ಡಿಸೆಂಬರ್ 30ರಂದು ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳ ಪ್ರದರ್ಶನ?

ಸಿನಿಮಾ ಕ್ಷೇತ್ರದ ಪಾಲಿಗೆ ಗೋಲ್ಡನ್ ಇಯರ್ ಎಂದೇ ಕರೆಸಿಕೊಂಡಿರುವ 2022 ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದೇವೆ. ಹಲವಾರು ಹಿಟ್ ಚಿತ್ರಗಳಿಗೆ ಸಾಕ್ಷಿಯಾಗಿರುವ ಸಿನಿ ರಸಿಕರು ಒಳ್ಳೊಳ್ಳೆ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಭಾರತದ ಸುಮಾರು ಮೂವತ್ತು ಚಿತ್ರಗಳು ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ್ದು, ಈ ಪೈಕಿ ಕನ್ನಡದ ಒಟ್ಟು ಐದು ಚಿತ್ರಗಳು ಈ ವರ್ಷ ನೂರು ಕೋಟಿ ಕ್ಲಬ್ ಸೇರಿವೆ.

ಹೀಗೆ ಸಾಲು ಸಾಲು ಹಿಟ್ ಚಿತ್ರಗಳು ಬಿಡುಗಡೆಗೊಂಡ ಈ ವರ್ಷದ ಅಂತಿಮ ಶುಕ್ರವಾರವಾದ ಇಂದು ( ಡಿಸೆಂಬರ್ 30 ) ವಿವಿಧ ಭಾಷೆಗಳಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾಗಿದ್ದು, ಹೊಸ ವರ್ಷದ ವೀಕೆಂಡ್‌ನಲ್ಲಿ ಒಳ್ಳೆಯ ಗಳಿಕೆ ಮಾಡುವತ್ತ ಚಿತ್ತ ನೆಟ್ಟಿವೆ. ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ', ಯೋಗರಾಜ್ ಭಟ್ ನಿರ್ದೇಶನದ ಪದವಿ ಪೂರ್ವ ಸೇರಿದಂತೆ ಹಲವಾರು ಚಿತ್ರಗಳು ಬಿಡುಗಡೆಯಾಗಿದ್ದು, ಉಳಿದ ಇಂಡಸ್ಟ್ರಿಯ ಹಲವಾರು ಚಿತ್ರಗಳು ತೆರೆ ಕಂಡಿವೆ.

ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನೂ ಸಹ ವೀಕ್ಷಿಸುವ ಜನರು ಇರುವ ಬೆಂಗಳೂರಿನಲ್ಲಿ ಇಂದು ವಿವಿಧ ಚಿತ್ರಗಳು ತೆರೆ ಕಂಡಿದ್ದು, ನಗರದ ಯಾವ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನವಾಗುತ್ತಿವೆ ಹಾಗೂ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

Movies running in Bengaluru main theatres as on December 30

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ:ವೇದ ( ಕನ್ನಡ ) - ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಪದವಿ ಪೂರ್ವ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ನಾನು ಅದು ಮತ್ತು ಸರೋಜ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಲವ್ ಸ್ಟೋರಿ 1998 ( ಕನ್ನಡ ) ಎರಡು ಪ್ರದರ್ಶನಗಳು, ರುಧೀರ ಕಣಿವೆ ( ಕನ್ನಡ ) ಒಂದು ಪ್ರದರ್ಶನ ಹಾಗೂ ಧಮಾಕಾ ( ತೆಲುಗು ) ಎರಡು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಜೋರ್ಡನ್ ( ಕನ್ನಡ ) ಒಂದು ಪ್ರದರ್ಶನ, ಪದವಿ ಪೂರ್ವ ( ಕನ್ನಡ ) ಎರಡು ಪ್ರದರ್ಶನಗಳು, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ( ಕನ್ನಡ ) ಮೂರು ಪ್ರದರ್ಶನಗಳು, ನಾನು ಅದು ಮತ್ತು ಸರೋಜ ( ಕನ್ನಡ ) ಒಂದು ಪ್ರದರ್ಶನ, ಅವತಾರ್ ದ ವೇ ಆಫ್ ವಾಟರ್ ( ಕನ್ನಡ ) ಒಂದು ಪ್ರದರ್ಶನ ಹಾಗೂ ವೇದ (ಕನ್ನಡ ) ಎರಡು ಪ್ರದರ್ಶನಗಳು

ಊರ್ವಶಿ ಚಿತ್ರಮಂದಿರ: ಒನ್ಸ್ ಅಪನ್ ಎ ಟೈಮ್ ಇನ್ ಜಮಾಲಿಗುಡ್ಡ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ವೇದ ( ಕನ್ನಡ ) ಎರಡು ಪ್ರದರ್ಶನಗಳು.

More from Filmibeat

English summary
Movies running in Bengaluru main theatres as on December 30. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X