Movies running in Bangalore: ಆಗಸ್ಟ್ 19ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ?
ನಿನ್ನೆ ( ಆಗಸ್ಟ್ 18 ) ಶುಕ್ರವಾರ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳು ಬೆಳ್ಳಿತೆರೆಗೆ ಅಪ್ಪಳಿಸಿವೆ. ಕನ್ನಡದಲ್ಲಿ ಶಾನ್ವಿ ಶ್ರೀವಾಸ್ತವ ಅಭಿನಯದ ಬ್ಯಾಂಗ್ ಹಾಗೂ ಗುಲ್ಟೂ ನವೀನ್ ಕೃಷ್ಣ ನಟನೆಯ ಕ್ಷೇತ್ರಪತಿ ಸಿನಿಮಾಗಳು ತೆರೆಗೆ ಬಂದಿವೆ. ಅತ್ತ ತೆಲುಗಿನಲ್ಲಿ ಮಿಸ್ಟರ್ ಪ್ರಗ್ನೆಂಟ್ ಹಾಗೂ ಪ್ರೇಮ್ ಕುಮಾರ್ ಚಿತ್ರಗಳು ಬಿಡುಗಡೆಯಾಗಿವೆ. ಅತ್ತ ಹಿಂದಿಯ ಗೂಮರ್ ಚಿತ್ರವೂ ಸಹ ತೆರೆಗೆ ಬಂದಿದೆ.
ಹೀಗೆ ಈ ವಾರ ಹಲವಾರು ಸಿನಿಮಾಗಳು ತೆರೆಗೆ ಬಂದಿದ್ದರೂ ಸಹ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಕಳೆದ ವಾರ ಬಿಡುಗಡೆಗೊಂಡ ಸಿನಿಮಾಗಳ ಸದ್ದೇ ಹೆಚ್ಚಾಗಿ ಕೇಳಿಬರುತ್ತಿದೆ. ಹೌದು, ಕಳೆದ ವಾರ ಬಿಡುಗಡೆಯಾಗಿದ್ದ ತಮಿಳಿನ ಜೈಲರ್ ಹಾಗೂ ಹಿಂದಿಯ ಗದರ್ 2 ಚಿತ್ರಗಳು ದಾಖಲೆಯ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದನ್ನು ಈ ವಾರವೂ ಸಹ ಮುಂದುವರಿಸಿವೆ.

ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿಯೂ ಸಹ ಈ ಚಿತ್ರಗಳು ತಮ್ಮ ಅಬ್ಬರವನ್ನು ಮುಂದುವರೆಸಿದ್ದು, ಎರಡನೇ ವಾರವೂ ದಾಖಲೆ ಪ್ರಮಾಣದ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿವೆ. ಹಾಗಿದ್ದರೆ, ಇಂದು ( ಆಗಸ್ಟ್ 19 ) ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
*ನರ್ತಕಿ ಚಿತ್ರಂಮದಿರ, ಕೆಜಿ ರಸ್ತೆ: ಗದರ್ 2 ( ಹಿಂದಿ ) 5 ಪ್ರದರ್ಶನಗಳು
*ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಬೇಬಿ ( ತೆಲುಗು ) 2 ಪ್ರದರ್ಶನಗಳು ಹಾಗೂ ಕೌಸಲ್ಯಾ ಸುಪ್ರಜಾ ರಾಮ ( ಕನ್ನಡ ) 2 ಪ್ರದರ್ಶನಗಳು
*ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಜೈಲರ್ ( ತೆಲುಗು ) 5 ಪ್ರದರ್ಶನಗಳು
*ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಕ್ಷೇತ್ರಪತಿ ( ಕನ್ನಡ ) 4 ಪ್ರದರ್ಶನಗಳು
*ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ಭೋಳ ಶಂಕರ್ ( ತೆಲುಗು ) ಐದು ಪ್ರದರ್ಶನಗಳು
*ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಬ್ಯಾಂಗ್ ( ಕನ್ನಡ ) ನಾಲ್ಕು ಪ್ರದರ್ಶನಗಳು
*ಊರ್ವಶಿ: ಜೈಲರ್ ( ತಮಿಳು ) 4 ಪ್ರದರ್ಶನಗಳು
*ಅಭಿನಯ, ಕೆಜಿ ರಸ್ತೆ: ಜೈಲರ್ ( ಕನ್ನಡ ) 5 ಪ್ರದರ್ಶನಗಳು
*ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಜೈಲರ್ ( ತಮಿಳು ) 5 ಪ್ರದರ್ಶನಗಳು.
*ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಕೌಸಲ್ಯಾ ಸುಪ್ರಜಾ ರಾಮ ( ಕನ್ನಡ ) 4 ಪ್ರದರ್ಶನಗಳು, ನಮೋ ಭೂತಾತ್ಮ 2 ( ಕನ್ನಡ ) 1 ಪ್ರದರ್ಶನ, ಕ್ಷೇತ್ರಪತಿ ( ಕನ್ನಡ ) 4 ಪ್ರದರ್ಶನಗಳು ಹಾಗೂ ಜೈಲರ್ ( ಕನ್ನಡ ) ಒಂದು ಪ್ರದರ್ಶನ.
*ಮಹದೇಶ್ವರ ಚಿತ್ರಮಂದಿರ, ಬನಶಂಕರಿ: ಮಹದೇಶ್ವರ ( ತಮಿಳು ) 4 ಪ್ರದರ್ಶನಗಳು.


Click it and Unblock the Notifications











