Movies running in Bangalore: ಆಗಸ್ಟ್ 26ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ?
ನಿನ್ನೆ ( ಆಗಸ್ಟ್ 25 ) ಶುಕ್ರವಾರ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳು ಬೆಳ್ಳಿತೆರೆಗೆ ಅಪ್ಪಳಿಸಿವೆ. ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಟೋಬಿ ಬಿಡುಗಡೆಗೊಂಡಿದೆ. ಅತ್ತ ತೆಲುಗಿನಲ್ಲಿ ಕನ್ನಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಡಬಿಂಗ್ ಚಿತ್ರ ಬಾಯ್ಸ್ ಹಾಸ್ಟೆಲ್ ಬಿಡುಗಡೆಯಾಗಿವೆ. ಅತ್ತ ಹಿಂದಿಯ ಡ್ರೀಮ್ ಗರ್ಲ್ 2 ಚಿತ್ರವೂ ಸಹ ತೆರೆಗೆ ಬಂದಿದೆ. ಇನ್ನು ಮಾಲಿವುಡ್‌ನಲ್ಲಿ ದುಲ್ಕರ್ ಸಲ್ಮಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕಿಂಗ್ ಆಫ್ ಕೊತ್ತಾ ಸಹ ಬಿಡುಗಡೆಗೊಂಡಿದೆ.
ಹೀಗೆ ಈ ವಾರ ಹಲವಾರು ಸಿನಿಮಾಗಳು ತೆರೆಗೆ ಬಂದಿದ್ದರೂ ಸಹ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಹಿಂದಿನ ವಾರ ಬಿಡುಗಡೆಗೊಂಡ ಸಿನಿಮಾಗಳ ಸದ್ದೇ ಹೆಚ್ಚಾಗಿ ಕೇಳಿಬರುತ್ತಿದೆ. ಹೌದು, ಕಳೆದ ವಾರ ಬಿಡುಗಡೆಯಾಗಿದ್ದ ತಮಿಳಿನ ಜೈಲರ್ ಹಾಗೂ ಹಿಂದಿಯ ಗದರ್ 2 ಚಿತ್ರಗಳು ದಾಖಲೆಯ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದನ್ನು ಈ ವಾರವೂ ಸಹ ಮುಂದುವರಿಸಿವೆ.

ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿಯೂ ಸಹ ಈ ಚಿತ್ರಗಳು ತಮ್ಮ ಅಬ್ಬರವನ್ನು ಮುಂದುವರೆಸಿದ್ದು, ಎರಡನೇ ವಾರವೂ ದಾಖಲೆ ಪ್ರಮಾಣದ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿವೆ. ಹಾಗಿದ್ದರೆ, ಇಂದು ( ಆಗಸ್ಟ್ 26 ) ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ನರ್ತಕಿ ಚಿತ್ರಂಮದಿರ, ಕೆಜಿ ರಸ್ತೆ: ಟೋಬಿ ( ಹಿಂದಿ ) 4 ಪ್ರದರ್ಶನಗಳು ಹಾಗೂ ರಾಮಚಂದ್ರ ಅಂಡ್ ಕೋ ( ಮಲಯಾಳಂ ) ಒಂದು ಪ್ರದರ್ಶನ
ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಬೆದುರುಲಂಕಂ 2012 ( ತೆಲುಗು ) 2 ಪ್ರದರ್ಶನಗಳು ಹಾಗೂ ಗದರ್ 2 ( ಹಿಂದಿ ) ಮೂರು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಜೈಲರ್ ( ತೆಲುಗು ) 5 ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಕೌಸಲ್ಯ ಸುಪ್ರಜ ರಾಮ ( ಕನ್ನಡ ) 4 ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ಗಾಂಡೀವಧಾರಿ ಅರ್ಜುನ ( ತೆಲುಗು ) ಐದು ಪ್ರದರ್ಶನಗಳು
ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಕಿಂಗ್ ಆಫ್ ಕೊತ್ತಾ ( ತೆಲುಗು ) ಮೂರು ಪ್ರದರ್ಶನಗಳು ಹಾಗೂ ಕಿಂಗ್ ಆಫ್ ಕೊತ್ತಾ ( ಮಲಯಾಳಂ ) ಒಂದು ಪ್ರದರ್ಶನ
ಊರ್ವಶಿ: ಜೈಲರ್ ( ತಮಿಳು ) 4 ಪ್ರದರ್ಶನಗಳು
ಅಭಿನಯ, ಕೆಜಿ ರಸ್ತೆ: ಜೈಲರ್ ( ಕನ್ನಡ ) ಮೂರು ಪ್ರದರ್ಶನಗಳು ಹಾಗೂ ಡ್ರೀಮ್ ಗರ್ಲ್ 2 ( ಹಿಂದಿ ) ಎರಡು ಪ್ರದರ್ಶನಗಳು
ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಬೆದುರುಲಂಕಂ 2012 ( ತೆಲುಗು ) ಒಂದು ಪ್ರದರ್ಶನ, . ಗಾಂಡೀವಧಾರಿ ಅರ್ಜುನ ( ತೆಲುಗು ) ಎರಡು ಪ್ರದರ್ಶನಗಳು ಹಾಗೂ ಜೈಲರ್ ( ತಮಿಳು) ಎರಡು ಪ್ರದರ್ಶನ
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಕ್ಷೇತ್ರಪತಿ ( ಕನ್ನಡ ) ಎರಡು ಪ್ರದರ್ಶನಗಳು, ಟೋಬಿ ( ಕನ್ನಡ ) ಐದು ಪ್ರದರ್ಶನಗಳು ಹಾಗೂ ಕೌಸಲ್ಯ ಸುಪ್ರಜಾ ರಾಮ ( ಕನ್ನಡ ) ಒಂದು ಪ್ರದರ್ಶನ.
ಮಹದೇಶ್ವರ ಚಿತ್ರಮಂದಿರ, ಬನಶಂಕರಿ: ಟೋಬಿ ( ತಮಿಳು ) ಮೂರು ಪ್ರದರ್ಶನಗಳು, ಜೈಲರ್ ( ತಮಿಳು ) ಒಂದು ಪ್ರದರ್ಶನ ಹಾಗೂ ಕಿಂಗ್ ಆಫ್ ಕೊತ್ತಾ ( ಮಲಯಾಳಂ ) ಒಂದು ಪ್ರದರ್ಶನ.


Click it and Unblock the Notifications











