ಏಪ್ರಿಲ್ 15ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನ?

ನಿನ್ನೆ ( ಏಪ್ರಿಲ್ 14 ) ತಿಂಗಳ‌ ಮೂರನೇ ಶುಕ್ರವಾರದಂದು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ.

ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಅಬ್ಬರ, ಮತ್ತೊಂದೆಡೆ ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ರಾಜ್ಯದಲ್ಲಿ ಜೋರಾಗಿದ್ದರೂ ಸಹ ಹಲವು ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬರುವ ಧೈರ್ಯ ಮಾಡಿವೆ.

Movies running in Bengaluru Main theatres as on April 15

ಕನ್ನಡದ ಪೈಕಿ ರಮೇಶ್ ಅರವಿಂದ್ ನಟನೆಯ ನಿರೀಕ್ಷಿತ ಸಿನಿಮಾ ಶಿವಾಜಿ ಸುರತ್ಕಲ್ 2, ಕೋಮಲ್ ಕುಮಾರ್ ನಟನೆಯ ಉಂಡೆನಾಮ, ಹೊಸಬರ ಸುರಾರಿ ಚಿತ್ರಗಳು ಬಿಡುಗಡೆಯಾಗಿದ್ದರೆ, ತೆಲುಗಿನಲ್ಲಿ ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ, ತಮಿಳಿನಲ್ಲಿ ರಾಘವ ಲಾರೆನ್ಸ್ ನಟನೆಯ ರುದ್ರನ್ ಚಿತ್ರಗಳು ಬಿಡುಗಡೆಗೊಂಡಿವೆ.

ಶಿವಾಜಿ ಸುರತ್ಕಲ್ ಒಳ್ಳೆಯ ಪ್ರಶಂಸೆ ಪಡೆದುಕೊಂಡರೆ, ಉಂಡೆನಾಮ‌ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ ಹಾಗೂ ಸಮಂತಾ ರುತ್ ಪ್ರಭು ನಟನೆಯ ಕೆಟ್ಟ ವಿಮರ್ಶೆಗಳನ್ನು ಪಡೆದುಕೊಂಡು ಹಿನ್ನಡೆ ಅನುಭವಿಸಿದೆ. ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳು ಬಿಡುಗಡೆಯಾಗಿದ್ದು, ಸಾಧಾರಣ ಪ್ರದರ್ಶನಗಳು ಹಾಗೂ ಓಪನಿಂಗ್ ಪಡೆದುಕೊಂಡಿವೆ.

Movies running in Bengaluru Main theatres as on April 15

ಇನ್ನು ಇಂದು ( ಏಪ್ರಿಲ್ 15 ) ಬೆಂಗಳೂರಿನ ಮುಖ್ಯ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಶಾಕುತಲಂ ( ತೆಲುಗು ) ಪ್ರದರ್ಶನಗಳು

ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ದೇಶಮುದುರು ( ತೆಲುಗು ) 4 ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಉಂಡೆನಾಮ ( ಕನ್ನಡ ) 4 ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ರಾಮಾಚಾರಿ 2.0 ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ರಾವಾಣಾಸುರ ( ತೆಲುಗು ) 4 ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ವೀರಂ ( ಕನ್ನಡ ) ನಾಲ್ಕು ಪ್ರದರ್ಶನಗಳು

ಊರ್ವಶಿ: ಶಿವಾಜಿ ಸುರತ್ಕಲ್ 2 ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಶಾಕುಂತಲಂ ( ತೆಲುಗು ) ಎರಡು ಪ್ರದರ್ಶನಗಳು

ಅಭಿನಯ, ಕೆಜಿ ರಸ್ತೆ: ಸುರಾರಿ ( ಕನ್ನಡ ) ಒಂದು ಪ್ರದರ್ಶನ ಹಾಗೂ ವೀರಮ್ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ವಿಡುದಲೈ ಪಾರ್ಟ್ 1 ( ತಮಿಳು ) 2 ಪ್ರದರ್ಶನಗಳು, ಶಿವಾಜಿ ಸುರತ್ಕಲ್ 2 ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಶಾಕುಂತಲಂ ( ತೆಲುಗು ) ಒಂದು ಪ್ರದರ್ಶನ.

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಶಿವಾಜಿ ಸುರತ್ಕಲ್ 2 ( ಕನ್ನಡ ) ನಾಲ್ಕು ಪ್ರದರ್ಶನಗಳು ಹಾಗೂ ಉಂಡೆನಾಮ ( ಕನ್ನಡ ) ನಾಲ್ಕು ಪ್ರದರ್ಶನಗಳು.

More from Filmibeat

English summary
Movies running in Bengaluru Main theatres as on April 15 . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X