»   » ನಾಗತಿಹಳ್ಳಿ ಸಿನಿಮಾ ಶಾಲೆ ವತಿಯಿಂದ 'ಚಲನಚಿತ್ರ ಕಥಾ ರಚನೆ ಕಾರ್ಯಗಾರ'

ನಾಗತಿಹಳ್ಳಿ ಸಿನಿಮಾ ಶಾಲೆ ವತಿಯಿಂದ 'ಚಲನಚಿತ್ರ ಕಥಾ ರಚನೆ ಕಾರ್ಯಗಾರ'

Posted By:
Subscribe to Filmibeat Kannada

ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರ ಸಿನಿಮಾ ಶಾಲೆ 'ಟೆಂಟ್ ಸಿನಿಮಾ' ವತಿಯಿಂದ 'ಚಲನಚಿತ್ರ ಕಥಾ ರಚನೆಯ ಕಾರ್ಯಗಾರ' ಹಮ್ಮಿಕೊಳ್ಳಲಾಗಿದೆ.

ನಾಗತಿಹಳ್ಳಿ ಸಿನಿಮಾ ಶಾಲೆ 'ಟೆಂಟ್ ಸಿನಿಮಾ' ಸ್ಟುಡಿಯೋ ವತಿಯಿಂದ ಜುಲೈ 22-26 ವರೆಗೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗಾಗಿ ಚಿತ್ರ ಕಥೆ ರಚನೆ, ಸಂಭಾಷಣೆ ಬರೆಯುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಗಾರ 5 ದಿನಗಳ ಕಾಲ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ.

Movie Script Writing Workshop by Nagathihalli Cinema School

ಚಲನಚಿತ್ರ ಕಥಾ ರಚನೆ ಕಾರ್ಯಾಗಾರದಲ್ಲಿ ಡಾ. ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, 'ರಾಜಕುಮಾರ' ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್, 'ಶುದ್ಧಿ' ಚಿತ್ರ ನಿರ್ದೇಶಕ ಆದರ್ಶ್ ಹೆಚ್ ಈಶ್ವರಪ್ಪ, 'ಸ್ಮೈಲ್ ಪ್ಲೀಸ್' ಚಿತ್ರ ನಿರ್ದೇಶಕ ರಘು ಸಮರ್ಥ್ ರವರು ಪಾಲ್ಗೊಳ್ಳಲಿದ್ದು, ಸಿನಿಮಾ ಚಿತ್ರಕಥೆ ರಚನೆ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.

ಮುಂದಿನ ದಿನಗಳಲ್ಲಿ ನಾಗತಿಹಳ್ಳಿ ಸಿನಿಮಾ ಶಾಲೆ ವತಿಯಿಂದಲೇ 'ಸಿನಿಮಾ ಸೃಷ್ಠಿಯ ಸಮಗ್ರ ತರಬೇತಿ ಕಾರ್ಯಾಗಾರ'ವನ್ನು ಆಗಸ್ಟ್ 10-15 ರವರೆಗೆ ಮತ್ತು 'ಸಿನಿಮಾ ವಿತರಣೆ, ಬಿಡುಗಡೆ ಮತ್ತು ಮಾರುಕಟ್ಟೆಯ ಸಮಗ್ರ ಮಾಹಿತಿ ಮಾರ್ಗದರ್ಶನ ಕಾರ್ಯಾಗಾರ'ವನ್ನು ಆಗಸ್ಟ್ 26-27 ನೇ ದಿನಾಂಕದಂದು ಹಮ್ಮಿಕೊಂಡಿರುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರು ಕಾರ್ಯಾಗಾರಕ್ಕೆ ಹೋಗಿ ಚಿತ್ರ ಕಥೆ ರಚನೆ ಬಗ್ಗೆ ತರಬೇತಿ ಮತ್ತು ಮಾರ್ಗದರ್ಶನ ಪಡೆಯಲು ಈ ಕೆಳಗಿನ ವಿಳಾಸಕ್ಕೆ ಭೇಟಿ ಕೊಡಿ.

ವಿಳಾಸ: ಟೆಂಟ್ ಸಿನಿಮಾ, ನಾಗತಿಹಳ್ಳಿ ಸಿನಿಮಾ ಶಾಲೆ, ಬಿ.ಡಿ.ಎ ಕಾಂಪ್ಲೆಕ್ಸ್ ಹತ್ತಿರ, ಬನಶಂಕರಿ 2ನೇ ಹಂತ, ಬೆಂಗಳೂರು 560070

ದೂರವಾಣಿ ಸಂಪರ್ಕ: 080 6569 5500, +919900555255

English summary
Nagathihalli Cinema School has conducted 'Movie Script Writing Workshop' on july 22 to 26 for five days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada