ಜುಲೈ 15ರಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ?
2023ರ ಮೊದಲಾರ್ಧ ಮುಕ್ತಾಯಗೊಂಡು ದ್ವಿತೀಯಾರ್ಧ ಆರಂಭಗೊಂಡಿದ್ದು, ಮೊದಲಾರ್ಧದಲ್ಲಿ ಸಿಗದ ಯಶಸ್ಸನ್ನು ಎರಡನೇ ಭಾಗದಲ್ಲಾದರೂ ಕನ್ನಡ ಚಲನಚಿತ್ರರಂಗ ಸಾಧಿಸುತ್ತಾ ಎಂಬ ಪ್ರಶ್ನೆ ಹಾಗೂ ಕುತೂಹಲ ಮೂಡಿದೆ.
ಹೌದು, ಈ ವರ್ಷದ ಮೊದಲಾರ್ಧದಲ್ಲಿ ತೆರೆಕಂಡ ಕನ್ನಡದ ಬಹುತೇಕ ಎಲ್ಲಾ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಷಿಸಿದ ಗೆಲುವನ್ನು ಸಾಧಿಸಲಾಗದೇ ಇದ್ದು, ತೀವ್ರ ಹಿನ್ನಡೆ ಅನುಭವಿಸಿದೆ.

ಹೀಗೆ ವರ್ಷದ ದ್ವಿತಿಯಾರ್ಧದಲ್ಲಾದರೂ ಕನ್ನಡ ಚಿತ್ರರಂಗ ಯಶಸ್ಸು ಗಳಿಸುತ್ತಾ ಎಂದು ಕಾದಿದ್ದ ಸಿನಿರಸಿಕರಿಗೆ ವರ್ಷದ ದ್ವಿತೀಯಾರ್ಧ ಸಹ ಬೇಸರ ಮೂಡಿಸಿದೆ. ಕನ್ನಡದ ಯಾವೊಂದು ಚಿತ್ರವೂ ಸಹ ನೂರು ಕೋಟಿ ಕ್ಲಬ್ ಸೇರಲಾಗದೇ ಒದ್ದಾಡುತ್ತಿದೆ. ದ್ವಿತೀಯಾರ್ಧದ ಮೊದಲ ತಿಂಗಳ ಮೊದಲ ವಾರದಲ್ಲಿ ಹೇಳಿಕೊಳ್ಳುವಂತಹ ಚಿತ್ರಗಳನ್ನು ನೀಡುವಲ್ಲಿ ಕನ್ನಡ ಚಿತ್ರರಂಗ ವಿಫಲಗೊಂಡಿದೆ.
ಇದೀಗ ನಿನ್ನೆ ( ಜುಲೈ 14 ) ಜುಲೈ ತಿಂಗಳ ಎರಡನೇ ಶುಕ್ರವಾರ ಸಹ ಹಲವಾರು ಕನ್ನಡ ಚಿತ್ರಗಳು ಬಿಡುಗಡೆಗೊಂಡಿದ್ದು, ಈ ಚಿತ್ರಗಳೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಲ್ಲಿ ವಿಫಲಗೊಂಡಿವೆ. ಕನ್ನಡದ ಜತೆ ಈ ದಿನದಂದು ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ ಹಲವಾರು ಚಿತ್ರಗಳು ಸಹ ಬಿಡುಗಡೆಯಾಗಿವೆ. ಇವುಗಳಿಗೂ ಮುನ್ನ ಒಂದು ದಿನದ ಮುಂಚಿತವಾಗಿ ಹಾಲಿವುಡ್‌ನ ಮಿಷನ್ ಇಂಪಾಸಿಬಲ್ 7 ಚಿತ್ರ ಬಿಡುಗಡೆಗೊಂಡಿದೆ.
ಹೀಗೆ ಈ ವಾರ ಹಲವಾರು ಹೊಸ ಹೊಸ ಚಿತ್ರಗಳು ಬಿಡುಗಡೆಗೊಂಡಿದ್ದು, ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳೂ ಸಹ ತೆರೆಕಂಡಿದ್ದು, ನಗರದ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನ ಕಾಣುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಮಿಷನ್ ಇಂಪಾಸಿಬಲ್ ( ಇಂಗ್ಲಿಷ್ ) 4 ನಾಲ್ಕು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಬೇಬಿ ( ತೆಲುಗು ) 4 ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಮಿಷನ್ ಇಂಪಾಸಿಬಲ್ ( ಇಂಗ್ಲಿಷ್ ) 4 ನಾಲ್ಕು ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ನಾಯಕುಡು ( ತೆಲುಗು ) ಎರಡು ಪ್ರದರ್ಶನಗಳು, ಸಾಮಜವರಗಮನ ( ತೆಲುಗು ) ಒಂದು ಪ್ರದರ್ಶನ ಹಾಗೂ ನಮ್ ನಾಣಿ ಮದುವೆ ಪ್ರಸಂಗ ( ಕನ್ನಡ ) ಒಂದು ಪ್ರದರ್ಶನ
ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಓ ಮನಸೇ ( ಕನ್ನಡ ) ನಾಲ್ಕು ಪ್ರದರ್ಶನಗಳು
ಊರ್ವಶಿ: ಮಾವೀರನ್ ( ತಮಿಳು ) ಎರಡು ಪ್ರದರ್ಶನಗಳು ಹಾಗೂ ಮಿಷನ್ ಇಂಪಾಸಿಬಲ್ ( ಇಂಗ್ಲಿಷ್ ) ಎರಡು ಪ್ರದರ್ಶನಗಳು
ಅಭಿನಯ, ಕೆಜಿ ರಸ್ತೆ: 90 ಬಿಡಿ ಮನಿಗ್ ನಡಿ ( ಕನ್ನಡ ) ನಾಲ್ಕು ಪ್ರದರ್ಶನಗಳು
ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಮಾವೀರನ್ ( ತಮಿಳು ) 4 ಪ್ರದರ್ಶನಗಳು, ಮಿಷನ್ ಇಂಪಾಸಿಬಲ್ ( ಇಂಗ್ಲಿಷ್ ) ಒಂದು ಪ್ರದರ್ಶನ.
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಅಪರೂಪ ( ಕನ್ನಡ ) 2 ಪ್ರದರ್ಶನಗಳು, ಓ ಮನಸೇ ( ಕನ್ನಡ ) ಎರಡು ಪ್ರದರ್ಶನಗಳು, ಮಾವೀರನ್ ( ತಮಿಳು ) ಮೂರು ಪ್ರದರ್ಶನಗಳು ಹಾಗೂ ಮಿಷನ್ ಇಂಪಾಸಿಬಲ್ ( ಇಂಗ್ಲೀಷ್ ) ಮೂರು ಪ್ರದರ್ಶನಗಳು


Click it and Unblock the Notifications











