Just In
Don't Miss!
- News
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಸದೆ ಆಗುತ್ತಿದ್ದಂತೆ ವೈಯಕ್ತಿಕ ಜೀವನದ ಬಗ್ಗೆ ಅಚ್ಚರಿ ನೀಡಿದ ನಟಿ
ಲೋಕಸಭೆಯಲ್ಲಿ ಈ ಬಾರಿ ಸಿನಿ ಸೆಲೆಬ್ರಿಟಿಗಳ ಕಲರವ ಸ್ವಲ್ಪ ಹೆಚ್ಚಾಗಿರುತ್ತೆ. ಹತ್ತಕ್ಕೂ ಹೆಚ್ಚು ನಟ-ನಟಿಯರು ಸಂಸದರಾಗಿ ಸಂಸತ್ ಭವನ ಪ್ರವೇಶಿಸಿದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಜೋಡಿ ಸಂಸದರು ಬಹಳ ಸದ್ದು ಮಾಡ್ತಿದ್ದಾರೆ.
ಇತ್ತೀಚಿಗಷ್ಟೆ ಸಂಸತ್ ಭವನದ ಮುಂದೆ ನಿಂತು ಪೋಸ್ ಕೊಟ್ಟಿದ್ದ ನಟಿ ಹಾಗೂ ಸಂಸದೆ ಮಿಮಿ ಚಕ್ರಬೋರ್ತಿ ಹಾಗೂ ನುಸ್ರತ್ ಜಹಾನ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಈ ಸಲ ಲೋಕಸಭೆಗೆ ಗ್ಲಾಮರ್ ಹೆಚ್ಚಿಸಲಿರುವ ಈ ನಟಿಯರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಸಂಸತ್ ಮುಂದೆ ಪೋಸ್ ನೀಡಿ ಟ್ರೋಲ್ ಆದ ಸೆಲೆಬ್ರಿಟಿ ಸಂಸದೆಯರು
ಹೀಗಿರುವಾಗ, ನುಸ್ರತ್ ಜಹಾನ್ ಅಚ್ಚರಿ ಸುದ್ದಿಯೊಂದನ್ನ ನೀಡಿದ್ದಾರೆ. 29 ವರ್ಷದ ಈ ನಟಿಯ ಮದುವೆ ಬಗ್ಗೆ ಹಾಗಂತೆ ಹೀಗಂತೆ ಎಂಬ ಅಂತೆ-ಕಂತೆಗಳು ಗಿರಿಗಿಟ್ಲೆ ಹೊಡೆಯುತ್ತಿದೆ. ಇದಕ್ಕೆಲ್ಲಾ ತೆರೆ ಎಳೆಯುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ ನಟಿ ನುಸ್ರತ್ ಜಹಾನ್. ಅಷ್ಟಕ್ಕೂ, ಆ ಸುದ್ದಿ ಏನು? ಮುಂದೆ ಓದಿ.....

ಲವ್ವಲ್ಲಿ ಇದ್ದಾರಂತೆ ನೂತನ ಸಂಸದೆ
ಪಶ್ಚಿಮ ಬಂಗಾಳದ ಬಸರತ್ ಲೋಕಸಭೆ ಕ್ಷೇತ್ರದಿಂದ ಟಿಎಂಸಿ ಪಕ್ಷದ ಸಂಸದೆಯಾಗಿ ಆಯ್ಕೆಯಾಗಿರುವ ನುಸ್ರತ್, ನಿಖಿಲ್ ಜೈನ್ ಎಂಬುವರ ಜೊತೆ ಲವ್ವಲ್ಲಿ ಇದ್ದಾರೆ. ಇಬ್ಬರು ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಚರ್ಚೆಯಾಗ್ತಿತ್ತು. ಸಂಸದೆಯಾದ ಬೆನ್ನಲ್ಲೆ ಈ ಸುದ್ದಿ ಸ್ವಲ್ಪ ಹೆಚ್ಚು ಸದ್ದು ಮಾಡಿದೆ. ಅದಕ್ಕೀಗ ಪುಲ್ ಸ್ಟಾಪ್ ಇಟ್ಟಿದ್ದಾರೆ ನಟಿ ನುಸ್ರತ್.
ಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿರುವ ನವನವೋನ್ಮೇಷಶಾಲಿನಿಯರು

ನಿಶ್ಚಿತಾರ್ಥ ಖಚಿತ ಪಡಿಸಿದ ಬಂಗಾಳ ಸಂಸದೆ
ಭಾವಿ ಪತಿ ಕೈ ಹಿಡಿದಿರುವ ಫೋಟೋವೊಂದು ಶೇರ್ ಮಾಡಿರುವ ನಟಿ, ನಿನ್ನ ಕನಸಿಗಿಂತ ನೈಜತೆ ತುಂಬಾ ಚೆನ್ನಾಗಿದೆ. Best Thing to Hold on to in Life.. is Each Other' ಎಂದು ಪೋಸ್ಟ್ ಮಾಡಿ ನಿಖಿಲ್ ಜೈನ್ ಅವರನ್ನ ಟ್ಯಾಗ್ ಮಾಡಿ, ಮದುವೆ ಆಗುತ್ತಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ನುಸ್ರತ್ ಕೈಬೆರಳಿನಲ್ಲಿ ಎಂಗೇಜ್ ಮೆಂಟ್ ಉಂಗುರ ಕೂಡ ಗಮನ ಸೆಳೆದಿದೆ.

ಮೊದಲ ಹೆಜ್ಜೆಯಲ್ಲೆ ಎಂಪಿ
2011ರಲ್ಲಿ ಬೆಂಗಾಳಿ ಸಿನಿಮಾ 'ಶೋತ್ರು' ಮೂಲಕ ಸಿನಿ ಜರ್ನಿ ಆರಂಭಿಸಿದ ನುಸ್ರತ್ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಖೋಖಾ 420, ಖಿಲಾಡಿ, ಆಕ್ಷನ್, ಪವರ್, ಲವ್ ಎಕ್ಸ್ ಪ್ರೆಸ್, ಉಮಾ, ನಕಾಬ್ ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ. ಇತ್ತೀಚಿಗಷ್ಟೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದಿಂದ ಸ್ಪರ್ಧಿಸಿದ್ದರು. ಮೊದಲ ಸಲವೇ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.
ಸಂಸತ್ತಿನಲ್ಲಿ ಈ ಬಾರಿ ಮಹಿಳಾಮಣಿಯರ ಹವಾ, 78 ಸಂಸದೆಯರ ಆಯ್ಕೆ

ಜೋಡಿ ಸಂಸದೆಯರು
ನುಸ್ರತ್ ಜಹಾನ್ ಜೊತೆಯಲ್ಲಿ ಪಶ್ಚಿಮ ಬಂಗಾಳದ ಮತ್ತೊರ್ವ ನಟಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜಾಧವ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಿಮಿ ಚಕ್ರಬೋರ್ತಿ ಕೂಡ ಮೊದಲ ಚುನಾವಣೆಯಲ್ಲಿ ಲೋಕಸಭೆ ಪ್ರವೇಶಿಸಿದ್ದಾರೆ. ಮಿಮಿ ಹಾಗೂ ನುಸ್ರತ್ ಸ್ನೇಹಿತರಾಗಿದ್ದು ಲೋಕಸಭೆಯಲ್ಲಿ ಇವರಿಬ್ಬರು ಜೋಡಿ ಎಲ್ಲರ ಕಣ್ಣು ಕುಕ್ಕಲಿದೆ.