಾಂತ್, 'ಮಾಸ್ಟರ್ ಪೀಸ್' ಮುಗಿದ ನಂತ್ರ ಈ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಲಿದ್ದಾರಂತೆ. [ಸಪ್ತ ಸಾಗರದಾಚೆಗೆ ಹಾರಿದ 'ರಾಮಾಚಾರಿ']


ಇನ್ನೂ ಕೆ.ಮಂಜು ಕೃಪೆಯಿಂದ 'ರಾಜಾ ಹುಲಿ' ಚಿತ್ರದಲ್ಲಿ ನಟಿಸಿ ಯಶಸ್ವಿಯಾಗಿರುವ ಯಶ್, ಅದೇ ಕೆ.ಮಂಜು ಬ್ಯಾನರ್ ನಲ್ಲಿ ಮತ್ತೊಂದು ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಕೆ.ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ಇದು 35ನೇ ಚಿತ್ರವಾಗಲಿದ್ದು, ನಿರ್ದೇಶಕರಿನ್ನೂ ಫೈನಲ್ ಆಗಿಲ್ಲ. [ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ']


Yash's upcoming movies list

ಇದರೊಂದಿಗೆ 'ಸಿಂಹಾದ್ರಿ ಪ್ರೊಡಕ್ಷನ್ಸ್' ಕಂಪನಿಗಾಗಿಯೂ ಯಶ್ ಬಣ್ಣ ಹಚ್ಚಲಿದ್ದಾರೆ. ಈ ಎಲ್ಲಾ ಚಿತ್ರಗಳ ನಂತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಿರ್ದೇಶಕ ಸಂತೋಷ್ ಅನಂದರಾಮ್ ಆಕ್ಷನ್ ಕಟ್ ನಲ್ಲಿ ಯಶ್ ಮತ್ತೊಂದು ಸಿನಿಮಾ ಮಾಡುವುದಾಗಿ ಅದಾಗಲೇ ಮಾತುಕೊಟ್ಟಿದ್ದಾರೆ. ['ರಾಮಾಚಾರಿ' ನಿರ್ದೇಶಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!]


ಈ ಎಲ್ಲಾ ಸಿನಿಮಾಗಳು ಮುಗಿಯುವುದಕ್ಕೆ ಮಿನಿಮಂ ಎರಡು ವರ್ಷ ಬೇಕೇ ಬೇಕು. ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಸೆಲೆಬ್ರಿಟಿಗಳ ಪೈಕಿ ಎರಡು ವರ್ಷಗಳಲ್ಲಿ ಐದು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ಯಶ್ ವೃತ್ತಿಪರತೆ ಬಗ್ಗೆ ಮೆಚ್ಚಲೇ ಬೇಕು. (ಫಿಲ್ಮಿಬೀಟ್ ಕನ್ನಡ)

English summary
After the success of MR And Mrs Ramachari, Rocking Star Yash has become most wanted actor of Sandalwood. Currently, Yash has given a nod to 5 movies. Here is a detailed list of Yash's upcoming movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada