For Quick Alerts
  ALLOW NOTIFICATIONS  
  For Daily Alerts

  ಬರ್ತ್ ಡೇ ವಿಶೇಷ : SRK ಅಭಿಮಾನಿಗಳಿಗೆ ನಾಳೆ ಹಬ್ಬದೂಟ

  |
  SRK ಅಭಿಮಾನಿಗಳಿಗೆ ನಾಳೆ ಹಬ್ಬದೂಟ | FILMIBEAT KANNADA

  ಹ್ಯಾಪಿ ಬರ್ತ್ ಡೇ ಶಿವಣ್ಣ..... ಎಂದು ಹೇಳುವ ಸಮಯ ಮತ್ತೆ ಬಂದಿದೆ. ನಾಳೆ (ಜುಲೈ 12) ನಟ ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ.

  'ಶಿವಣ್ಣ' ಎಂಬ ಪದಕ್ಕೆ ಸಮಾನಾರ್ಥಕ ಪದ 'ಸಿನಿಮಾ' ಎಂದು ಇರಬಹುದೇನೋ... ಯಾಕೆಂದರೆ ಶಿವರಾಜ್ ಕುಮಾರ್ ಪ್ರತಿ ದಿನವೂ ಸಿನಿಮಾ ಬಗ್ಗೆ ಯೋಚಿಸುವ, ಅದರ ಕೆಲಸದಲ್ಲಿಯೇ ತೊಡಗುವ ವ್ಯಕ್ತಿ.

  ಕೊನೆಗೂ ಸೋಷಿಯಲ್ ಮೀಡಿಯಾಗೆ ಬಂದ ಸೆಂಚುರಿ ಸ್ಟಾರ್

  ಸಾಮಾನ್ಯವಾಗಿ ಶಿವಣ್ಣನ ಹುಟ್ಟುಹಬ್ಬಕ್ಕೆ ಪ್ರತಿ ವರ್ಷವೂ ಒಂದಷ್ಟು ಸಿನಿಮಾಗಳು ಲಾಂಚ್ ಆಗುತ್ತಿದೆ. ಒಂದಷ್ಟು ಸಿನಿಮಾಗಳ ಟ್ರೇಲರ್, ಪೋಸ್ಟರ್ ರಿಲೀಸ್ ಆಗುತ್ತವೆ. ಆ ಸಂಪ್ರದಾಯ ಈ ಬಾರಿಯೂ ಮುಂದುವರೆದಿದೆ. ಕರುನಾಡ ಚಕ್ರವರ್ತಿಯ 57 ರ ಸಂಭ್ರಮವನ್ನು ಕೆಲ ಸಿನಿಮಾಗಳು ಕಲರ್ ಫುಲ್ ಮಾಡಲಿವೆ.

  ಪಿ ವಾಸು ಚಿತ್ರದ ಟೈಟಲ್

  ಪಿ ವಾಸು ಚಿತ್ರದ ಟೈಟಲ್

  'ಶಿವಲಿಂಗ' ಸಿನಿಮಾದ ಬಳಿಕ ಮತ್ತೆ ನಿರ್ದೇಶಕ ಪಿ ವಾಸು ಹಾಗೂ ಶಿವರಾಜ್ ಕುಮಾರ್‌ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭ ಆಗಿದೆ. ಈ ಚಿತ್ರಕ್ಕೆ 'ಆನಂದ್' ಎಂಬ ಹೆಸರು ಇಡಲಾಗಿದೆ ಎನ್ನುವ ಸುದ್ದಿ ಇತ್ತು. ಆದರೆ, ನಾಳೆ ಅಧಿಕೃತವಾಗಿ ಚಿತ್ರತಂಡ ಶೀರ್ಷಿಕೆ ಘೋಷಣೆ ಮಾಡುತ್ತಿದೆ. ರಚಿತಾ ರಾಮ್ ಈ ಚಿತ್ರದ ನಾಯಕಿ ಆಗಿದ್ದಾರೆ.

  ಆರ್ ಚಂದ್ರು ಸಿನಿಮಾ ಅನೌನ್ಸ್

  ಆರ್ ಚಂದ್ರು ಸಿನಿಮಾ ಅನೌನ್ಸ್

  'ಮೈಲಾರಿ' ಸಿನಿಮಾದ ಯಶಸ್ಸಿನ ಬಳಿಕ ಆರ್ ಚಂದ್ರು ಮತ್ತು ಶಿವರಾಜ್ ಕುಮಾರ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆಯೇ 'ಬಾದ್ ಷಾ' ಚಿತ್ರವನ್ನು ಶಿವಣ್ಣನಿಗೆ ಚಂದ್ರು ಮಾಡಬೇಕಿತ್ತು. ಆದರೆ, ಈಗ ಶಿವಣ್ಣನ ಕಾಲ್ ಶೀಟ್ ಚಂದ್ರುಗೆ ಸಿಕ್ಕಿದೆ. ಇವರಿಬ್ಬರ ಹೊಸ ಸಿನಿಮಾ ನಾಳೆ ಘೋಷಣೆ ಆಗಲಿದೆ. ಸಿನಿಮಾಗೆ 'ಜಂಗಮ' ಎಂಬ ಟೈಟಲ್ ಫಿಕ್ಸ್ ಆಗಿದೆ ಎನ್ನುವ ಗಾಸಿಪ್ ಇದೆ.

  ಆಪರೇಷನ್ ಸಕ್ಸಸ್ : ಫಲಿಸಿತು ಶಿವಣ್ಣನ ಅಭಿಮಾನಿಗಳ ಪ್ರಾರ್ಥನೆ

  #SRK122 ಚಿತ್ರ

  #SRK122 ಚಿತ್ರ

  ಶಿವರಾಜ್ ಕುಮಾರ್ ಅಭಿನಯದ 122 ನೇ ಸಿನಿಮಾದ ಫಸ್ಟ್ ಲುಕ್ ಇಂದು ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆಯಾಗುತ್ತಿದೆ. ಎ ಹರ್ಷ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ಭಜರಂಗಿ' ಹಾಗೂ 'ವಜ್ರಕಾಯ' ಸಿನಿಮಾಗಳ ಬಳಿಕ ಈ ಸಿನಿಮಾ ಹರ್ಷ ಹಾಗೂ ಶಿವಣ್ಣನ ಕಾಂಬಿನೇಶನ್ ನಲ್ಲಿ ಬರುತ್ತಿದೆ.

  ಮಹಾನ್ ಕಲಾವಿದ

  ಮಹಾನ್ ಕಲಾವಿದ

  ಶಿವರಾಜ್ ಕುಮಾರ್ ಅಬಿಮಾನಿಗಳು ಮಹಾನ್ ಕಲಾವಿದ ಎಂಬ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಪ್ರೀತಿಯ ಬಾಸ್ ಗೆ ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ. ಪಿ ಆರ್ ಕೆ ಆಡಿಯೋನಲ್ಲಿ ಈ ಹಾಡು ನಾಳೆ ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗುತ್ತಿದೆ. ಚೇತನ್ ನಾಯಕ್ ಈ ಹಾಡನ್ನು ಹಾಡಿದ್ದಾರೆ.

  English summary
  Movies announcing on the occasion of kannada actor Shivaraj Kumar birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X