ನವೆಂಬರ್ 4ರಂದು ಬೆಂಗಳೂರಿನ ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪಟ್ಟಿ
ಇಂದು ( ನವೆಂಬರ್ 4 ) ಶುಕ್ರವಾರ ಕನ್ನಡದ ಎರಡು ಚಿತ್ರಗಳು ಬಿಡುಗಡೆಗೊಂಡಿವೆ. ಝೈದ್ ಖಾನ್ ಅಭಿನಯದ ಬನಾರಸ್ ಹಾಗೂ ಹೊಸಬರ ಕಂಬ್ಳಿ ಹುಳ ಚಿತ್ರಗಳು ತೆರೆ ಕಂಡಿವೆ. ಝೈದ್ ಖಾನ್ ನಟನೆಯ ಬನಾರಸ್ ಚಿತ್ರ ಕೆಜಿ ರಸ್ತೆಯ ಅನುಪಮಾ ಚಿತ್ರಮಂದಿರದಲ್ಲಿ ತೆರೆಕಂಡಿದ್ದು, ಈ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಭೂಮಿಕಾ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ.
ಈ ಬದಲಾವಣೆ ಬಿಟ್ಟರೆ ಬೆಂಗಳೂರಿನ ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ದೊಡ್ಡ ಬದಲಾವಣೆಗಳೇನು ಆಗಿಲ್ಲ. ಕಾಂತಾರ ಇಂದಿಗೂ ಸಹ ಅದ್ಭುತ ಪ್ರದರ್ಶನ ಕಾಣುತ್ತಿದ್ದು ವೀಕೆಂಡ್‌ನಲ್ಲಿ ಮುಖ್ಯ ಚಿತ್ರಮಂದಿರದಲ್ಲೂ ಸಹ ಹೌಸ್‌ಫುಲ್ ಫಿಕ್ಸ್. ಇನ್ನು ಗಂಧದ ಗುಡಿ ಸಹ ಒಳ್ಳೆಯ ಪ್ರತಿಕ್ರಿಯೆ ಪ್ರದರ್ಶನ ಕಾಣುತ್ತಿದ್ದು ಸದ್ಯ ಗಾಂಧಿನಗರದಲ್ಲಿ ಕಾಂತಾರ ಹಾಗೂ ಗಂಧದಗುಡಿ ಅಬ್ಬರ ನಡೆಯುತ್ತಿದೆ.
ಹೀಗೆ ಬನಾರಸ್ ಬಿಡುಗಡೆಯಾದ ನಂತರ ಈ ವಾರ ಬೆಂಗಳೂರಿನ ಕೆಜಿ ರಸ್ತೆಯ ಯಾವ ಪ್ರಮುಖ ಚಿತ್ರಮಂದಿರದಲ್ಲಿ ಯಾವ ಚಿತ್ರಗಳು ಪ್ರದರ್ಶನ ಕಾಣುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಸಂತೋಷ್: ಕಾಂತಾರ ( ಕನ್ನಡ ) ನಾಲ್ಕು ಪ್ರದರ್ಶನ
ನರ್ತಕಿ: ಗಂಧದ ಗುಡಿ ( ಕನ್ನಡ ) ಐದು ಪ್ರದರ್ಶನ
ಭೂಮಿಕಾ: ಹೆಡ್ ಬುಷ್ ( ಕನ್ನಡ ) ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ
ಪ್ರದರ್ಶನ ಮತ್ತು ಕಾಂತಾರ ( ತೆಲುಗು ) ರಾತ್ರಿಯ ಎರಡು ಪ್ರದರ್ಶನ
ಅನುಪಮ: ಬನಾರಸ್ ( ಕನ್ನಡ ) ನಾಲ್ಕು ಪ್ರದರ್ಶನ


Click it and Unblock the Notifications











