ಫೆಬ್ರವರಿ 3ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ? ಕ್ರಾಂತಿ ಎಲ್ಲೆಲ್ಲಿ ಇದೆ?

2023ನೇ ವರ್ಷದ ಮೊದಲ ತಿಂಗಳು ಮುಕ್ತಾಯಗೊಂಡಿದ್ದು, ಮೊದಲ ತಿಂಗಳಲ್ಲೇ ಹಲವಾರು ನೂರು ಕೋಟಿಯ ಚಿತ್ರಗಳನ್ನು ಕಂಡ ನಾವು ಇದೀಗ ಎರಡನೇ ತಿಂಗಳಿಗೆ ಕಾಲಿಟ್ಟಿದ್ದೇವೆ. ಹೌದು, ಕಳೆದ ತಿಂಗಳು ಬಿಡುಗಡೆಗೊಂಡ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳೆಲ್ಲಾ ನೂರು ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದ್ದು, ಈ ಎಲ್ಲಾ ಚಿತ್ರಗಳು ಫೆಬ್ರವರಿ ತಿಂಗಳಿನಲ್ಲಿಯೂ ತಮ್ಮ ಚಿತ್ರಮಂದಿರದಲ್ಲಿಯೂ ತಮ್ಮ ಓಟವನ್ನು ಮುಂದುವರಿಸಿವೆ.

ಅದರಲ್ಲಿಯೂ ಜನವರಿ ಕೊನೆಯ ವಾರ ತೆರೆಕಂಡ ಶಾರುಖ್ ಖಾನ್ ನಟನೆಯ ಪಠಾಣ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರಗಳು ಫೆಬ್ರವರಿ ಮೊದಲ ವಾರದಲ್ಲಿಯೂ ಹಿಡಿತವನ್ನು ಸಾಧಿಸಿದ್ದು, ಹೆಚ್ಚೆಚ್ಚು ಪ್ರದರ್ಶನಗಳನ್ನು ಕಾಣುತ್ತಿವೆ. ಇನ್ನು ಈ ಎರಡೂ ಚಿತ್ರಗಳೂ ಸಹ ಒಂದು ದಿನದ ಅಂತರದಲ್ಲಿ ಬಿಡುಗಡೆಯಾದ ಕಾರಣ ಸಹಜವಾಗಿ ಪೈಪೋಟಿ ಏರ್ಪಟ್ಟಿದೆ.

ಅದರಲ್ಲೂ ಎಲ್ಲಾ ಭಾಷೆಗಳ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಚಿತ್ರಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಠಾಣ್ ಚಿತ್ರ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ಹಿಡಿತ ಸಾಧಿಸಿದರೆ, ಬೆಂಗಳೂರಿನ ಸಿಂಗಲ್ ಸ್ಕ್ರೀನ್‌ಗಳಲ್ಲಿ ಕ್ರಾಂತಿ ತನ್ನ ಹಿಡಿತವನ್ನು ಮುಂದುವರಿಸಿದೆ. ಇದರ ನಡುವೆ ಫೆಬ್ರವರಿ ತಿಂಗಳ ಮೊದಲ ಶುಕ್ರವಾರವಾದ ಇಂದು ( ಫೆಬ್ರವರಿ 3 ) ಹಲವು ಹೊಸ ಚಿತ್ರಗಳು ಬಿಡುಗಡೆಯಾಗಿದ್ದು, ಈ ದಿನದಂದು ಬೆಂಗಳೂರಿನ ಯಾವ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರ?

ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರ?

