'ಮೋಗ್ಲಿ' ವಿಮರ್ಶೆ : ಒಳ್ಳೆಯ ಕಥೆಗೆ, ಒಳ್ಳೆಯ ವಿಷಯಕ್ಕೆ ಸಾವಿಲ್ಲ

ಜಂಗಲ್ ಬುಕ್ ಪುಸ್ತಕದ ಮೋಗ್ಲಿ ಕಥೆಯನ್ನು ಯಾರಾದರೂ ಮರೆಯಲು ಸಾಧ್ಯವೆ. ಈ ಕಥೆಯನ್ನು ಪರದೆ ಮೇಲೆ ನೋಡುವುದು ದೊಡ್ಡ ಆನಂದ. ಎಷ್ಟೋ ಬಾರಿ ಕೇಳಿದರೂ ಬೇಸರ ಎನಿಸದ ಅದೇನೋ ಅಗೋಚರ ಶಕ್ತಿಯನ್ನು ಈ ಕಥೆ ಹೊಂದಿದೆ.

ಪುಸ್ತಕದಿಂದ ಹಿಡಿದು ಈ ಆನ್ ಲೈನ್ ಯುಗದ ವರೆಗೆ ಮೋಗ್ಲಿ ಮಾಡುತ್ತಿರುವ ಮೋಡಿ ಕಡೆಮೆಯಾಗಿಲ್ಲ. ನೆಕ್ಟ್ ಫ್ಲಿಕ್ಸ್ ನಲ್ಲಿ ಈಗ ಮತ್ತೆ ಮೋಗ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ಈ ಬಾರಿ ಮೋಗ್ಲಿ ಮತ್ತಷ್ಟು ಉತ್ಸಾಹದಲ್ಲಿ ಬಂದಿದ್ದಾನೆ.

'ಮೋಗ್ಲಿ ದಿ ಲೆಜೆಂಡ್ ಆಫ್ ಜಂಗಲ್' ನೆಕ್ಟ್ ಫ್ಲಿಕ್ಸ್ ನಲ್ಲಿ ನಿನ್ನೆ ಬಿಡುಗಡೆಯಾಗಿದೆ. ಹಿಂದಿ ಅವರಣಿಕೆಯಲ್ಲಿಯೂ ಚಿತ್ರ ರಿಲೀಸ್ ಆಗಿದೆ. ಬಾಲ ನಟ ರೋಹನ್ ಚಾಂದ್ ಮೋಗ್ಲಿ ಕಥೆಗೆ ಹೊಸ ರೂಪ ಕೊಟ್ಟಿದ್ದಾನೆ. ಆಂಡಿ ಸೆರ್ಕಿಸ್ ನಿರ್ದೇಶನಕ್ಕೆ ಪ್ರೇಕ್ಷಕರು ತಲೆ ಭಾಗಿದ್ದಾರೆ.

ಅಂದಹಾಗೆ, 'ಮೋಗ್ಲಿ ದಿ ಲೆಜೆಂಡ್ ಆಫ್ ಜಂಗಲ್' ವಿಮರ್ಶೆ ಮುಂದಿದೆ ಓದಿ...

ಹಳೆ ಎಳೆ, ಹೊಸ ಬೆಳೆ

ಹಳೆ ಎಳೆ, ಹೊಸ ಬೆಳೆ

'ಮೋಗ್ಲಿ ದಿ ಲೆಜೆಂಡ್ ಆಫ್ ಜಂಗಲ್' ಇಷ್ಟ ಆಗಲು ಮೊದಲ ಕಾರಣ ಅದರ ಕಥೆಯೇ. ನೂರು ಬಾರಿ ಕೇಳಿದರೂ ಮತ್ತೆ ಆ ಕಥೆಗೆ ಕಿವಿಗೊಡುವ ಅನೇಕರಿದ್ದಾರೆ. ಆ ಕಥೆಯನ್ನು ಇಟ್ಟುಕೊಂಡು ಹೊಸ ರೂಪದಲ್ಲಿ, ಒಂದು ತಾಜಾ ಹಣ್ಣಿನ ಹಾಗೆ ಪ್ರೇಕ್ಷಕರ ಮುಂದೆ ನಿರ್ದೇಶಕ ಆಂಡಿ ಸೆರ್ಕಿಸ್ ಇಟ್ಟಿದ್ದಾರೆ. ಮೋಗ್ಲಿ ಕಥೆ ತಿಳಿದವರಿಗೂ, ತಿಳಿಯದೆ ಇದ್ದವರಿಗೂ ಇದು ಮಜಾ ನೀಡುತ್ತದೆ.

