ನರ್ತಕಿಯಲ್ಲಿ 'ವೇದ'ನ ಅಬ್ಬರ; ಡಿಸೆಂಬರ್ 24ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?

 Movies running in Bengaluru main theatres as on December 23

ಸಿನಿಮಾ ಕ್ಷೇತ್ರದ ಪಾಲಿಗೆ ಚಿನ್ನದಂತಹ ವರ್ಷ ಎನಿಸಿಕೊಂಡಿರುವ 2022ರ ಅಂತಿಮ ತಿಂಗಳಿನ ಮುಕ್ತಾಯದ ಹಂತದಲ್ಲೀಗ ನಾವಿದ್ದೇವೆ. ವರ್ಷ ಪೂರ್ತಿ ಹಲವಾರು ಅದ್ಭುತ ಚಿತ್ರಗಳನ್ನು ವೀಕ್ಷಿಸಿರುವ ಸಿನಿ ರಸಿಕರಿಗೆ ವರ್ಷದ ಅಂತ್ಯದಲ್ಲಿಯೂ ಚಿತ್ರಮಂದಿರಗಳಿಗೆ ವೀಕ್ಷಿಸಲು ಹಲವು ಚಿತ್ರಗಳು ಲಭ್ಯವಿದೆ.

ಇನ್ನು ಡಿಸೆಂಬರ್ ತಿಂಗಳ ನಾಲ್ಕನೇ ಶುಕ್ರವಾರವಾದ ನಿನ್ನೆ ( ಡಿಸೆಂಬರ್ 23 ) ದೇಶಾದ್ಯಂತ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ತೆರೆಕಂಡಿವೆ. ಶಿವ ರಾಜ್ ಕುಮಾರ್ ಅಭಿನಯದ ವೇದ, ರವಿತೇಜಾ ಹಾಗೂ ಶ್ರೀಲೀಲಾ‌ ನಟನೆಯ ತೆಲುಗು ಚಿತ್ರ ಧಮಾಕಾ, ತಮಿಳಿನ ವಿಶಾಲ್ ನಟನೆಯ ಚಿತ್ರ ಲಾಠಿ, ನಯನತಾರಾ ನಟನೆಯ ಕನೆಕ್ಟ್, ಪೃಥ್ವಿರಾಜ್‌ ಸುಕುಮಾರನ್ ನಟನೆಯ ಮಲಯಾಳಂ ಚಿತ್ರ ಕಾಪ್ಪ ಹಾಗೂ ಹಿಂದಿಯ ಸರ್ಕಸ್ ರೀತಿಯ ತಾರೆಗಳ ಚಿತ್ರಗಳೇ ನಿನ್ನೆ ಬಿಡುಗಡೆಯಾಗಿವೆ‌.

ಇನ್ನು ಎಲ್ಲಾ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ವಾರ ಯಾವ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನವಾಗುತ್ತಿದೆ ಎಂಬುದರ ಕುರಿತ ಮಾಹಿತಿ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ವೇದ ( ಕನ್ನಡ ) - ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: 18 ಪೇಜಸ್ ( ತೆಲುಗು ) ಮೂರು ಪ್ರದರ್ಶನಗಳು ಹಾಗೂ ಪ್ರಾಯಶಃ ( ಕನ್ನಡ ) ಒಂದು ಪ್ರದರ್ಶನ

ಅನುಪಮಾ ಚಿತ್ರಮಂದಿರ : ಲಾಠಿ ( ತೆಲುಗು ) ಎರಡು ಪ್ರದರ್ಶನಗಳು, ಮೊದಲ ಮಿಡಿತ ( ಕನ್ನಡ ) ಒಂದು ಪ್ರದರ್ಶನ, ಕನೆಕ್ಟ್ ( ತೆಲುಗು ) ಒಂದು ಪ್ರದರ್ಶನ

ತ್ರಿವೇಣಿ ಚಿತ್ರಮಂದಿರ: ಕಾಂತಾರ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಧಮಾಕಾ ( ತೆಲುಗು ) ಐದು ಪ್ರದರ್ಶನಗಳು

ವೀರೇಶ್, ಮಾಗಡಿ ರಸ್ತೆ: ವೇದ ( ಕನ್ನಡ ) ಐದು ಪ್ರದರ್ಶನಗಳು, ಧಮಾಕಾ‌ ( ತೆಲುಗು ) ಮೂರು ಪ್ರದರ್ಶನಗಳು, ಅವತಾರ್ ದ ವೇ ಆಫ್ ವಾಟರ್ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಲಾಠಿ ( ತಮಿಳು ) ಒಂದು ಪ್ರದರ್ಶನ.

ಊರ್ವಶಿ ಚಿತ್ರಮಂದಿರ: ವೇದ ( ಕನ್ನಡ ) ಎರಡು ಪ್ರದರ್ಶನಗಳು, 18 ಪೇಜಸ್ (‌ ಒಂದು ಪ್ರದರ್ಶನ ) ಹಾಗೂ ಸರ್ಕಸ್ ( ಹಿಂದಿ ) ಒಂದು ಪ್ರದರ್ಶನ

More from Filmibeat

English summary
Movies running in Bengaluru main theatres as on December 23
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X