For Quick Alerts
  ALLOW NOTIFICATIONS  
  For Daily Alerts

  'ಊರು-ಕೇರಿ'ಯ ದನಿ ಸಿದ್ದಲಿಂಗಯ್ಯ ನಿಧನಕ್ಕೆ ಸಂತಾಪ ಸೂಚಿಸಿದ ಸಿನಿ ಗಣ್ಯರು

  |

  ನಾಡಿನ ಜನಪ್ರಿಯ ಕವಿ, ಚಿಂತಕ, ದಲಿತ ಹೋರಾಟಗಾರ, ಬಂಡಾಯ ಕವಿ ಸಿದ್ದಲಿಂಗಯ್ಯ ಇಂದು ನಿಧನ ಹೊಂದಿದ್ದಾರೆ.

  ಅದ್ಭುತ ಕವಿಯಾಗಿದ್ದ ಸಿದ್ದಲಿಂಗಯ್ಯನವರು ಚಿತ್ರರಂಗದಲ್ಲಿ ಸಾಕಷ್ಟು ಗೆಳೆಯರನ್ನು ಹೊಂದಿದ್ದರು. ಸಿದ್ದಲಿಂಗಯ್ಯನವರ ಹಾಡನ್ನು ಕೆಲವು ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿತ್ತು. ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿಯನ್ನು ಸಹ ಸಿದ್ದಲಿಂಗಯ್ಯನವರು 1984 ರಲ್ಲಿ ಪಡೆದಿದ್ದರು.

  ಕೆಲ ಯುವ ನಟರು ಸೇರಿದಂತೆ ಹಲವು ಸಿನಿಮಾ ಗಣ್ಯರು ದಲಿತ ಸಾಹಿತಿ ಸಿದ್ದಲಿಂಗಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕೆಲವು ಹಿರಿಯರು ಸಿದ್ದಲಿಂಗಯ್ಯನವೊರಡನೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

  ನಿಮ್ಮೊಡಲೆ ಕಳೆದ ಕ್ಷಣಗಳು ಅಸಂಖ್ಯ: ನಾಗತಿಹಳ್ಳಿ ಚಂದ್ರಶೇಖರ್

  ನಿಮ್ಮೊಡಲೆ ಕಳೆದ ಕ್ಷಣಗಳು ಅಸಂಖ್ಯ: ನಾಗತಿಹಳ್ಳಿ ಚಂದ್ರಶೇಖರ್

  'ಆಸ್ಪತ್ರೆಯಿಂದ ಬಂದು ಆ ಅನುಭವಗಳನ್ನು ಹಾಸ್ಯಪ್ರಜ್ಞೆಯಿಂದ ಹಂಚಿಕೊಳ್ಳುತ್ತೀರಿ ಅಂದು ಕೊಂಡಿದ್ದೆ. ಹೊರಟೇಬಿಟ್ಟಿರಿ. ನಮ್ಮ ಸರಳ ವಿವಾಹ ನಿಮ್ಮ ಉಪಸ್ಥಿತಿಯಲ್ಲಿ ಜರುಗಿತ್ತು. ನಿಮ್ಮ ಗೀತೆ ‘ಆ ಬೆಟ್ಟದಲ್ಲಿ'ನನ್ನ ಚಿತ್ರದಲ್ಲಿ ಬಳಸಿಕೊಂಡಿದ್ದೆ. ನಿಮ್ಮೊಡನೆ ಕಳೆದ ಖಾಸಗಿ/ ಸಾಹಿತ್ಯಿಕ ಕ್ಷಣಗಳು ಅಸಂಖ್ಯ/ಅಮೂಲ್ಯ.ಯಾವುದನ್ನು ನೆನೆಯಲಿ? ಕಂಬನಿ' ಎಂದಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.

