ನವೆಂಬರ್ 12ರಂದು ಬೆಂಗಳೂರಿನ ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪಟ್ಟಿ

Movies running in Bengaluru KG Roads theatres as on November 12

ನಿನ್ನೆ ( ನವೆಂಬರ್ 11 ) ಕನ್ನಡದಲ್ಲಿ ನಾಲ್ಕು ಚಿತ್ರಗಳು ಸೇರಿದಂತೆ ಇತರೆ ಭಾಷೆಗಳ ಹಲವಾರು ಚಿತ್ರಗಳು ಬಿಡುಗಡೆಗೊಂಡಿವೆ. ಸ್ಯಾಂಡಲ್‌ವುಡ್‌ನ ಓ, ದಿಲ್ ಪಸಂದ್, ಹುಬ್ಬಳ್ಳಿ ಡಾಬಾ, ರಾಣ ಚಿತ್ರಗಳು ತೆರೆ ಕಂಡಿವೆ. ಅತ್ತ ಸಮಂತಾ ರುಥ್ ಪ್ರಭು ಅಭಿನಯದ ತೆಲುಗು ಚಿತ್ರ ಯಶೋಧಾ ಕೂಡ ಇದೇ ದಿನ ಬಿಡುಗಡೆಗೊಂಡಿದ್ದು, ಇಂಗ್ಲಿಷ್‌ನ ಬ್ಲಾಕ್ ಪ್ಯಾಂಥರ್; ವಾಖೆಂಡಾ ಫಾರ್‌ಎವರ್ ಕೂಡ ತೆರೆ ಕಂಡಿದೆ.

ಹೀಗೆ 2022ರ ನವೆಂಬರ್ ತಿಂಗಳ ಎರಡನೇ ಶುಕ್ರವಾರ ಕನ್ನಡದ ಹಲವು ಚಿತ್ರಗಳು ತೆರೆಗೆ ಬಂದ ಕಾರಣ ಬೆಂಗಳೂರಿನ ಕೆ ಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಹಲವು ಚಿತ್ರಗಳು ಆಟ ನಿಲ್ಲಿಸಿವೆ. ಧನಂಜಯ್ ಹಾಗೂ ಲೂಸ್ ಮಾದ ಯೋಗಿ ಅಭಿನಯದ ಹೆಡ್ ಬುಷ್, ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರಗಳು ಬೆಂಗಳೂರಿನ ಕೆ ಜಿ ರಸ್ತೆಯ ಮುಖ್ಯ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿವೆ.

ಹಾಗಿದ್ದರೆ ಕೆ ಜಿ ರಸ್ತೆಯ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ವಿವರ ಕೆಳಕಂಡಂತಿದೆ.

ಸಂತೋಷ್ - ಕಾಂತಾರ ( ಕನ್ನಡ )

ನರ್ತಕಿ - ರಾಣ ( ಕನ್ನಡ ) 3 ಪ್ರದರ್ಶನಗಳು ಹಾಗೂ ಬ್ಲಾಕ್ ಪ್ಯಾಂಥರ್; ವಾಖೆಂಡಾ ಫಾರ್ ಎವರ್ ( ಇಂಗ್ಲೀಷ್ ) 2 ಪ್ರದರ್ಶನಗಳು

ಭೂಮಿಕಾ - ದಿಲ್ ಪಸಂದ್ ( ಕನ್ನಡ ) 4 ಪ್ರದರ್ಶನಗಳು

ಅನುಪಮಾ - ಬನಾರಸ್ ( ಕನ್ನಡ ) 4 ಪ್ರದರ್ಶನಗಳು

ಕಾಂತಾರ ಬಿಡುಗಡೆಯಾಗಿ ತಿಂಗಳು ಕಳೆದರೂ ಇನ್ನೂ ಸಹ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಇತ್ತೀಚಿನ ದಿನಗಳಲ್ಲಿ ಕೆ ಜಿ ರಸ್ತೆಯ ಚಿತ್ರಮಂದಿರದಲ್ಲಿ ಈ ಮಟ್ಟಿಗೆ ಯಾವ ಚಿತ್ರವೂ ಪ್ರದರ್ಶನ ಕಂಡಿಲ್ಲ.

More from Filmibeat

English summary
Movies running in Bengaluru KG Road's theatres as on November 12
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X