ಪ್ರಾರಂಭ ಹೀಗೆ.. ತಿರುವು ಹಾಗೆ..

ಪ್ರಾರಂಭ ಹೀಗೆ.. ತಿರುವು ಹಾಗೆ..

ಸಣ್ಣ ಮಗು ಅಳುವಿನ ಧ್ವನಿಯ ಮೂಲಕ ಈ ಕಥೆ ಪ್ರಾರಂಭವಾಗುತ್ತದೆ. ಆ ಮಗು ಕಾಡಿನ ಪ್ರಾಣಿಗಳ ಜೊತೆಗೆ ಬೆಳೆಯುತ್ತದೆ. ಪ್ರಾಣಿಗಳೂ ಅವನನ್ನು ಪ್ರೀತಿಯಿಂದ ನೋಡುತ್ತವೆ. ಮೋಗ್ಲಿಗೆ ಪ್ರಾಣಿಗಳು, ಆ ಪ್ರಾಣಿಗಳಿಗೆ ಮೋಗ್ಲಿ ಜೀವದ ಭಾಗ ಆಗುತ್ತದೆ. ಕೆಲವು ಪ್ರಾಣಿಗಳು ಮೋಗ್ಲಿ ಕಂಡರೆ ಕೆಂಡ ಕಾರುತ್ತಿರುತ್ತವೆ. ಹೀಗಿರುವಾಗಲೇ, ಕಾಡಿಗೆ ಬರುವ ಜನರನ್ನು ನೋಡಿ ಮೋಗ್ಲಿ ನಾನು ಮನುಷ್ಯ ಎಂದು ಅರ್ಥ ಮಾಡಿಕೊಳ್ಳುತ್ತಾನೆ. ಆ ಮನುಷ್ಯರನ್ನು ಹಿಂಬಾಲಿಸುತ್ತಾನೆ. ಅಲ್ಲಿಂದ ಕಥೆ ದಿಕ್ಕಿ ಬದಲಾಗುತ್ತದೆ.

ಪ್ರಾಣಿಗಳು ಮತ್ತು ಮನುಷ್ಯರ ಸಮರ

ಪ್ರಾಣಿಗಳು ಮತ್ತು ಮನುಷ್ಯರ ಸಮರ

ಮೋಗ್ಲಿ ಮನುಷ್ಯರ ಜೊತೆಗೆ ಸೇರಿದೇ ಪ್ರಾಣಿಗಳಲ್ಲಿ ಅಸಮಾಧಾನ ಉಂಟಾಗುತ್ತದೆ. ಮೋಗ್ಲಿ ನಮಗೆ ಸೇರಿದವನು ಎಂಬ ಕೂಗು ಹೆಚ್ಚಾಗುತ್ತದೆ. ಜೊತೆಗೆ ಮನುಷ್ಯನಿಂದ ಆಗುವ ಕಾಡಿನ ನಾಶ ಪ್ರಾಣಿಗಳ ಕೋಪಕ್ಕೆ ಕಾರಣ ಆಗುತ್ತದೆ. ಅಲ್ಲಿಂದ ಪ್ರಾಣಿಗಳು ಮತ್ತು ಮನುಷ್ಯರ ಸಮರ ಶುರು ಆಗುತ್ತದೆ. ಕೊನೆಗೆ ಇದು ಎಲ್ಲಿಗೆ ಬಂದು ತಲುಪುತ್ತದೆ?, ಆ ಕಡೆಯೂ ಅಲ್ಲದೆ, ಈ ಕಡೆಯೂ ಅಲ್ಲದೆ ಮೋಗ್ಲಿ ಏನು ಮಾಡುತ್ತಾನೆ ಎನ್ನುವುದು ಈ ಕಥೆಯ ಅಂಶ.