  'ಇಕ್ರಲಾ ಒದಿರ್ಲಾ' ನೆನಪಿಸಿಕೊಂಡ ನೀನಾಸಂ ಸತೀಶ್

  'ಇಕ್ರಲಾ ಒದಿರ್ಲಾ' ನೆನಪಿಸಿಕೊಂಡ ನೀನಾಸಂ ಸತೀಶ್

  'ಇಕ್ರಲಾ ಒದಿರ್ಲಾ ಈ ನನ್ಮಕ್ಳನ್ನ ಎನ್ನುತ್ತಾ,ಶೋಷಿತ ವರ್ಗಕ್ಕೆ ಧ್ವನಿಯಾಗಿದ್ದ, ಈ ನಾಡಿನ ಸಾಕ್ಷಿಪ್ರಜ್ಞೆ ಡಾ.ಸಿದ್ಧಲಿಂಗಯ್ಯನವರ ನಿಧನ ಈ ನಾಡಿಗೆ ತುಂಬಲಾರದ ನಷ್ಟ. ಶೋಷಿತರ ಪರ ಧ್ವನಿಯೊಂದು ಕಳಚಿದ್ದು ವೈಯಕ್ತಿಕವಾಗಿ ನನಗೂ ನೋವಿನ ಸಂಗತಿ. ಹೋಗ್ಬನ್ನಿ ನಾಡಿನ ಚೇತನವೆ' ಎಂದಿರುವುದು ನಟ ನೀನಾಸಂ ಸತೀಶ್.

  ಮನಸ್ಸಿಗೆ ಆಘಾತವಾಗಿದೆ: ನಿಖಿಲ್

  ಮನಸ್ಸಿಗೆ ಆಘಾತವಾಗಿದೆ: ನಿಖಿಲ್

  'ಖ್ಯಾತ ಕವಿ, ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ ನವರು ವಿಧಿವಶರಾಗಿರುವ ವಿಷಯ ತಿಳಿದು ಮನಸ್ಸಿಗೆ ಆಘಾತವಾಗಿದೆ. ಡಾ.ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ.

  ಮಾಳವಿಕ ಅವಿನಾಶ್, ಸಿ.ಪಿ.ಯೋಗೇಶ್ವರ್ ಸಂತಾಪ

  ಮಾಳವಿಕ ಅವಿನಾಶ್, ಸಿ.ಪಿ.ಯೋಗೇಶ್ವರ್ ಸಂತಾಪ

  'ಸಿದ್ದಲಿಂಗಯ್ಯ ಅವರ ನಿಧನದಿಂದ ಈ ನಾಡಿಗೆ ಬಹುದೊಡ್ಡ ನಷ್ಟವಾಗಿದೆ. ದಲಿತ ಪರ ಹೋರಾಟದ ಮೂಲಕವೇ ಶ್ರಮಿಕರ ನೋವಿಗೆ ದನಿಯಾಗಿದ್ದ ಸಿದ್ದಲಿಂಗಯ್ಯ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ' ಎಂದಿದ್ದಾರೆ ನಟ, ರಾಜಕಾರಣಿ ಸಿಪಿ ಯೋಗೇಶ್ವರ್. 'ಅಯ್ಯೋ ದೇವರೆ ಅದೆಷ್ಟು ನಗು, ಅದೆಷ್ಟು ನೆನಪುಗಳು, ಅದೆಷ್ಟು ಹರಟೆ, ನಮ್ಮ ನೆರೆಯ ಮನೆಯವರು ಮೇಷ್ಟ್ರು, ನಮಗೆ ಮತ್ತು ಕನ್ನಡಕ್ಕೆ ನಿಮ್ಮ ಅಗಲಿಕೆ ಸದಾ ಕಾಡಲಿದೆ ಸರ್' ಎಂದಿದ್ದಾರೆ ನಟಿ ಮಾಳವಿಕಾ ಅವಿನಾಶ್.

  Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada
  ಹೋಗಿ ಬನ್ನಿ ಕವಿಗಳೆ: ಸಂಚಾರಿ ವಿಜಯ್

  ಹೋಗಿ ಬನ್ನಿ ಕವಿಗಳೆ: ಸಂಚಾರಿ ವಿಜಯ್

  ನಟ ಸಂಚಾರಿ ವಿಜಯ್ ಸಹ ಫೇಸ್‌ಬುಕ್ ಪೋಸ್ಟ್ ಹಾಕಿದ್ದು, 'ನಿಮ್ಮ ಅಗಲಿಕೆ ಕನ್ನಡ ಸಾಹಿತ್ಯ ವಲಯಕ್ಕೆ ಅಪಾರ ನಷ್ಟ. ಹೋಗಿ ಬನ್ನಿ ಕವಿಗಳೇ' ಎಂದಿದ್ದಾರೆ. ಸಿದ್ದಲಿಂಗಯ್ಯನವರು ಕಳೆದ ತಿಂಗಳು ಕೊರೊನಾ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ದಿನಗಳ ಹೋರಾಟದ ಬಳಿಕ ಇಂದು ನಿಧನರಾಗಿದ್ದಾರೆ.

  English summary
  Poet Siddalingaiah died today. Movie celebrities express condolence. some share their memory which they had with Siddalingaih.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X