For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ 'ಕೊರೊನಾ', ಪ್ರೇಕ್ಷಕರು ರೆಡಿನಾ?

  |

  ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿರುವ 'ಕೊರೊನಾ' ಈಗಾಗಲೇ ಸಾವಿರಾರು ಜೀವಗಳನ್ನು ಬಲಿ ಪಡೆದುಕೊಂಡಿದೆ. ಜನಗಳಲ್ಲಿ ಭೀತಿ ಉಂಟು ಮಾಡಿರುವ 'ಕೊರೊನಾ' ಕುರಿತಾಗಿ ಕನ್ನಡದಲ್ಲಿ ಸಿನಿಮಾ ಒಂದು ಬರಲಿದೆ.

  ಹೌದು, 'ಕೊರೊನಾ' ಹೆಸರನ್ನು ನೊಂದಾಯಿಸಲು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜಿ ಗುಜರಾಯಿಸಲಾಗಿದೆ. ಹೆಸರು ರಿಜಿಸ್ಟರ್ ಆಗುವುದು ಬಹತೇಕ ಖಚಿತ.

  ಫಿಲ್ಮ್ ಛೇಂಬರ್‌ನ ಉಪಾಧ್ಯಕ್ಷ, ನಿರ್ಮಾಪಕ ಉಮೇಶ್ ಬಣಕಾರ್ ಅವರು ಕೊರೊನಾ ಟೈಟಲ್ ನೊಂದಾವಣಿಗೆ ಅರ್ಜಿ ಹಾಕಿದ್ದಾರೆ. ಈ ಚಿತ್ರವನ್ನು ಅವರು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಲಿದ್ದಾರಂತೆ.

  ಎರಡು ಭಾಷೆಯಲ್ಲಿ ತಯಾರಾಗುತ್ತಿದೆ ಸಿನಿಮಾ

  ಎರಡು ಭಾಷೆಯಲ್ಲಿ ತಯಾರಾಗುತ್ತಿದೆ ಸಿನಿಮಾ

  ಕನ್ನಡದಲ್ಲಿ 'ಕೊರೊನಾ' ಎಂದು ನಿರ್ಮಾಣವಾದರೆ ಹಿಂದಿಯಲ್ಲಿ 'ಡೆಡ್ಲಿ ಕೊರೊನಾ' ಹೆಸರಿನಲ್ಲಿ ಚಿತ್ರ ತೆರೆಗೆ ಬರಲಿದೆ. ಈ ಹಿಂದೆ 'ಬಿಸಿರಕ್ತ' ಸಿನಿಮಾ ನಿರ್ದೇಶಿಸಿದ್ದ ಶಿವಕುಮಾರ್ ಎಂಬುವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

  ತಾರಾಗಣ ಇನ್ನೂ ಅಂತಿಮವಾಗಿಲ್ಲ

  ತಾರಾಗಣ ಇನ್ನೂ ಅಂತಿಮವಾಗಿಲ್ಲ

  ಚಿತ್ರದ ನಾಯಕ-ನಾಯಕಿ ಉಳಿಕೆ ತಾರಾಗಾಣ ಇನ್ನಷ್ಟೆ ಅಂತಿಮವಾಗಬೇಕಿದೆ. ಕತೆ ಸಹ ಇನ್ನೂ ಪ್ರಾರಂಭದ ಹಂತದಲ್ಲಿದೆ ಇವುಗಳ ನಂತರ ಸಿನಿಮಾ ಸೆಟ್ಟೇರಲಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವೇ ಹಿಡಿಯಲಿದೆ.

  ಕೊರೊನಾ ಭೀತಿಯನ್ನು 'ಎನ್‌ಕ್ಯಾಶ್' ಮಾಡಿಕೊಳ್ಳುವುದು ಸರಿಯೇ?

  ಕೊರೊನಾ ಭೀತಿಯನ್ನು 'ಎನ್‌ಕ್ಯಾಶ್' ಮಾಡಿಕೊಳ್ಳುವುದು ಸರಿಯೇ?

  ಕೊರೊನಾ ಭೀತಿ ಎಲ್ಲೆಡೆ ಆವರಿಸಿರುವ ಈ ಹೊತ್ತಿನಲ್ಲಿ ಜನರ ಭೀತಿಯನ್ನು ಎನ್‌ಕ್ಯಾಶ್ ಮಾಡಿಕೊಂಡು ಲಾಭದ ಉದ್ದೇಶದಿಂದ ಕೊರೊನಾ ಸಿನಿಮಾ ಮಾಡುತ್ತಿರುವುದು ನೈತಿಕವಾಗಿ ಸರಿಯಾ? ಎಂಬ ಪ್ರಶ್ನೆ ಮೂಡಿದೆ. ಅಷ್ಟೆ ಅಲ್ಲದೆ ಆ ರೀತಿಯ ಸಿನಿಮಾಗಳನ್ನು ಈ ಸಮಯದಲ್ಲಿ ಜನರು ಒಪ್ಪಿಕೊಳ್ಳುತ್ತಾರಾ ಎಂಬುದು ಸಹ ಕಾದು ನೋಡಬೇಕಾದ ವಿಷಯ.

  ಕೇರಳದ ನಿಫಾ ಬಗ್ಗೆ ತಯಾರಾಗಿತ್ತು ಸಿನಿಮಾ

  ಕೇರಳದ ನಿಫಾ ಬಗ್ಗೆ ತಯಾರಾಗಿತ್ತು ಸಿನಿಮಾ

  ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡು ಹತ್ತಾರು ಮಂದಿಯ ಸಾವಿಗೆ ಕಾರಣವಾಗಿತ್ತು. ಆಗ ಮಲೆಯಾಳಂ ನಲ್ಲಿ 'ವೈರಸ್' ಹೆಸರಿನ ಸಿನಿಮಾ ಬಂದು ಯಶಸ್ವಿಯಾಗಿತ್ತು, ಜೊತೆಗೆ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

  English summary
  Producer Umesh Banakar applied to register 'corona' name. He is making corona movie in Kannada and in Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X