»   » ತೆರೆಸಾ ಪಾತ್ರದಲ್ಲಿಟೈಟಾನಿಕ್‌ ಚೆಲುವೆ?

ತೆರೆಸಾ ಪಾತ್ರದಲ್ಲಿಟೈಟಾನಿಕ್‌ ಚೆಲುವೆ?

Posted By: Super
Subscribe to Filmibeat Kannada

ಮದರ್‌ ತೆರೆಸಾ ಜೀವನವ ತೆ-ರೆಗೆ ತರುವ ಕನಸುಗಾರರ ಯಾದಿಗೀಗ ಇನ್ನೊಬ್ಬ-ರು. ಈ ಇನ್ನೊಬ್ಬ-ರಿಗಿಂತ ಮುಖ್ಯವಾದದ್ದು ಮಹಾಮಾತೆಯ ಪಾತ್ರ ವಹಿಸುತ್ತಿರುವುದು ಟೈಟಾನಿಕ್‌ ಚೆಲುವೆ ಕೇಟ್‌ ವಿನ್ಸ್‌ಲೆಟ್‌ ಎಂಬುದು. ಈ ಚೆಲುವೆಯ ಕಾಲ್‌ಷೀಟ್‌ ಪಡೆಯಲು ಶತಾಯಗತಾಯ ಯತ್ನಿಸುತ್ತಿರುವ ರಾಜೀವ್‌ ನಾಥ್‌ ಅವರೇ -ಆ ಇನ್ನೊಬ್ಬರು.

ಮಲೆಯಾಳಿ ಕಿರುತೆರೆಯಲ್ಲಿ ಹೆಸರು ಮಾಡಿರುವ ಶಾಜಿ ಥೈಕ್ಕಡನ್‌ ಎಂಬ ಕಲೆಗಾರ ಮಿನಿ ನಾಯರ್‌ ಕೈಲಿ ಈ ಪಾತ್ರ ಮಾಡಿಸುತ್ತಿದ್ದು, ವರ್ಷಾಂತ್ಯದ ಹೊತ್ತಿಗೆ ಈ ಚಿತ್ರ ತೆರೆ ಕಾಣಲಿದೆ. ಶಾಜಿ ಅವರದು ಚಿಕ್ಕ ಕನಸು. ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಮತ್ತೊಬ್ಬ ಮಲೆಯಾಳಿ ನಿರ್ದೇಶಕ ರಾಜೀವ್‌ ನಾಥ್‌ ಅವರದೋ ಕಡಲಷ್ಟು ವಿಶಾಲವಾದ ಯೋಜನೆ. ಅಟೆನ್‌ಬರೋ ಅವರ 'ಗಾಂಧಿ"ಯ ಉತ್ತುಂಗಕ್ಕೆ 'ಮದರ್‌ ತೆರೆಸಾ" ಕೊಂಡೊಯ್ಯುವುದು ರಾಜೀವ್‌ ಮನದ ಸದ್ಯದ ತುಡಿತ. ಶಾಜಿ ಅವರ ತೆರೆಸಾ ಭಾರತದ ಆಡಿಯನ್ಸ್‌ಗೆ ಮಾತ್ರವಾದರೆ, ರಾಜೀವ್‌ ಅವರ ಗುರಿ ಜಗತ್ತಿನ ಸಹೃದಯರು.

ತಮಗೆ ತಿಳಿದ ಯೂರೋಪ್‌ನಲ್ಲಿರುವ ಕೆಲವು ಗೆಳೆಯರ ಮೂಲಕ ಟೈಟಾನಿಕ್‌ ಚೆಲುವೆಗೆ ಮದರ್‌ ತೆರೆಸಾ ಯೋಜನೆಯ ಪರಿಚಯ ಮಾಡಿಕೊಟ್ಟಿದ್ದಾರೆ. ಕೇಟ್‌ ವಿನ್ಸ್‌ಲೆಟ್‌ಗೆ ಯೋಜನೆ ಇಷ್ಟವಾಗಿದೆ ಕೂಡ. ಇನ್ನು ಆಕೆಯ ಕಾಲ್‌ಷೀಟ್‌ಗಷ್ಟೇ ಕ್ಷಣಗಣನೆ. ಚಿತ್ರಕತೆ ಹೆಣೆಯಲು ಸಾಹಿತಿ ಹಾಗೂ ಸಿನಿ ದಿಗ್ಗಜರಾದ ಎಂ.ಟಿ.ವಾಸುದೇವನ್‌ ನಾಯರ್‌, ಜಾನ್‌ ಪಾಲ್‌ ಹಾಗೂ ಪಾಲ್‌ ಜಚಾರಿಯಾ ಅವರ ನೆರವು ಪಡೆಯಲಿದ್ದಾರೆ ರಾಜೀವ್‌.

ರಾಜೀವ್‌ ಅವರ ಈ ಯೋಜನೆಯ ಬಗ್ಗೆ ಅವರ ಮಾತುಗಳಲ್ಲೇ ಕೇಳಿ....

