ಮಾರ್ಚ್ ಮೊದಲ ವಾರ ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ?

2023ರ ಮೊದಲ ಎರಡು ತಿಂಗಳುಗಳು ಮುಕ್ತಾಯವಾಗಿದ್ದು, ಮಾರ್ಚ್ ತಿಂಗಳು ಆರಂಭಗೊಂಡಿದೆ. ಮೂರನೇ ತಿಂಗಳ ಮೊದಲ ಶುಕ್ರವಾರ ( ಮಾರ್ಚ್ 3 ) ಕನ್ನಡದಲ್ಲಿ ಬರೋಬ್ಬರಿ 10 ಸಿನಿಮಾಗಳು ತೆರೆಗೆ ಬಂದಿವೆ. ನಿರ್ದೇಶಕ ಮಂಸೋರೆ ನಿರ್ದೇಶನದ '19.10.2021' ಹಾಗೂ ಪೃಥ್ವಿ ಅಂಬರ್ ನಟನೆಯ ದೂರದರ್ಶನ ಸೇರಿದಂತೆ ಹಲವಾರು ಹೊಸಬರ ಚಿತ್ರಗಳೇ ಬೆಳ್ಳಿತೆರೆಗೆ ಅಪ್ಪಳಿಸಿವೆ. ಅತ್ತ ಪ್ರಭುದೇವ ನಟನೆಯ ತಮಿಳು ಸಿನಿಮಾ ಭಘೀರ ಸಿನಿಮಾವೂ ಇದೇ ದಿನ ಬಿಡುಗಡೆಗೊಂಡಿದೆ.

ಇವುಗಳ ಜತೆಗೆ ಕಳೆದ ವರ್ಷ ಬಾಕ್ಸ್ ಆಫೀಸ್ ಲೂಟಿ ಮಾಡಿದ ಹಲವು ವಿವಿಧ ಭಾಷೆಯ ಚಿತ್ರಗಳೂ ಸಹ ಮರುಬಿಡುಗಡೆಗೊಂಡಿವೆ. ಹೀಗೆ ವರ್ಷದ ಮೂರನೇ ತಿಂಗಳ ಮೊದಲ ಶುಕ್ರವಾರ ಹಲವು ಚಿತ್ರಗಳು ಬಿಡುಗಡೆಗೊಂಡಿದ್ದು, ಎಲ್ಲಾ ಭಾಷೆಯ ಚಿತ್ರಗಳನ್ನೂ ಸಹ ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರು ನಗರದಲ್ಲಿ ಈ ಎಲ್ಲಾ ಚಿತ್ರಗಳೂ ಸಹ ಬಿಡುಗಡೆಗೊಂಡಿವೆ.

Movies running in Bengaluru main theatres as on March 5; Kranti still running

ಹಾಗಾದರೆ ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಪ್ರಜಾರಾಜ್ಯ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಇನ್ ಕಾರ್ ( ಕನ್ನಡ ) ಎರಡು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಅಂಬಾಸಡರ್ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ಕ್ರಾಂತಿ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಬಳಗಂ ( ತೆಲುಗು ) ಮೂರು ಪ್ರದರ್ಶನಗಳು ಹಾಗೂ ಗ್ಯಾಂಗ್ ಲೀಡರ್ ( ತೆಲುಗು ) ಎರಡು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ : ಕಾಸಿನ ಸರ ( ಕನ್ನಡ ) ನಾಲ್ಕು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಬೀಗ ( ಕನ್ನಡ ) ಎರಡು ಪ್ರದರ್ಶನಗಳು, ಕಾಸಿನ ಸರ ( ಕನ್ನಡ ) ಎರಡು ಪ್ರದರ್ಶನಗಳು, ಪ್ರಜಾರಾಜ್ಯ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ 19.20.21 ( ಕನ್ನಡ ) ಎರಡು ಪ್ರದರ್ಶನಗಳು.

ಊರ್ವಶಿ ಚಿತ್ರಮಂದಿರ: ಭಘೀರ ( ಹಿಂದಿ ) ನಾಲ್ಕು ಪ್ರದರ್ಶನಗಳು

ಈ ಮೇಲ್ಕಂಡಂತೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಚಿತ್ರಗಳು ಪ್ರದರ್ಶನಗನ್ನು ಕಾಣುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇನ್ನೂ ಸಹ ಮುಖ್ಯ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬಿಡುಗಡೆಯಾದ 28 ದಿನಕ್ಕೆ ಚಿತ್ರ ಓಟಿಟಿಗೆ ಬಂದರೂ ಸಹ ಇನ್ನೂ ಮುಖ್ಯ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ನಾಳೆ ( ಮಾರ್ಚ್ 6 ) 40 ದಿನಗಳನ್ನು ಪೂರೈಸಲಿದೆ.

More from Filmibeat

English summary
Movies running in Bengaluru main theatres as on March 5. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X