ನವೆಂಬರ್ 25: ಬೆಂಗಳೂರಿನ ಕೆಜಿ ರಸ್ತೆಯ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?
ಇಂದು ( ನವೆಂಬರ್ 25 ) ತಿಂಗಳ ಅಂತಿಮ ಶುಕ್ರವಾರ. ಈ ದಿನ ಕನ್ನಡ ಸೇರಿದಂತೆ ಭಾರತದ ಹಲವು ಚಿತ್ರಗಳ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಇನ್ನು ಕನ್ನಡದ ಪೈಕಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್', ಪವನ್ ಒಡೆಯರ್ ನಿರ್ದೇಶನದ 'ರೇಮೊ' ಹಾಗೂ ಯುವ ಕಲಾವಿದರ 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರಗಳು ಬಿಡುಗಡೆಗೊಂಡಿವೆ.
ಇನ್ನು ನಿನ್ನೆಯಷ್ಟೇ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕಾಂತಾರ ಚಿತ್ರ ಬಿಡುಗಡೆಯಾದ ಕಾರಣ ರಾಜ್ಯದ ಚಿತ್ರಮಂದಿರಗಳಲ್ಲಿ ಕಾಂತಾರ ಅಬ್ಬರ ನಿಂತಿದ್ದು, ಈ ವಾರ ಬಿಡುಗಡೆಗೊಂಡಿರುವ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರ ಹಾಗೂ ಪ್ರದರ್ಶನಗಳು ದೊರೆತಿವೆ.
ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಜೀವನದಲ್ಲೇ ಇದೇ ಮೊದಲ ಬಾರಿಗೆ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅವರ ಚಿತ್ರ ಬಿಡುಗಡೆಯಾಗಿದೆ. ತ್ರಿಬಲ್ ರೈಡಿಂಗ್ ಚಿತ್ರ ಈ ಮೈಲಿಗಲ್ಲನ್ನು ಮುಟ್ಟಿದೆ. ಈ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದು, ಪವನ್ ಒಡೆಯರ್ ನಿರ್ದೇಶನದ ರೇಮೊ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಈ ದಿನದಂದು ಬೆಂಗಳೂರಿನ ಕೆಜಿ ರಸ್ತೆಯ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಸಂತೋಷ್ : ರೇಮೊ ( ಕನ್ನಡ ) 4 ಪ್ರದರ್ಶನಗಳು
ನರ್ತಕಿ: ತ್ರಿಬಲ್ ರೈಡಿಂಗ್ ( ಕನ್ನಡ ) 4 ಪ್ರದರ್ಶನಗಳು
ಭೂಮಿಕಾ : ಲವ್ ಟುಡೇ ( ತೆಲುಗು ) 3 ಪ್ರದರ್ಶನಗಳು, ಇಟ್ಲು ಮಾರೇದುಮಿಲ್ಲಿ ಪ್ರಜಾನಿಕಂ ( ತೆಲುಗು ) 2 ಪ್ರದರ್ಶನಗಳು
ಅನುಪಮಾ : ಬನಾರಸ್ ( ಕನ್ನಡ ) 2 ಪ್ರದರ್ಶನಗಳು, ಕಾಂತಾರ ( ಕನ್ನಡ ) 2 ಪ್ರದರ್ಶನಗಳು


Click it and Unblock the Notifications











