ಕೊರೊನಾ ಮುಕ್ತವಾದ ಸಂಸದೆ ಸುಮಲತಾ: ಈಗಲೇ ಹೊರಬರುವುದಿಲ್ಲವಂತೆ
ನಟಿ, ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಗೆ ತುತ್ತಾಗಿ ಅದರಿಂದ ಬಿಡುಗಡೆ ಪಡೆದಿದ್ದಾರೆ. ಈ ಬಗ್ಗೆ ಇಂದು ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Recommended Video
ಜುಲೈ 6 ನೇ ತಾರೀಖು ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಮತ್ತು ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಐಸೋಲೇಶನ್ ಗೆ ಒಳಪಟ್ಟಿದ್ದರು.
ಇದೀಗ ಮೂರು ವಾರಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸುಮಲತಾ, 'ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ ಕೊರೊನಾದಿಂದ ಗುಣಮುಖವಾಗಿದ್ದೇನೆ' ಎಂದು ಹೇಳಿದ್ದಾರೆ. ಜೊತೆಗೆ ಪತ್ರವೊಂದನ್ನು ಸಹ ಹಂಚಿಕೊಂಡಿದ್ದಾರೆ.

ಈಗಲೇ ಹೊರಗೆ ಬರುವುದಿಲ್ಲ ಸುಮಲತಾ
ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿದ್ದೇನೆ, ಕೊರೊನಾದಿಂದ ಗುಣಮುಖವಾಗಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ. ಆದರೆ ಅವರು ಈಗಲೇ ಮನೆಯಿಂದ ಹೊರಗೆ ಬರುವುದಿಲ್ಲವಂತೆ. ಬದಲಿಗೆ ವೈದ್ಯರ ಸಲಹೆಯಂತೆ ಇನ್ನೂ ನಾಲ್ಕು ವಾರದ ವಿಶ್ರಾಂತಿ ಪಡೆದು ಸೇವೆಗೆ ಮರಳುತ್ತಾರಂತೆ.

ವೈದ್ಯ ಸತೀಶ್ ಅವರ ಸಲಹೆ ಪಾಲಿಸಿದ್ದಾರೆ ಸುಮಲತಾ
ಕೊರೊನಾ ಸಮಯದಲ್ಲಿ ವೈದ್ಯ ಸತೀಶ್ ಅವರು ನೀಡಿದ ಸಲಹೆಗಳಿಗೆ ಧನ್ಯವಾದ ಹೇಳಿರುವ ಸುಮಲತಾ. ಜನರ ಜೊತೆಗೆ ಹಿಂದಿನ ಉಲ್ಲಾಸದಿಂದ ಬೆರೆಯಲು ಇನ್ನೂ ನಾಲ್ಕು ವಾರಗಳ ವಿಶ್ರಾಂತಿ ಅವಶ್ಯಕ ಎಂದು ವೈದ್ಯರು ಹೇಳಿದ್ದಾರಂತೆ.

ಕೊರೊನಾಕ್ಕೆ ಭಯ ಪಡಪೇಡಿ ಎಂದ ಸುಮಲತಾ
ಕೊರೊನಾ ಪಾಸಿಟಿವ್ ಆದವರಿಗೆ ಧೈರ್ಯದ ಮಾತುಗಳನ್ನು ಹೇಳಿರುವ ಸುಮಲತಾ, 'ಕೊರೊನಾ ಬಂದವರು ಹೆಸರಬೇಕಿಲ್ಲ. ವೈದ್ಯರ ಸಲಹೆ ತಪ್ಪದೆ ಪಾಲಿಸಿ. ಭಯ ಪಡಬೇಡಿ, ನಿಮ್ಮ ಪಾಸಿಟಿವ್ ಯೋಚನೆಗಳಿಂದ ಕೊರೊನಾ ಪಾಸಿಟಿವ್ ಅನ್ನು ಸೋಲಿಸಿ' ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ಸುಮಲತಾ ಧನ್ಯವಾದ
ಕೊರೊನಾ ಪಾಸಿಟಿವ್ ಆದಾಗ ತಮ್ಮ ಪರವಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಸುಮಲತಾ, 'ಪಾಸಿಟಿವ್ ಆದಾಗ, ನೀವೆಲ್ಲರೂ ನನಗಾಗಿ ಪ್ರಾರ್ಥಿಸಿದ್ದೀರಿ, ಬೇಗ ಗುಣಮುಖ ಆಗಲಿ ಎಂದು ಹಾರೈಸಿದ್ದೀರಿ. ಇದೇ ಹಾರೈಕೆಗಳು, ಶುಭಕಾಮನೆಗಳಿಂದ ನಾನು ಪೂರ್ಣವಾಗಿ ಗುಣಮುಖ ಆಗಿದ್ದೇನೆ' ಎಂದಿದ್ದಾರೆ.


Click it and Unblock the Notifications











