ಹೊಯ್ಸಳ, ದಸರಾ, ಪತ್ತುತಲ: ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ?

ಈ ವಾರ, ಮಾರ್ಚ್ ತಿಂಗಳ ಅಂತಿಮ ವಾರ ನಿನ್ನೆ ( ಮಾರ್ಚ್ 30 ) ಹಾಗೂ ಇಂದು ( ಮಾರ್ಚ್ 31 ) ಎರಡು ದಿನಗಳು ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ಬಿಡುಗಡೆಗೊಂಡಿವೆ. ನಿನ್ನೆ ಗುರುವಾರವಾದರೂ ರಾಮನವಮಿ ಹಬ್ಬವಿದ್ದ ಕಾರಣ ಹಲವು ದೊಡ್ಡ ದೊಡ್ಡ ಚಿತ್ರಗಳೇ ಬಿಡುಗಡೆಗೊಂಡರೆ, ಇಂದು ಶುಕ್ರವಾರವಾದ ಕಾರಣ ಸಾಮಾನ್ಯವಾಗಿ ಸಿನಿಮಾಗಳು ತೆರೆಗೆ ಬಂದಿವೆ.

ನಿನ್ನೆ ಕನ್ನಡದಲ್ಲಿ ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಗುರುದೇವ್ ಹೊಯ್ಸಳ ಚಿತ್ರ ತೆರೆಗೆ ಬಂದಿದ್ದು, ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದಸರಾ, ತಮಿಳಿನಲ್ಲಿ ಮಫ್ತಿ ಚಿತ್ರದ ರಿಮೇಕ್ ಪತ್ತು ತಲ ಹಾಗೂ ಹಿಂದಿಯಲ್ಲಿ ಖೈದಿ ರಿಮೇಕ್ ಭೋಲಾ ಚಿತ್ರಗಳು ತೆರೆಗೆ ಬಂದವು.

Movies running in Bengaluru main theatres as on March 31

ಇಂದು ವೆಟ್ರಿಮಾರನ್ ನಿರ್ದೇಶನದ ತಮಿಳು ಸಿನಿಮಾ ವಿಡುದಲೈ ಭಾಗ 1 ಸಿನಿಮಾ ತೆರೆಗೆ ಬಂದಿದೆ. ಹೀಗೆ ಈ ವಾರ ತೆರೆಗೆ ಬಂದಿರುವ ಈ ಐದೂ ಚಿತ್ರಗಳೂ ಸಹ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಡಾಲಿ ಧನಂಜಯ್ ನಟನೆಯ ಹೊಯ್ಸಳ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು, ನಾನಿ ನಟನೆಯ ತೆಲುಗು ಚಿತ್ರ ದಸರಾ ಬ್ಲಾಕ್‌ಬಸ್ಟರ್ ಓಪನಿಂಗ್ ಪಡೆದುಕೊಂಡಿದೆ. ಅತ್ತ ರಿಮೇಕ್ ಚಿತ್ರಗಳಾದ ಭೋಲಾ ಹಾಗೂ ಪತ್ತು ತಲ ಚಿತ್ರಗಳೂ ಸಹ ಗೆದ್ದಿವೆ.

ಇನ್ನು ಇಂದು ಬಿಡುಗಡೆಯಾಗಿರುವ ವೆಟ್ರಿಮಾರನ್ ನಿರ್ದೇಶನದ ಹಾಗೂ ವಿಜಯ್ ಸೇತುಪತಿ ನಟನೆಯ ವಿಡುದಲೈ ಸಹ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಎಲ್ಲಾ ಚಿತ್ರಗಳೂ ಸಹ ಎಲ್ಲಾ ಭಾಷೆಯ ಚಿತ್ರಗಳನ್ನೂ ಸಹ ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿಯೇ ಓಪನಿಂಗ್ ಪಡೆದುಕೊಂಡಿವೆ. ಹಾಗಿದ್ದರೆ ಇಂದು ( ಮಾರ್ಚ್ 31 ) ಶುಕ್ರವಾರ ಬೆಂಗಳೂರಿನ ಯಾವ ಪ್ರಮುಖ ಚಿತ್ರಮಂದಿರದಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಕಬ್ಜ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಭೋಲಾ ( ಹಿಂದಿ ) ಮೂರು ಪ್ರದರ್ಶನಗಳು

Movies running in Bengaluru main theatres as on March 31

ಸಪ್ನ ಚಿತ್ರಮಂದಿರ: ಆರೆಂಜ್ ( ತೆಲುಗು ) ನಾಲ್ಕು ಪ್ರದರ್ಶನಗಳು ಹಾಗೂ ಆಂಧ್ರವಾಲಾ ( ತೆಲುಗು ) ಒಂದು ಪ್ರದರ್ಶನ

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಗುರುದೇವ್ ಹೊಯ್ಸಳ ( ಕನ್ನಡ ) ಐದು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ವೀರ ಖಡ್ಗಂ ( ತೆಲುಗು ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಫಲನ ಅಬ್ಬಾಯಿ ಫಲನ ಅಮ್ಮಾಯಿ ( ತೆಲುಗು ) ಒಂದು ಪ್ರದರ್ಶನ, ಮಾಯಾ ಬಜಾರ್ 1957 ( ತೆಲುಗು ) ಮೂರು ಪ್ರದರ್ಶನಗಳು ಹಾಗೂ ಚೇಸಿಂಗ್ ( ತೆಲುಗು ) ಒಂದು ಪ್ರದರ್ಶನ

ತ್ರಿವೇಣಿ ಚಿತ್ರಮಂದಿರ : ದಸರಾ ( ತೆಲುಗು ) ಐದು ಪ್ರದರ್ಶನಗಳು

ಊರ್ವಶಿ: ದಸರಾ ( ತೆಲುಗು ) ಮೂರು ಪ್ರದರ್ಶನಗಳು ಹಾಗೂ ವಿಡುದಲೈ ಪಾರ್ಟ್ 1 ( ತಮಿಳು ) ಒಂದು ಪ್ರದರ್ಶನ

ಅಭಿನಯ, ಕೆಜಿ ರಸ್ತೆ: ಭೋಲಾ ( ಹಿಂದಿ ) ಐದು ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಪತ್ತು ತಲ ( ತಮಿಳು ) ಒಂದು ಪ್ರದರ್ಶನ, ವಿಡುದಲೈ ಪಾರ್ಟ್ 1 ( ತಮಿಳು ) ಎರಡು ಪ್ರದರ್ಶನಗಳು ಹಾಗೂ ದಸರಾ ( ತೆಲುಗು ) ಎರಡು ಪ್ರದರ್ಶನಗಳು.

More from Filmibeat

English summary
Movies running in Bengaluru main theatres as on March 31. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X