ಸಂಸತ್ತಿನ ಮುಂದೆ ಹೆಮ್ಮೆಯಿಂದ ನಿಂತ ಮಂಡ್ಯ ಸಂಸದೆ ಸುಮಲತಾ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆ ಆದ ಸಂಸದೆ ಸುಮಲತಾ ಅಂಬರೀಶ್ ಸಂಸತ್ತಿನ ಪ್ರವೇಶ ಮಾಡಿದ್ದಾರೆ. ದೆಹಲಿಯ ಸಂಸತ್ತಿನ ಮುಂದೆ ಹೆಮ್ಮೆಯಿಂದ ನಿಂತಿದ್ದಾರೆ.
ಸಾಕಷ್ಟು ಕಷ್ಟಗಳ ನಡುವೆ, ದೊಡ್ಡ ಪರಿಶ್ರಮದ ಜೊತೆಗೆ, ಜನರ ಆಶೀರ್ವಾದದೊಂದಿಗೆ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿದ್ದಾರೆ. ಈ ಎಲ್ಲದರ ನಂತರ ಸಂಸತ್ತಿನ ಮುಂದೆ ನಿಂತು ಒಂದು ಫೋಟೋ ತೆಗದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

''ಒಂದು ದೂರದ ಪಯಣ...ಪ್ರಜಾಪ್ರಭುತ್ವದ ದೇವಲಯಕ್ಕೆ.. ಜೈ ಹಿಂದ್, ಜೈ ಕರ್ನಾಟಕ ಮಾತೆ'' ಎಂದು ಬರೆದುಕೊಂಡಿದ್ದಾರೆ.
ನಟಿ ಪ್ರಿಯಾಂಕ ಉಪೇಂದ್ರ, ನಿರ್ದೇಶಕ ಚೈತನ್ಯ ಸೇರಿದಂತೆ ಹಲವರು ಸುಮಲತಾ ಅವರಿಗೆ ಕಮೆಂಟ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆ ಆದ ಮೊದಲ ಮಹಿಳಾ ಪಕ್ಷೇತರ ಅಭ್ಯರ್ಥಿ ಸುಮಲತಾ ಆಗಿದ್ದಾರೆ. ನಿಖಿಲ್ ಕುಮಾರ್ ರನ್ನು 1,25,876 ಮತಗಳಿಂದ ಸುಮಲತಾ ಸೋಲಿಸಿದ್ದರು.
English summary
Madhya MP Sumalatha Ambarish took a photo front of Delhi parliament.


Click it and Unblock the Notifications