ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಚಿತ್ರತಾರೆಯರ ನಮನ
ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಹೊಂದಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು (ಶನಿವಾರ) ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.
LIVE: ಜೇಟ್ಲಿ ಅಗಲಿಕೆಗೆ ಸಂತಾಪ, ಪತ್ನಿ, ಪುತ್ರಗೆ ಮೋದಿ ಕರೆ
ಅರುಣ್ ಜೇಟ್ಲಿ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್, ನಟಿ, ಸಂಸದೆ ಸುಮಲತಾ, ಗಾಯಕಿ ಲತಾ ಮಂಗೇಶ್ಕರ್, ಅನಿಲ್ ಕಪೂರ್, ಸಂಜಯ್ ದತ್, ಕರಣ್ ಜೋಹಾರ್, ಸನ್ನಿ ಡಿಯೋಲ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.
''ಒಂದೆರಡು ಬಾರಿ ಪಕ್ಷದ ಕಛೇರಿ ಹಾಗೂ ಸಾರ್ವಜನಿಕ ಭಾಷಣ ಕೇಳಿರುವೆ. ಅವರಿಗಿದ್ದ ರಾಜಕೀಯ ಭಾಷಣ ಶೈಲಿಗೆ ಮಾರು ಹೋಗಿದ್ದೆ. ಅದ್ಭುತ ವಾಗ್ಮಿ ರಾಜಕೀಯ ಚತುರ ಬಂದ ಕಾರ್ಯ ಮುಗಿಸಿ ತನ್ನ ಮನೆ ಸೇರಿದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.'' - ಜಗ್ಗೇಶ್, ನಟ, ಬಿಜೆಪಿ ನಾಯಕ

ಅರುಣ್ ಜೇಟ್ಲಿ ನಿಧನ: ರಾಷ್ಟ್ರ ನಾಯಕರ ಸಂತಾಪ
''ಅರುಣ್ ಜೇಟ್ಲಿ ಸಾವಿನ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರು ಅನುಕರಣೀಯ ಸಂಸದ. ಉತ್ತಮ ವಾಗ್ಮಿ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದೇನೆ.'' - ಸುಮಲತಾ, ನಟಿ, ಸಂಸದೆ
''ಅರುಣ್ ಜೇಟ್ಲಿ ಸಾವಿನ ಸುದ್ದಿ ಆಘಾತ ನೀಡಿದೆ. ಒಬ್ಬ ಅಧ್ಬುತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕಾಗಿ ನಾನು ಪ್ರಾರ್ಥನೆ ಮಾಡುತ್ತೇನೆ.'' - ಸಂಜಯ್ ದತ್, ನಟ
''ಅರುಣ್ ಜೇಟ್ಲಿ ಸಾವಿನ ವಿಷಯದಿಂದ ದುಃಖವಾಗಿದೆ. ಅವರು ಡೈನಮಿಕ್ ಲೀಡರ್. ಜಂಟಲ್ ಮ್ಯಾನ್ ಮತ್ತು ನಮ್ಮ ಮಾಜಿ ಹಣಕಾಸು ಸಚಿವರು. ಒಮ್ಮೆ ನನ್ನನ್ನು ಭೇಟಿ ಮಾಡಿ, ತುಂಬ ಹೊತ್ತು ಮಾತನಾಡಿದರು. ಆ ನೆನಪು ಸದಾ ಇರುತ್ತದೆ.'' - ಲತಾ ಮಂಗೇಶ್ಕರ್, ಖ್ಯಾತ ಗಾಯಕಿ
''ಇಪತ್ತು ವರ್ಷದ ಹಿಂದೆ ಅರುಣ್ ಜೇಟ್ಲಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಅಲ್ಲಿಂದ ಅವರ ಅಭಿಮಾನಿಯಾದೆ. ಅವರ ಸಾವು ದೇಶದ ದೊಡ್ಡ ನಷ್ಟ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ.'' - ಅನಿಲ್ ಕಪೂರ್, ನಟ


Click it and Unblock the Notifications











