For Quick Alerts
  ALLOW NOTIFICATIONS  
  For Daily Alerts

  ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡಲು ಒತ್ತಾಯ

  |

  ಬೆಂಗಳೂರಿಗೆ ಮೆಟ್ರೋ ರೈಲು ಸೌಲಭ್ಯ ತರಬೇಕೆಂದು ಹಲವು ದಶಕಗಳ ಹಿಂದೆಯೇ ಕನಸು ಕಂಡಿದ್ದ ನಟ, ನಿರ್ದೇಶಕ ದಿವಂಗತ ಶಂಕರ್ ನಾಗ್ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇರಿಸುವಂತೆ ಸಂಸದ ಜಿ.ಸಿ. ಚಂದ್ರಶೇಖರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

  ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Filmibeat Kannada

  ಮಲ್ಲೇಶ್ವರ ಮಂತ್ರಿ ಸ್ಕ್ವೇರ್‌ನ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಮೆಟ್ರೋ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳ ಕಚೇರಿ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

  ದಿಗ್ಗಜ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡ 'ರಾಮಾಯಣ'ದ ಸೀತೆದಿಗ್ಗಜ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡ 'ರಾಮಾಯಣ'ದ ಸೀತೆ

  ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಅವರ ಹೆಸರು ಇಡುವ ಕುರಿತು ವಿವಿಧ ಕನ್ನಡಪರ ಸಂಘಟನೆಗಳು ಜಿ.ಸಿ. ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವು. ಮುಂದೆ ಓದಿ...

  ದೇಶದಾದ್ಯಂತ ಹೆಸರು ಮಾಡಿದವರು

  ದೇಶದಾದ್ಯಂತ ಹೆಸರು ಮಾಡಿದವರು

  ದಿವಂಗತ ಶಂಕರ್ ನಾಗ್ ಕನ್ನಡ ನಾಡಿನ ರಂಗಭೂಮಿಯಿಂದ ಬಂದು ಅತ್ಯಂತ ಜನಪ್ರಿಯ ನಾಯಕ ನಟರಾಗಿ, ಚಿತ್ರ ನಿರ್ದೇಶಕರಾಗಿ ಯಶಸ್ಸನ್ನು ಗಳಿಸಿದವರು. ಈ ಮೂಲಕ ಅವರು ಕನ್ನಡ ನಾಡಿನ ಜನಮಾನಸದಲ್ಲಿ ಬೆರೆತಿದ್ದಾರೆ. ಹಾಗೆಯೇ ಮಾಲ್ಗುಡಿ ಡೇಸ್ ಧಾರಾವಾಹಿ ಮೂಲಕ ದೇಶದಾದ್ಯಂತ ಹೆಸರು ಮಾಡಿದ್ದರು ಎಂದು ಅವರು ಪತ್ರದಲ್ಲಿ ಹೇಳಿದ್ದರು.

  ಈಗಲೂ ಅಭಿಮಾನ ಮೆರೆಯುತ್ತಾರೆ

  ಈಗಲೂ ಅಭಿಮಾನ ಮೆರೆಯುತ್ತಾರೆ

  ಶಂಕರ್ ನಾಗ್ ಅವರು ಮೂರು ದಶಕಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ಸೇವೆಯನ್ನು ತರಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದರು. ಅವರು ನಮ್ಮನ್ನು ಅಗಲಿ ಮೂರು ದಶಕಗಳಾದರೂ ಇಂದಿಗೂ ಬೆಂಗಳೂರಿನಲ್ಲಿರುವ ಬಹುತೇಕ ಆಟೋ ಚಾಲಕರು ತಮ್ಮ ವಾಹನಗಳ ಮೇಲೆ ಶಂಕರ್ ನಾಗ್ ಅವರ ಭಾವಚಿತ್ರವನ್ನು ಅಂಟಿಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ.

  ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್

  ಕನ್ನಡ ಸಂಘಟನೆಗಳ ಒತ್ತಾಯ

  ಕನ್ನಡ ಸಂಘಟನೆಗಳ ಒತ್ತಾಯ

  ಮಲ್ಲೇಶ್ವರ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣಕ್ಕೆ ಅಥವಾ ಯಾವುದಾದರೂ ಪ್ರಮುಖ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂಬುದಾಗಿ ಕನ್ನಡ ಸಂಘಟನೆಗಳ ಒಕ್ಕೂಟ ಮನವಿ ಮಾಡಿದ್ದಾರೆ. ಈ ಪ್ರಸ್ತಾವನೆಯನ್ನು ಅನುಮೋದಿಸಬೇಕು ಎಂದು ಚಂದ್ರಶೇಖರ್ ಹೇಳಿದ್ದಾರೆ.

  ಹಿಂದಿನಿಂದಲೂ ಇದೆ ಬೇಡಿಕೆ

  ಹಿಂದಿನಿಂದಲೂ ಇದೆ ಬೇಡಿಕೆ

  ಮೆಟ್ರೋ ನಿಲ್ದಾಣವೊಂದಕ್ಕೆ ಶಂಕರ್ ನಾಗ್ ಹೆಸರು ಇಡಬೇಕೆಂಬ ಕೂಗು ಹಲವು ವರ್ಷಗಳಿಂದ ಇದೆ. ವಾಸ್ತವವಾಗಿ ಮೆಟ್ರೋ ಆರಂಭಕ್ಕೂ ಮುನ್ನವೇ ಶಂಕರ್ ನಾಗ್ ಹೆಸರಿಡುವ ಪ್ರಸ್ತಾಪ ಕೇಳಿಬಂದಿತ್ತು. 'ನಮ್ಮ ಮೆಟ್ರೋ' ಎಂಬ ಹೆಸರಿಡುವ ಬದಲು ಶಂಕರ್ ನಾಗ್ ಮೆಟ್ರೋ ಎಂದೇ ಹೆಸರಿಡುವಂತೆ ಒತ್ತಾಯಿಸಲಾಗಿತ್ತು. ಈಗ ಕಡೇಪಕ್ಷ ನಿಲ್ದಾಣಕ್ಕಾದರೂ ಶಂಕರ್ ನಾಗ್ ಹೆಸರು ಇಡುವಂತೆ ಮನವಿ ಮಾಡಲಾಗಿದೆ.

  ಶಂಕರ್ ನಾಗ್ ಆಕ್ಸಿಡೆಂಟ್ ಗೂ ಸುನೀಲ್ ದುರಂತ ಸಾವಿಗೂ ಇದೆ ಘೋರ ಸಂಬಂಧ.! ಏನ್ಗೊತ್ತಾ.?ಶಂಕರ್ ನಾಗ್ ಆಕ್ಸಿಡೆಂಟ್ ಗೂ ಸುನೀಲ್ ದುರಂತ ಸಾವಿಗೂ ಇದೆ ಘೋರ ಸಂಬಂಧ.! ಏನ್ಗೊತ್ತಾ.?

  English summary
  Raja Sabha member GC Chandrashekhar wrote a letter to the state government and demanded a metro station named after Shankar Nag.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X