ಜೂ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಶುಭಕೋರಿದ ಶೋಭಾ ಕರಂದ್ಲಾಜೆ
ತೆಲುಗು ಚಿತ್ರರಂಗದ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ 38ನೇ ವರ್ಷದ ಜನುಮದಿನದ ಸಂಭ್ರಮದಲ್ಲಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಈ ಸಲ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿ ವಿನಂತಿಸಿದ್ದರು.
ಇದೀಗ, ಟಾಲಿವುಡ್ ಸೂಪರ್ ಸ್ಟಾರ್ ಎನ್‌ಟಿಆರ್ ಹುಟ್ಟಹಬ್ಬಕ್ಕೆ ಕರ್ನಾಟಕ ಸಂಸದೆ ಶೋಭಾ ಕರಂದ್ಲಾಜೆ ಶುಭಕೋರಿದ್ದಾರೆ. ಟ್ವಿಟ್ಟರ್ ಮೂಲಕ ವಿಶ್ ಮಾಡಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ''ದೇವರು ನಿಮಗೆ ದೀರ್ಘಕಾಲದ ಸಂತಸ, ಆರೋಗ್ಯ ಮತ್ತು ಜೀವನ ಕೊಡಲಿ'' ಎಂದಿದ್ದಾರೆ.
''ಜೂನಿಯರ್ ಎನ್.ಟಿ.ಆರ್ ಅವರ ಜನ್ಮದಿನಕ್ಕೆ ಹೃತ್ಪೂರ್ವಕ ಶುಭಾಶಯಗಳು. ಅಸಂಖ್ಯಾತ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ಪ್ರತಿಭಾವಂತ ನಟ. ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಿಮಗೆ ಆ ದೇವರು ದೀರ್ಘಕಾಲದ ಸಂತಸ, ಆರೋಗ್ಯ ಮತ್ತು ಜೀವನ ಸುಖಕರವಾಗಿ ಇರಲಿ'' ಎಂದು ಪೋಸ್ಟ್ ಮಾಡಿ ಹಾರೈಸಿದ್ದಾರೆ.

ಎನ್‌ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಕೊರಟಲಾ ಶಿವ ನಿರ್ದೇಶಿಸಲಿರುವ 30ನೇ ಚಿತ್ರತಂಡ ಪೋಸ್ಟರ್‌ವೊಂದು ಬಿಡುಗಡೆ ಮಾಡಿದೆ. ಪ್ರಶಾಂತ್ ನೀಲ್ ಜೊತೆ ಯಂಗ್ ಟೈಗರ್ ಸಿನಿಮಾ ಮಾಡ್ತಿದ್ದು, ಇದು 31ನೇ ಸಿನಿಮಾ ಆಗಲಿದೆ. ಈ ಚಿತ್ರದ ಬಗ್ಗೆ ಸ್ವತಃ ಪ್ರಶಾಂತ್ ಪ್ರಕಟಿಸಿದ್ದಾರೆ.
ಪ್ರಸ್ತುತ, ಜೂ ಎನ್‌ಟಿಆರ್ ಆರ್‌ಆರ್‌ಆರ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ತೇಜ ಸಹ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.


Click it and Unblock the Notifications