ಮೋಗ್ಲಿಯ ಸಾಹಸ, ನಿರೂಪಣೆ ಪಾದರಸ

ಮೋಗ್ಲಿಯ ಸಾಹಸ, ನಿರೂಪಣೆ ಪಾದರಸ

ಮೋಗ್ಲಿ ಪಾತ್ರ ಮಾಡಿರುವ ಬಾಲ ನಟ ರೋಹನ್ ಚಾಂದ್ ನಟನೆ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಉದ್ದ ಕೂದಲ ಈ ಹುಡುಗನಿಗೆ ನೋಡುಗರನ್ನು ಸೆಳೆಯುವ ಶಕ್ತಿ ಇದೆ. ಅವನ ಸಾಹಸ ಅಬ್ಬಬ್ಬಾ ಎನ್ನಿಸುತ್ತದೆ. ಆತನ ದೃಶ್ಯವನ್ನು ಕಣ್ಣು ಮಿಟುಕಿಸದೆ ನೋಡಬೇಕು. ಆ ಹುಡುಗನ ಓಟದಂತೆ ಕಥೆಯ ನಿರೂಪಣೆ ಓಟ ಕೂಡ ವೇಗವಾಗಿದೆ.

ಮೇಕಿಂಗ್, ಸೌಂಡ್

ಮೇಕಿಂಗ್, ಸೌಂಡ್

ಹಾಲಿವುಡ್ ಸಿನಿಮಾಗಳ ಮೇಕಿಂಗ್ ಮತ್ತು ಸೌಂಡ್ ಬಗ್ಗೆ ಮಾತನಾಡುವ ಹಾಗೆ ಇರುವುದಿಲ್ಲ. ಈ ವೆಬ್ ಅವತರಣಿಕೆಯೂ ಕ್ವಾಲಿಟಿ ಮೂಲಕ ಮಾತನಾಡುತ್ತಿದೆ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳು ಹಾಗೂ ಚಿತ್ರದ ಸೌಂಡ್ ಪ್ರತಿ ದೃಶ್ಯವನ್ನು ಬೆರಗಿನಿಂದ ನೋಡುವಂತೆ ಮಾಡುತ್ತದೆ. ಈ ಎರಡು ಈ ಕಥೆಯ ಶಕ್ತಿಯಾಗಿವೆ.

ಒಳ್ಳೆಯ ಕಥೆಗೆ, ಒಳ್ಳೆಯ ವಿಷಯಕ್ಕೆ ಸಾವಿಲ್ಲ

ಒಳ್ಳೆಯ ಕಥೆಗೆ, ಒಳ್ಳೆಯ ವಿಷಯಕ್ಕೆ ಸಾವಿಲ್ಲ

ಒಳ್ಳೆಯ ವಿಷಯಕ್ಕೆ, ಒಳ್ಳೆಯ ಕಥೆಗೆ ಸಾವಿಲ್ಲ ಎನ್ನುವುದು ಮೋಗ್ಲಿ ಕಥೆಯನ್ನು ನೋಡಿದಾಗ ಬರುವ ಮಾತು. ಇಷ್ಟು ವರ್ಷವಾದರೂ ಈ ಕಥೆ ಇನ್ನೂ ಜೀವಂತವಾಗಿದ್ದು, ಇಂದಿನ ಪೀಳಿಗೆಯನ್ನು ತನ್ನ ತೆಕ್ಕೆಯಲ್ಲಿ ಹಾಕಿಕೊಂಡಿದೆ ಎಂದರೆ, ನಿಜಕ್ಕೂ ಇದು ಅದ್ಬುತದ ಸಂಗತಿ.

More from Filmibeat

English summary
Mowgli the legend of jungle review.
Read more about: review ವಿಮರ್ಶೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X