ಡಿಸೆಂಬರ್ 11ರಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನ?

2022ರ ಕೊನೆಯ ತಿಂಗಳು ಡಿಸೆಂಬರ್‌ನ ಎರಡನೇ ವಾರ ಬಂದಿದೆ. ತಿಂಗಳ ಎರಡನೇ ಶುಕ್ರವಾರ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ 'ವಿಜಯಾನಂದ' ಹಾಗೂ ರತ್ನನ್ ಪ್ರಪಂಚ ಖ್ಯಾತಿಯ 'ಬಾಂಡ್ ರವಿ' ಸೇರಿದಂತೆ ಹಲವು ಕನ್ನಡ ಚಿತ್ರಗಳು ಬಿಡುಗಡೆಗೊಂಡಿವೆ. ಅತ್ತ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಹಲವಾರು ಚಿತ್ರಗಳು ತೆರೆಕಂಡಿವೆ.
ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನೂ ವೀಕ್ಷಿಸುವ ಸಿನಿ ರಸಿಕರಿಂದ ಕೂಡಿರುವ ಬೆಂಗಳೂರಿನಲ್ಲೂ ಎಲ್ಲಾ ಭಾಷೆಯ ಹಲವು ಪ್ರಮುಖ ಚಿತ್ರಗಳು ಬಿಡುಗಡೆಗೊಂಡಿದ್ದು, ಕಳೆದ ವಾರ ಬಿಡುಗಡೆಗೊಂಡಿದ್ದ ಹಲವು ಚಿತ್ರಗಳು ಮುಖ್ಯ ಚಿತ್ರಮಂದಿರದಿಂದ ಹೊರಬಿದ್ದಿವೆ. ಹಾಗಿದ್ದರೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಡಿಸೆಂಬರ್ 11ರಂದು ಯಾವ ಚಿತ್ರಗಳು ಪ್ರದರ್ಶನವಾಗುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಗುರ್ತುಂದಾ ಸೀತಾಕಾಲಮ್ ( ತೆಲುಗು ) ನಾಲ್ಕು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ವಿಜಯಾನಂದ ( ಕನ್ನಡ ) ನಾಲ್ಕು ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ : ಪ್ರಾಯಶಃ ( ಕನ್ನಡ ) ಎರಡು ಪ್ರದರ್ಶನಗಳು, ಡಿಆರ್ 56 ( ಕನ್ನಡ ) ಎರಡು ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ: ನಾನೇ ನರ ರಾಕ್ಷಸ ( ಕನ್ನಡ ) ಎರಡು ಪ್ರದರ್ಶನಗಳು, ಹಿಟ್ ದ ಸೆಕೆಂಡ್ ಕೇಸ್ ( ತೆಲುಗು ) ಒಂದು ಪ್ರದರ್ಶನ ಹಾಗೂ ಮೂಖಚಿತ್ರಂ ( ತೆಲುಗು ) ಎರಡು ಪ್ರದರ್ಶನಗಳು
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಬಾಂಡ್ ರವಿ ( ಕನ್ನಡ ) ಮೂರು ಪ್ರದರ್ಶನಗಳು, ಡಿಆರ್ 56 ( ಕನ್ನಡ ) ಎರಡು ಪ್ರದರ್ಶನಗಳು, ವಾಸಂತಿ ನಲಿದಾಗ ( ಕನ್ನಡ ) ಒಂದು ಪ್ರದರ್ಶನ, ಕಾಂತಾರ ( ಕನ್ನಡ ) ಒಂದು ಪ್ರದರ್ಶನ ಹಾಗೂ ಧರಣಿ ಮಂಡಲ ಮಧ್ಯದೊಳಗೆ ( ಕನ್ನಡ ) ಒಂದು ಪ್ರದರ್ಶನ
ಊರ್ವಶಿ ಚಿತ್ರಮಂದಿರ : ನಾಯಿ ಶೇಖರ್ ರಿಟರ್ನ್ಸ ( ತಮಿಳು ) ನಾಲ್ಕು ಪ್ರದರ್ಶನಗಳು


Click it and Unblock the Notifications











