Movies Running in Bengaluru: ಆಗಸ್ಟ್ 5ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?

ನಿನ್ನೆ ( ಆಗಸ್ಟ್ 4 ) ತಿಂಗಳ ಮೊದಲ ಶುಕ್ರವಾರ ವಿವಿಧ ಭಾಷೆಗಳ ಹಲವಾರು ಸಿನಿಮಾಗಳು ತೆರೆಗೆ ಬಂದಿದ್ದು, ಕೆಲ ಸಿನಿಮಾಗಳು ಒಳ್ಳೆಯ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವು ಚಿತ್ರಗಳು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿವೆ.

ಕನ್ನಡದಲ್ಲಿ ರಾಗಿಣಿ ನಟನೆಯ ಶೀಲಾ ತೆರೆಗೆ ಬಂದಿದ್ದರೆ, ತೆಲುಗಿನಲ್ಲಿ ಎಂಎಸ್ ಧೋನಿ ನಿರ್ಮಾಣದ ಲೆಟ್ಸ್ ಗೆಟ್ ಮ್ಯಾರೀಡ್ ತಮಿಳು ಚಿತ್ರದ ತೆಲುಗು ಡಬಿಂಗ್ ಚಿತ್ರ ಬಿಡುಗಡೆಗೊಂಡಿದೆ. ತಮಿಳಿನಲ್ಲಿ ವೆಬ್ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಗೊಂಡಿವೆ. ಹೀಗೆ ಹಲವಾರು ಹೊಸ ಚಿತ್ರಗಳು ಬಿಡುಗಡೆಗೊಂಡರೂ ಸಹ ಚಿತ್ರಮಂದಿರಗಳಲ್ಲಿ ಮಾತ್ರ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದ ಚಿತ್ರಗಳದ್ದೇ ಸದ್ದು ಕೇಳಿಬರುತ್ತಿದೆ.

 Movies running in Bangalore: List of movies running in Bangalore on August 5th

ಹೌದು, ಕಳೆದ ತಿಂಗಳು ಬಿಡುಗಡೆಗೊಂಡಿದ್ದ ಕನ್ನಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ತೆಲುಗಿನ ಬೇಬಿ, ಹಾಲಿವುಡ್‌ನ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಇನ್ನೂ ಸಹ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಈ ವಾರವೂ ತಮ್ಮ ವೇಗವನ್ನು ತಗ್ಗಿಸುವ ಹಾಗೆ ಕಾಣುತ್ತಿಲ್ಲ. ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಮೇಲಿನ ಎಲ್ಲಾ ಚಿತ್ರಗಳೂ ಸಹ ಬಿಡುಗಡೆಗೊಂಡಿದ್ದು, ಇಂದು ( ಆಗಸ್ಟ್ 5 ) ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಂಮದಿರ, ಕೆಜಿ ರಸ್ತೆ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ( ಕನ್ನಡ ) ೪ ಪ್ರದರ್ಶನಗಳು

ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಬೇಬಿ ( ತೆಲುಗು ) 4 ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ನಮೋ ಭೂತಾತ್ಮ 2 ( ಕನ್ನಡ ) 4 ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಶೀಲಾ ( ಕನ್ನಡ ) 4 ಪ್ರದರ್ಶನಗಳು ಹಾಗೂ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ( ಹಿಂದಿ ) ಒಂದು ಪ್ರದರ್ಶನ

ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ಬ್ರೋ ( ತೆಲುಗು ) ಐದು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಕೌಸಲ್ಯಾ ಸುಪ್ರಜಾ ರಾಮ ( ಕನ್ನಡ ) ನಾಲ್ಕು ಪ್ರದರ್ಶನಗಳು

ಊರ್ವಶಿ: ಬ್ರೋ ( ತೆಲುಗು ) ಎರಡು ಪ್ರದರ್ಶನಗಳು ಹಾಗೂ ಮೆಗ್ 2 ( ಇಂಗ್ಲಿಷ್ ) ಎರಡು ಪ್ರದರ್ಶನಗಳು

ಅಭಿನಯ, ಕೆಜಿ ರಸ್ತೆ: ಈ ಪಟ್ಟಣಕ್ಕೆ ಏನಾಗಿದೆ ( ಕನ್ನಡ ) ಒಂದು ಪ್ರದರ್ದನ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ( ಹಿಂದಿ ) ಎರಡು ಪ್ರದರ್ಶನಗಳು ಹಾಗೂ ಮೆಗ್ 2 ( ಇಂಗ್ಲಿಷ್ ) ಎರಡು ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಕೃಷ್ಣ ಗಾಡು ಅಂಟೆ ಒಕ ರೇಂಜ್ ( ತೆಲುಗು ) ಒಂದು ಪ್ರದರ್ಶನ, ಬ್ರೋ ( ತೆಲುಗು ) ಒಂದು ಪ್ರದರ್ಶನ ಹಾಗೂ ಬೇಬಿ ( ತೆಲುಗು ) ಮೂರು ಪ್ರದರ್ಶನಗಳು.

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ( ಕನ್ನಡ ) 5 ಪ್ರದರ್ಶನಗಳು, ಕೌಸಲ್ಯಾ ಸುಪ್ರಜಾ ರಾಮ ( ಕನ್ನಡ ) 4 ಪ್ರದರ್ಶನಗಳು ಹಾಗೂ ನಮೋ ಭೂತಾತ್ಮ 2 ( ಕನ್ನಡ ) ಒಂದು ಪ್ರದರ್ಶನ.

More from Filmibeat

English summary
Movies running in Bangalore: List of movies running in Bangalore on August 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X