ಬೆಂಗಳೂರಿನ ಗಾಂಧಿನಗರದ ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಗಳಾದ ಸಂತೋಷ್ ಚಿತ್ರಮಂದಿರದಲ್ಲಿ ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಪ್ರದರ್ಶನಗೊಳ್ಳುತ್ತಿದ್ದರೆ, ನರ್ತಕಿ ಚಿತ್ರಮಂದಿರದಲ್ಲಿ ಶಿವ ರಾಜ್‌ಕುಮಾರ್ ನಟನೆಯ ವೇದ ಚಿತ್ರ ತನ್ನ ಓಟವನ್ನು ಮುಂದುವರಿಸಿದೆ. ಭೂಮಿಕಾ ಚಿತ್ರಮಂದಿರದಲ್ಲಿ ತೆಲುಗಿನ ವೀರಸಿಂಹ ರೆಡ್ಡಿ ಚಿತ್ರ ಮೂರು ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ, ವಾರಸುಡು ಚಿತ್ರ ಎರಡು ಪ್ರದರ್ಶನಗಳನ್ನು ಕಾಣುತ್ತಿದೆ. ಸಪ್ನ ಚಿತ್ರಮಂದಿರದಲ್ಲಿ ತಮಿಳಿನ ಮೈಕಲ್ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇನ್ನು ಅನುಪಮಾ ಚಿತ್ರಮಂದಿರದಲ್ಲಿ ದರ್ಶನ್ ನಟನೆಯ ಕ್ರಾಂತಿ ಚಿತ್ರ ಪ್ರದರ್ಶನಗೊಳ್ತಿದೆ. ತ್ರಿವೇಣಿ ಚಿತ್ರಮಂದಿರದಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

ವೀರೇಶ್ ಚಿತ್ರಮಂದಿರದಲ್ಲಿ ಯಾವ ಚಿತ್ರಕ್ಕೆ ಹೆಚ್ಚು ಪ್ರದರ್ಶನ?

ವೀರೇಶ್ ಚಿತ್ರಮಂದಿರದಲ್ಲಿ ಯಾವ ಚಿತ್ರಕ್ಕೆ ಹೆಚ್ಚು ಪ್ರದರ್ಶನ?

ಇನ್ನು ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಈ ವಾರ ಕನ್ನಡ ಚಿತ್ರಗಳ ಅಬ್ಬರ ಜೋರಾಗಿದೆ. ಎರಡು ಪರದೆಗಳಿರುವ ಈ ಚಿತ್ರಮಂದಿರದಲ್ಲಿ ಕ್ರಾಂತಿ ಚಿತ್ರಕ್ಕೆ ನಾಲ್ಕು ಪ್ರದರ್ಶನಗಳಿದ್ದು, ತನುಜಾ ಚಿತ್ರಕ್ಕೆ ಎರಡು ಪ್ರದೆರ್ಶನಗಳು ಸಿಕ್ಕಿವೆ, ಪ್ರಥಮ್ ನಟನೆಯ ನರ ಭಯಂಕರ ಚಿತ್ರಕ್ಕೂ ಎರಡು ಪ್ರದರ್ಶನಗಳು ಲಭಿಸಿದ್ದು, ಹಿಂದಿಯ ಪಠಾಣ್ ಚಿತ್ರಕ್ಕೆ ಇಲ್ಲಿ ಕೇವಲ ಒಂದು ಪ್ರದರ್ಶನ ದೊರಕಿದೆ.

ಉಳಿದ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು?

ಉಳಿದ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು?

ಈ ಚಿತ್ರಮಂದಿರಗಳನ್ನು ಹೊರತುಪಡಿಸಿ ನಗರದ ಉಳಿದ ಪ್ರಮುಖ ಚಿತ್ರಮಂದಿರಗಳಾದ ಊರ್ವಶಿಯಲ್ಲಿ ಮೈಕಲ್‌ಗೆ ಒಂದು ಪ್ರದರ್ಶನ ಹಾಗೂ ಪಠಾಣ್‌ಗೆ ಮೂರು ಪ್ರದರ್ಶನ ಸಿಕ್ಕಿದ್ದು, ಬನಶಂಕರಿಯ ಮಹದೇಶ್ವರ ಚಿತ್ರಮಂದಿರದಲ್ಲಿ ಕ್ರಾಂತಿಗೆ ಮೂರು ಪ್ರದರ್ಶನಗಳು ಹಾಗೂ ತಮಿಳಿನ ರನ್ ಬೇಬಿ ರನ್ ಮತ್ತು ಮೈಕಲ್ ಚಿತ್ರಗಳಿಗೆ ತಲಾ ಒಂದೊಂದು ಪ್ರದರ್ಶನ ಸಿಕ್ಕಿವೆ.

More from Filmibeat

English summary
Movies running in Bengaluru main theatres as on February 3. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X