»   » ಸಂಕಲನಕಾರ ಅನಿಲ್ ಮಲ್ನಾಡ್ ವಿಧಿವಶ

ಸಂಕಲನಕಾರ ಅನಿಲ್ ಮಲ್ನಾಡ್ ವಿಧಿವಶ

Posted By:
Subscribe to Filmibeat Kannada

ಶಂಕರನಾಗ್ ಅವರ ಪರಮಾಪ್ತ ಜಗದೀಶ್ ಮಲ್ನಾಡ್ ಅವರ ಸೋದರ ಅನಿಲ್ ಮಲ್ನಾಡ್ (65) ಚೆನ್ನೈನ ತಮ್ಮ ನಿವಾಸದಲ್ಲಿ ನಿನ್ನೆ (ಮಾರ್ಚ್ 19) ನಿಧನರಾದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಸೂಕ್ಷ್ಮಮತಿಯ ಸಂಕಲನಕಾರರಾಗಿದ್ದ ಅನಿಲ್ ಮಲ್ನಾಡ್, ನಟಿ ಪದ್ಮಾ ಕುಮಟಾ ನಿರ್ಮಿಸಿದ್ದ 'ಅರಿವು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ತೆಲುಗಿನ 'ಸಿತಾರಾ' ಚಿತ್ರದ ಸಂಕಲನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಅನಿಲ್, ತಮ್ಮ ಜೀವಿತಾವಧಿಯಲ್ಲಿ ಸುಮಾರು 32 ಪ್ರಶಸ್ತಿಗಳನ್ನು ಪಡೆದಿದ್ದಾರೆ.

Movie Editor Anil Malnad passes away

ಆಂಧ್ರಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದಿರುವ ಅನಿಲ್ ಕನ್ನಡ ಚಿತ್ರರಂಗದ ಹೆಮ್ಮೆ. ದುರಂತವೆಂದರೆ ಕನ್ನಡ ಚಿತ್ರರಂಗದಲ್ಲಿ ಇವರಿಗೆ ಅವಕಾಶಗಳು ಸಿಗಲೇ ಇಲ್ಲ. ಹೀಗಾಗಿ ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಬಹುಬೇಡಿಕೆಯ ಸಂಕಲನಕಾರರಾಗಿದ್ದರು.

ಸೋದರ ಜಗದೀಶ್ ಮಲ್ನಾಡ್ ನಿರ್ಮಿಸಿದ 'ನಿಗೂಢ ರಹಸ್ಯ' ಚಿತ್ರದ ಸಂಕಲನ ಕೆಲಸವನ್ನು ಮಾಡಿರುವ ಅನಿಲ್ ಕನ್ನಡ, ತಮಿಳು, ತೆಲುಗು, ಹಿಂದಿ, ಒರಿಯಾ, ಕೊಂಕಣಿ, ತುಳು, ಬಂಗಾಳಿ ಚಿತ್ರಗಳಲ್ಲೂ ತೊಡಗಿಕೊಂಡಿದ್ದರು.

Movie Editor Anil Malnad passes away

ಸುಮಾರು 200 ಚಿತ್ರಗಳಿಗೆ ಕೆಲಸ ಮಾಡಿರುವ ಅನಿಲ್ ಮಲ್ನಾಡ್ ಪೂಜೆಗೆ ಸಲ್ಲದ ಕಾಡುಪುಷ್ಪವಾಗಿಯೇ ಅಗಲಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ.

English summary
Movie Editor Anil Malnad (65) passes away.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X