ಚಿತ್ರವನ್ನು ಕೋಲ್ಕತಾದಲ್ಲಿ ಶೂಟ್‌ ಮಾಡಬೇಕೆಂದಿದ್ದೇನೆ. ಕೆಲವು ಜೀವಂತ ಪಾತ್ರಗಳೂ ಚಿತ್ರದಲ್ಲಿರುತ್ತವೆ. ಮದರ್‌ ತೆರೆಸಾ ಕೋಲ್ಕತಾದಲ್ಲಿ ಸೇವೆ ಪ್ರಾರಂಭಿಸಿದಾಗ ಜ್ಯೋತಿ ಬಸು ಅಲ್ಲಿನ ಕೌನ್ಸಿಲರ್‌ ಆಗಿದ್ದರು. ಮದರ್‌ ಬಗ್ಗೆ ಬಸು ಅವರಿಗೆ ಅಪಾರ ಗೌರವ. ಮುನ್ನಾ ಮನ್ನಣೆ ಪಡೆಯದೆ ಯಾವುದೇ ಸಮಯದಲ್ಲಾದರೂ ಜ್ಯೋತಿ ಬಸು ಅವರನ್ನು ಕರೆಯುವಷ್ಟು ಸ್ವಾತಂತ್ರ್ಯ ಮದರ್‌ ಅವರಿಗಿದ್ದಿತ್ತು. ಬಸು ಹರೆಯದ ದಿನಗಳಲ್ಲಿನ ಚಹರೆ ಉಳ್ಳ ಸೂಕ್ತ ವ್ಯಕ್ತಿಯನ್ನು ಈ ಪಾತ್ರಕ್ಕಾಗಿ ಹುಡುಕುತ್ತಿದ್ದೇನೆ.

ಯೂರೋಪಿನ ಖಿರ್ಘಿಸ್ತಾನ್‌ನಲ್ಲಿ ಮಮ್ಮ ಈಸ್‌ ವೇಯ್ಟಿಂಗ್‌ ಸಿನಿಮಾ ಶೂಟ್‌ ಮಾಡುತ್ತಿದ್ದಾಗ ಮದರ್‌ ತೆರೆಸಾ ಬಗ್ಗೆ ಸಿನಿಮಾ ಮಾಡುವ ಯೋಚನೆ ಹೊಳೆಯಿತು. ಕ್ಯಾಥೋಲಿಕ್‌ ಯೂತ್‌ ಮೂವ್‌ಮೆಂಟ್‌ನಂಥಾ ಅಂತರರಾಷ್ಟ್ರೀಯ ಸಂಸ್ಥೆಗಳು ಚಿತ್ರಕ್ಕೆ ಹಣ ತೊಡಗಿಸಲು ಸಿದ್ಧರಿದ್ದಾರೆ. ಚಿತ್ರಕತೆ ಹೆಣೆಯುವ ಸಲುವಾಗಿ ನನಗೆ ಹತ್ತಿರಾಗಿರುವ ಸಿನಿಮಾ ದಿಗ್ಗಜರೊಟ್ಟಿಗೆ ಚರ್ಚೆ ಮಾಡುತ್ತಿದ್ದೇನೆ. ತಲೆ ಮೇಲೆ ತಲೆ ಬಿದ್ದರೂ ಈ ಯೋಜನೆಯನ್ನು ಮುಗಿಸಿಯೇ ತೀರುತ್ತೇನೆ. ಚಿತ್ರೀಕರಣ ಯಾವ ಕ್ಷಣದಲ್ಲಿ ಬೇಕಾದರೂ ಶುರುವಾಗಬಹುದು.

ಕೆಲವು ವರ್ಷಗಳ ಹಿಂದೆ ಜನನಿ ಎಂಬ ಮಲೆಯಾಳಿ ಸಿನಿಮಾ ನಿರ್ದೇಶಿಸಿ, ಪ್ರಶಸ್ತಿಗೂ ಭಾಜನರಾಗಿರುವ ರಾಜೀವ್‌ ನಾಥ್‌ ಈಗ ಮಹಾತಾಯಿಯ ಯೋಜನೆಯ ಗುಂಗಿನಲ್ಲಿದ್ದಾರೆ. ತಾಯಿ ದೇವಿಯ ವಿವಿಧ ಮುಖಗಳ ಮನದಲ್ಲಿ ಹೊತ್ತು ಸಾಗುವ ಈ ಪ್ರತಿಭಾವಂತನ ಈ ಯೋಜನೆ ಸಫಲವಾಗಲಿ. ಟೈಟಾನಿಕ್‌ ಸುಂದರಿ ಕೇಟ್‌ ವಿನ್ಸ್‌ಲೆಟ್‌ ಮಮತಾ ಮೂರ್ತಿಯಾಗಿ ಹೇಗೆ ಕಾಣುವರೆಂದು ನೋಡುವ ಭಾಗ್ಯ ನಮ್ಮದಾಗಲಿ. ವಾರ್ತಾ ಸಂಚಯ

English summary
National award winning director Rajiv Nath plans for a movie on Mother Teresa. M.T.Vasudevan Nair, John Paul and Paul zacharia to help for screenplay

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada