ಜೂನ್ 2ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನ?
2023ರ ಮೊದಲ ಐದು ತಿಂಗಳು ಮುಕ್ತಾಯವಾಗಿದ್ದು, ಆರನೇ ತಿಂಗಳ ಮೊದಲ ಶುಕ್ರವಾರ ಇಂದು ( ಜೂನ್ 2 ) ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಭಾರತದ ಹಲವಾರು ಚಿತ್ರರಂಗಗಳ ಅನೇಕ ಸಿನಿಮಾಗಳು ಬಿಡುಗಡೆಯಾಗಿವೆ.
ಕಳೆದೆರಡು ತಿಂಗಳುಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಹಾವಳಿಯಿಂದ ಸೈಲೆಂಟ್ ಆಗಿದ್ದ ಚಿತ್ರರಂಗಗಳು ಗರಿಗೆದರಿವೆ. ಕನ್ನಡದಲ್ಲಿ ದಿಗಂತ್, ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ನಟನೆಯ ಯದಾ ಯದಾ ಹೀ ಚಿತ್ರ ಬಿಡುಗಡೆಗೊಂಡಿದ್ದರೆ, ತೆಲುಗಿನಲ್ಲಿ ಚರ್ಚೆಗೀಡಾಗಿದ್ದ ಅಹಿಂಸಾ ಬಿಡುಗಡೆಯಾಗಿದೆ, ತಮಿಳಿನಲ್ಲಿ ಖ್ಯಾತ ಗಾಯಕ ಹಾಗೂ ನಟನಾಗಿರುವ ಹಿಪ್ ಹಾಪ್ ತಮಿಳ ಎಂದೇ ಖ್ಯಾತಿಯನ್ನು ಹೊಂದಿರುವ ಆದಿ ನಟನೆಯ ವೀರನ್ ಚಿತ್ರ ತೆರೆಗೆ ಬಂದಿದೆ.

ಇನ್ನು ಹಿಂದಿಯಲ್ಲಿ ಝರ ಹಟ್ಕೆ ಝರ ಬಚ್ ಕೆ ಚಿತ್ರ ಬಿಡುಗಡೆಯಾಗಿದೆ. ಅತ್ತ ಹಾಲಿವುಡ್‌ನ ದ ಬೋಗಿಮ್ಯಾನ್ ಚಿತ್ರಗಳು ಬಿಡುಗಡೆಯಾಗಿವೆ. ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳು ತೆರೆಗೆ ಬಂದಿದ್ದು, ನಗರದ ಪ್ರಮುಖ ಚಿತ್ರಮಂದಿರದಲ್ಲಿ ಈ ದಿನದಂದು ಯಾವ ಚಿತ್ರ ಪ್ರದರ್ಶನವಾಗುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಪರೇಶನ್ ( ತೆಲುಗು ) 4 ನಾಲ್ಕು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಸೈರನ್ ( ಕನ್ನಡ ) 4 ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಯದಾ ಯದಾ ಹೀ ( ಕನ್ನಡ ) ನಾಲ್ಕು ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ನಮ್ ನಾಣಿ ಮದುವೆ ಪ್ರಸಂಗ ( ಕನ್ನಡ ) ಎರಡು ಪ್ರದರ್ಶನಗಳು, ವಿರೂಪಾಕ್ಷ ( ತೆಲುಗು ) ಒಂದು ಪ್ರದರ್ಶನ, ಬಿಚ್ಚಗಾಡು ( ತೆಲುಗು ) ಒಂದು ಪ್ರದರ್ಶನ ಹಾಗೂ ಅಹಿಂಸಾ ( ತೆಲುಗು ) ಒಂದು ಪ್ರದರ್ಶನ
ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಅಹಿಂಸಾ ( ತೆಲುಗು ) ನಾಲ್ಕು ಪ್ರದರ್ಶನಗಳು
ಊರ್ವಶಿ: ವೀರನ್ ( ತಮಿಳು ) ಎರಡು ಪ್ರದರ್ಶನಗಳು ಹಾಗೂ ಕದರ್ ಭಾಷಾ ಎಂಡ್ರ ಮುದುರುಮಲಿಂಗಮ್ ( ತಮಿಳು ) ಎರಡು ಪ್ರದರ್ಶನಗಳು
ಅಭಿನಯ, ಕೆಜಿ ರಸ್ತೆ: ಜರ ಹಟ್ಕೆ ಜರ ಬಚ್ ಕೆ ( ಹಿಂದಿ ) ನಾಲ್ಕು ಪ್ರದರ್ಶನಗಳು
ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ವೀರನ್ ( ತಮಿಳು ) 2 ಪ್ರದರ್ಶನಗಳು, ದ ಕೇರಳ ಸ್ಟೋರಿ ( ಕನ್ನಡ ) ಒಂದು ಪ್ರದರ್ಶನ ಹಾಗೂ ಸ್ಪೈಡರ್ ಮ್ಯಾನ್ ಅಕ್ರಾಸ್ ದ ಸ್ಪೈಡರ್ ವರ್ಸ್ ( ಇಂಗ್ಲಿಷ್ ) ಎರಡು ಪ್ರದರ್ಶನಗಳು
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಡೇರ್ ಡೆವಿಲ್ ಮುಸ್ತಾಫಾ ( ಕನ್ನಡ ) ನಾಲ್ಕು ಪ್ರದರ್ಶನಗಳು, ಯದಾ ಯದಾ ಹೀ ( ಕನ್ನಡ ) ಮೂರು ಪ್ರದರ್ಶನಗಳು ಹಾಗೂ ದ ಕೇರಳ ಸ್ಟೋರಿ ( ಹಿಂದಿ ) ಒಂದು ಪ್ರದರ್ಶನ.


Click it and Unblock the Notifications











