Mother Promise Trailer: 'ಟಾಕ್ಸಿಕ್‌'ವರೆಗೂ ಕಾಯ್ಬೇಡಿ, 'ಮದರ್ ಪ್ರಾಮಿಸ್' ರಂಜಿಸ್ತಾರಂತೆ ಡಾಲಿ & ಗ್ಯಾಂಗ್!

ಈ ವರ್ಷ ಒಂದೇ ಒಂದು ದೊಡ್ಡ ಗೆಲುವಿಗಾಗಿ ಕನ್ನಡ ಚಿತ್ರರಂಗ ಕಾಯ್ತಿದೆ. ಆಗಸ್ಟ್ 26ಕ್ಕೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬರ್ತಿವೆ. ಅದರಲ್ಲಿ ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮಿಸ್' ಕೂಡ ಒಂದು. ಸದ್ಯ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ.

ಧನಂಜಯ್ ನಿರ್ಮಿಸಿ ನಟಿಸಿರುವ ಸಿನಿಮಾ 'ಮದರ್ ಪ್ರಾಮಿಸ್'. ಟೈಟಲ್‌ಗೆ ತಕ್ಕಂತೆ ಮದರ್ ಸೆಂಟಿಮೆಂಟ್ ಇರುವ ಸಿನಿಮಾ. ಜೊತೆಗೆ ಡಾನ್ ರೋಸಿ(ಧನಂಜಯ್) ಆರ್ಭಟ, ಜೂಜು, ಕಾಮಿಡಿ, ಬೈಕ್ ರೇಸ್ ಎಲ್ಲವೂ ಇಲ್ಲಿದೆ. ಧನಂಜಯ್ ಗೆಳೆಯ ಪೂರ್ಣಚಂದ್ರ ಮೈಸೂರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಹಿರಿಯ ನಟಿಯರಾದ ಗೀತಾ, ವಿನಯ ಪ್ರಸಾದ್ ತಾರಾಗಣದಲ್ಲಿದ್ದಾರೆ.

Mother Promise Trailer Daali Dhananjaya s film promises a roller-coaster ride to watch

ಇದು ಕಾಲ್ಪನಿಕ ಬೆಂಗಳೂರಿನಲ್ಲಿ ನಡೆಯುವ ಕಥೆ. ಇಲ್ಲಿ ಬನಶಂಕರಿ ಬೀಚ್ ಕೂಡ ಇದೆ. ಶಾಲೆಯಲ್ಲಿ ಓದುವಾಗ ಬೈಕ್ ರೇಸರ್ ಆಗುವ ಕನಸು ಕಾಣುವ ರೋಸಿ ಹಾಗೂ ನಾಸಾ ಸೈಟಿಂಸ್ಟ್ ಆಗುವ ಕನಸು ಕಂಡ ಆತನ ಸ್ನೇಹಿತನ ಬದುಕು ಮುಂದೆ ಯಾವೆಲ್ಲಾ ತಿರುವು ಪಡೆದುಕೊಳ್ಳುತ್ತದೆ. ಸ್ನೇಹಿತರಿಬ್ಬರು ಎದುರಾಳಿಗಳಾವುದ್ಯಾಕೆ? ಇವರಿಬ್ಬರ ನಡುವೆ ಬರುವ ಬೆಟ್ಟಿಂಗ್ ಕಿಂಗ್ ಯಾರು? ಬೈಕ್ ರೇಸರ್ ರೋಸಿ ಬೆಂಗಳೂರಿನಲ್ಲಿ ಗ್ಯಾಂಬ್ಲಿಂಗ್ ಕಿಂಗ್ ಆಗಿದ್ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತೆರೆಮೇಲೆ ನೋಡಬೇಕು. ಮೊದಲ ನೋಟದಲ್ಲೇ ಟ್ರೈಲರ್ ಸಮಜವಾಗಿದೆ. ಇದು ಫಸ್ಟ್ ಝಲಕ್ ಅಷ್ಟೆ. ಮತ್ತೊಂದು ಟ್ರೈಲರ್ ಕೂಡ ರೆಡಿಯಾಗ್ತಿದೆ.

