ಕೆಜಿ ರಸ್ತೆಯ 3 ಚಿತ್ರಮಂದಿರಗಳಲ್ಲಿ ಆದಿಪುರುಷ್ ಪ್ರದರ್ಶನ; ಉಳಿದ ಚಿತ್ರಮಂದಿರಗಳಲ್ಲಿ ಯಾವ ಚಿತ್ರ?
ನಿನ್ನೆ ( ಜೂನ್ 16 ) ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿದೆ. ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಆದಿಪುರುಷ್ ಚಿತ್ರಕ್ಕೆ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಲು ಆರಂಭಿಸಿದೆ.
ಹೀಗಿದ್ದರೂ ಸಹ ಚಿತ್ರ ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 140 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಕರ್ನಾಟಕದಲ್ಲಿ 8.17 ಕೋಟಿ ಗಳಿಕೆ ಮಾಡುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಒಂದೆಡೆ ಆದಿಪುರುಷ್ ಬಿಡುಗಡೆಗೊಂಡಿದ್ದರೆ ಇದಕ್ಕೂ ಒಂದು ದಿನ ಮುಂಚಿತವಾಗಿ ಹಾಲಿವುಡ್‌ನ 'ದ ಫ್ಲಾಶ್' ಸಿನಿಮಾ ಬಿಡುಗಡೆಗೊಂಡಿದೆ.

ಕನ್ನಡದಲ್ಲಿ ಜಯರಾಮ್ ಕಾರ್ತಿಕ್ ನಟನೆಯ ಐರಾವನ್, ಯಶ್ ಶೆಟ್ಟಿ ನಟನೆಯ ಬೇರ ಹಾಗೂ ಕೈ ಜಾರಿದ ಪ್ರೀತಿ ಚಿತ್ರಗಳು ತೆರೆಗೆ ಬಂದಿವೆ ಮತ್ತು ತಮಿಳಿನಲ್ಲಿ ಎಸ್ ಜೆ ಸೂರ್ಯ ನಟನೆಯ ಬೊಮ್ಮೈ ಚಿತ್ರ ಸಹ ಬಿಡುಗಡೆಗೊಂಡಿದೆ. ಹೀಗೆ ಆದಿಪುರುಷ್ ಅಬ್ಬರದ ನಡುವೆಯೂ ಹಲವಾರು ಚಿತ್ರಗಳು ತೆರೆಗೆ ಬಂದಿದ್ದು, ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳು ಬಿಡುಗಡೆಯಾಗಿವೆ. ಹಾಗಿದ್ದರೆ ಇಂದು ( ಜೂನ್ 17 ) ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಆದಿಪುರುಷ್ ( ಕನ್ನಡ ) 4 ನಾಲ್ಕು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಆದಿಪುರುಷ್ ( ತೆಲುಗು ) 4 ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಕೈ ಜಾರಿದ ಪ್ರೀತಿ ( ಕನ್ನಡ ) ನಾಲ್ಕು ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ನಮ್ ನಾಣಿ ಮದುವೆ ಪ್ರಸಂಗ ( ಕನ್ನಡ ) ಒಂದು ಪ್ರದರ್ಶನ, ಐರಾವನ್ ( ಕನ್ನಡ ) ಮೂರು ಪ್ರದರ್ಶನಗಳು ಹಾಗೂ ಬೇರ ( ಕನ್ನಡ ) ಒಂದು ಪ್ರದರ್ಶನ
ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಸ್ತಬ್ದ ( ಕನ್ನಡ ) ನಾಲ್ಕು ಪ್ರದರ್ಶನಗಳು
ಊರ್ವಶಿ: ಟ್ರಾನ್ಸ್ಫಾರ್ಮರ್ಸ್; ಆದಿಪುರುಷ್ ( ತೆಲುಗು ) ಎರಡು ಪ್ರದರ್ಶನಗಳು ಹಾಗೂ ಆದಿಪುರುಷ್ ( ಹಿಂದಿ ) ಎರಡು ಪ್ರದರ್ಶನಗಳು
ಅಭಿನಯ, ಕೆಜಿ ರಸ್ತೆ: ಟಕ್ಕರ್ ( ಕನ್ನಡ ) ಮೂರು ಪ್ರದರ್ಶನಗಳು ಹಾಗೂ ಬೇರ ( ಕನ್ನಡ ) ಒಂದು ಪ್ರದರ್ಶನ
ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಆದಿಪುರುಷ್ ( ತೆಲುಗು ) ನಾಲ್ಕು ಪ್ರದರ್ಶನಗಳು
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಆದಿಪುರುಷ್ ( ತೆಲುಗು ) ನಾಲ್ಕು ಪ್ರದರ್ಶನಗಳು, ಆದಿಪುರುಷ್ ( ಕನ್ನಡ ) ಒಂದು ಪ್ರದರ್ಶನ, ಬೇರ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ದರ್ಬಾರ್ ( ಕನ್ನಡ ) ಎರಡು ಪ್ರದರ್ಶನಗಳು.


Click it and Unblock the Notifications











