For Quick Alerts
  ALLOW NOTIFICATIONS  
  For Daily Alerts

  ಮುಖ್ಯ ಚಿತ್ರಮಂದಿರದಿಂದ ಕಾಂತಾರ ಔಟ್; ಕೆಜಿ ರಸ್ತೆಯ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರಗಳ ಪ್ರದರ್ಶನ?

  |

  ಇಂದು ( ನವೆಂಬರ್ 18 ) ತಿಂಗಳ ಮೂರನೇ ಶುಕ್ರವಾರ. ಈ ದಿನದಂದು ಸ್ಯಾಂಡಲ್ ವುಡ್ ಟು ಬಾಲಿವುಡ್ ಚಿತ್ರರಂಗಗಳ ಹಲವು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ.

  ಕನ್ನಡದ 9 ಚಿತ್ರಗಳು, ತೆಲುಗಿನ 8 ಚಿತ್ರಗಳು, ತಮಿಳಿನ 7 ಚಿತ್ರಗಳು, ಮಲಯಾಳಂನ 3 ಚಿತ್ರಗಳು ಹಾಗೂ ಹಿಂದಿಯ 2 ಚಿತ್ರಗಳು ತೆರೆಗೆ ಬರುತ್ತಿವೆ. ಕನ್ನಡದಲ್ಲಿ 'ಆವರ್ಥ', 'ಅಬ್ಬರ', 'ಮಠ', 'ಖಾಸಗಿ ಪುಟಗಳು', 'ಧಮ್', 'ಭಾಗ್ಯವಂತರು', 'ದಿ ಫಿಲ್ಮ್ ಮೇಕರ್', 'ಕುಳ್ಳನ ಹೆಂಡತಿ' ಹೀಗೆ ಒಟ್ಟು 8 ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ರಾಮ್ ನಾರಾಯಣ್ ನಿರ್ದೇಶನದ 'ಅಬ್ಬರ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮಿಂಚಿದ್ದಾರೆ. ರಿವೇಂಜ್‌ ಡ್ರಾಮಾ ಆಗಿರುವ ಈ ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಇನ್ನು ದಿವಂಗತ ನಟ ಶಂಕರ್ ನಾಗ್ ನಟನೆಯ 'ಎಸ್‌. ಪಿ ಸಾಂಗ್ಲಿಯಾನ'- 2 ಸಿನಿಮಾ ರೀ ರಿಲೀಸ್ ಆಗ್ತಿದೆ.

  ಇನ್ನು ಈಗಾಗಲೇ ಪ್ರದರ್ಶನ ಕಾಣುತ್ತಿದ್ದ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಿಂದಾಗಿ ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರಗಳಿಂದ ಹೊರಬಿದ್ದಿವೆ. ಹೀಗೆ ಹೊರಬಿದ್ದ ಚಿತ್ರಗಳ ಪೈಕಿ ರಿಷಬ್ ಶೆಟ್ಟಿ ನಟನೆಯ ಕಾಂತಾರ ಕೂಡ ಒಂದು. ಕಾಂತಾರ ಚಿತ್ರ ನಿನ್ನೆಗೆ ( ನವೆಂಬರ್ 17 ) 49 ದಿನಗಳನ್ನು ಪೂರೈಸಿದ್ದು ಅದೇ ದಿನ ಮುಖ್ಯ ಚಿತ್ರಮಂದಿರ ಸಂತೋಷ್ ನಲ್ಲಿ ತನ್ನ ಆಟವನ್ನು ನಿಲ್ಲಿಸಿದೆ ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ‌ಅಬ್ಬರ ಚಿತ್ರ ಇಲ್ಲಿ ಇಂದು ( ನವೆಂಬರ್ 18 ) ಬಿಡುಗಡೆಯಾಗಿದೆ.

  ಹೀಗೆ ಈ ದಿನ ಬಿಡುಗಡೆಯಾಗುತ್ತಿರುವ ಚಿತ್ರಗಳಿಂದಾಗಿ ಹಲವು ಬದಲಾವಣೆಗಳಾಗಿದ್ದು ಬೆಂಗಳೂರಿನ ಕೆಜಿ ರಸ್ತೆಯ ಯಾವ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ತಿದೆ ಎಂಬ ಮಾಹಿತಿ ಇಲ್ಲಿದೆ.

  ಸಂತೋಷ್ - ಅಬ್ಬರ ( ಕನ್ನಡ ) 4 ಪ್ರದರ್ಶನಗಳು

  ನರ್ತಕಿ - ಮಠ ( ಕನ್ನಡ ) 4 ಪ್ರದರ್ಶನಗಳು

  ಭೂಮಿಕಾ - ಭಾಗ್ಯವಂತರು ( ಕನ್ನಡ ) 2 ಪ್ರದರ್ಶನಗಳು

  ಗಂಧದ ಗುಡಿ ( ಕನ್ನಡ ) 2 ಪ್ರದರ್ಶನಗಳು

  ಗಲೋಡು ( ತೆಲುಗು ) 1 ಪ್ರದರ್ಶನ

  ಅನುಪಮಾ - ಬನಾರಸ್ ( ಕನ್ನಡ ) 4 ಪ್ರದರ್ಶನಗಳು

  English summary
  Movies running in Bengaluru KG Road's theatres as on November 18
  Friday, November 18, 2022, 7:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X