ಶಾಲಾ ಶಿಕ್ಷಕಿ ಪಾತ್ರದಲ್ಲಿ ಗೀತಾ ನಟಿಸಿದ್ದು ಧನಂಜಯ್ ತಾಯಿ ಪಾತ್ರದಲ್ಲಿ ವಿನಯ ಪ್ರಸಾದ್ ಮಿಂಚಿದ್ದಾರೆ. ಟ್ರೈಲರ್ ನೋಡ್ತಿದ್ರೆ ಫನ್ ಎಂಟರ್‌ಟೈನರ್ ಸಿನಿಮಾ ಎನಿಸುವಂತೆ ಕಾಣ್ತಿದೆ. ಸಾಕಷ್ಟು ಜನ ಟ್ರೈಲರ್ ನೋಡಿ ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಎಂದು ಪ್ರಾಮಿಸ್ ಮಾಡುತ್ತಿದ್ದಾರೆ. ನವನೀಶ್ ಶ್ಯಾಮ್ ಸಂಗೀತ, ರಾಹುಲ್ ರಾಯ್ ಛಾಯಾಗ್ರಹಣ ಚಿತ್ರಕ್ಕಿದೆ. ಜುಲೈ 10ರಂದು 'ಮದರ್ ಪ್ರಾಮಿಸ್' ಸಿನಿಮಾ ಬಿಡುಗಡೆ ಆಗಲಿದೆ. ಧನಂಜಯ್ ಆಪ್ತ ಬಳಗದ ಸ್ನೇಹಿತರೇ ಚಿತ್ರದ ಸಾಕಷ್ಟು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಾಗಭೂಷಣ್ ಕೂಡ ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಯಶ್ವಂತ್ ಶೆಟ್ಟಿ ಕಾಮಿಡಿ ಪಂಚ್ ಕೊಡೊಕೆ ಬರ್ತಿದ್ದಾರೆ.

Mother Promise Trailer Daali Dhananjaya s film promises a roller-coaster ride to watch

ಟ್ರೈಲರ್ ನೋಡಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದೊಂದಿಗೆ ಕೆಲವರು ಹೋಲಿಸುತ್ತಿದ್ದಾರೆ. ಅದೇ ರೀತಿ ಈ ಸಿನಿಮಾ ಕೂಡ ಆರಂಭದಿಂದ ಕೊನೆವರೆಗೂ ರಂಜಿಸುತ್ತೆ ಎಂದು ನಿರೀಕ್ಷೆ ಮಾಡುತ್ತಿದ್ದಾರೆ. ಸಾಕಷ್ಟು ಜನ ರಂಗಭೂಮಿ ಪ್ರತಿಭೆಗಳು ಚಿತ್ರದಲ್ಲಿದ್ದಾರೆ. ಸೆಟ್ ಹಾಕಿ ಚಿತ್ರದ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಚಿ. ಗುರುದತ್ ಸೇರಿ ಮತ್ತಷ್ಟು ಕಲಾವಿದರನ್ನು ಮುಂದಿನ ಟ್ರೈಲರ್‌ನಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಈಗಾಗಲೇ 'ಮದರ್ ಪ್ರಾಮಿಸ್' ಚಿತ್ರದ 2 ಹಾಡುಗಳು ಬಂದು ಗಮನ ಸೆಳೆದಿದೆ. ಆರ್‌ಸಿಬಿ ತಂಡಕ್ಕೆ ಒಂದು ಹಾಡನ್ನು ಚಿತ್ರತಂಡ ಅರ್ಪಣೆ ಮಾಡಿತ್ತು. ಗ್ಯಾಂಗ್‌ಸ್ಟರ್ ಸಿನಿಮಾಗಳನ್ನು ತಮಾಷೆಯಾಗಿ ಹೇಳುವುದು ಒಂದು ಸಿದ್ಧಸೂತ್ರ. 'ಮದರ್ ಪ್ರಾಮಿಸ್' ಸಿನಿಮಾ ಕೂಡ ಅದೇ ಹಾದಿಯಲ್ಲಿ ಮೂಡಿ ಬರ್ತಿದೆ. ಟ್ರೈಲರ್ ಮೂಲಕ ಪ್ರಚಾರ ಆರಂಭಿಸಿರುವ ಚಿತ್ರತಂಡ ಮತ್ತಷ್ಟು ಸರ್‌ಪ್ರೈಸ್ ಹೊತ್ತು ಬರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ. ಧನಂಜಯ್ ನಿರ್ಮಾಣದ 5ನೇ ಸಿನಿಮಾ ಇದಾಗಿದ್ದು ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ತೆರೆಗೆ ಬರಲಿದೆ.

Read more about: dhananjay geetha sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X