»   » ಫೆ.11ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಫೆ.11ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

Posted By: Staff
Subscribe to Filmibeat Kannada

ಬೆಂಗಳೂರು : ಹಂಸಜ್ಯೋತಿ ಸಂಸ್ಥೆ ನೀಡುವ 'ಹಂಸರತ್ನ" ಪ್ರಶಸ್ತಿಗೆ ಖ್ಯಾತ ಚಿತ್ರನಟ ಎಂ.ಪಿ. ಶಂಕರ್‌ ಪಾತ್ರರಾಗಿದ್ದಾರೆ. ಫೆ.11ರಂದು ರವೀಂದ್ರಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ವಿಷಯವನ್ನು ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರತಿವರ್ಷ ಸನ್ಮಾನಿಸುತ್ತಾ ಬಂದಿರುವ ಹಂಸಜ್ಯೋತಿ ಸಂಸ್ಥೆಯು ಈ ಸಾಲಿನ ಪ್ರಶಸ್ತಿಗಳಿಗೆ ಈ ಕೆಳಕಂಡವರನ್ನು ಆಯ್ಕೆ ಮಾಡಿದೆ. ಅರ್ಜುನ್‌ದೇವ್‌ (ಪತ್ರಿಕೋದ್ಯಮ), ಕೆ.ಸಿ. ರಾಮಮೂರ್ತಿ(ಆಡಳಿತ), ಪ್ರೊ. ಉಡುಪಿ ಶ್ರೀನಿವಾಸ (ವಿಜ್ಞಾನ), ಡಾ.ಜಯಪ್ರಕಾಶ್‌ ನಾರಾಯಣ್‌ (ವೈದ್ಯಕೀಯ), ಸುಭದ್ರ ವೆಂಕಟಪ್ಪ (ಸಾಮಾಜಿಕ), ಶ್ಯಾಮಲಾ ಜಿ. ಭಾವೆ (ಸಂಗೀತ), ಆರ್‌.ಟಿ. ರಮಾ (ರಂಗಭೂಮಿ), ಉಷಾದಾತಾರ್‌ (ನೃತ್ಯ), ಎಚ್‌.ಎ. ಭಾಗ್ಯಲಕ್ಷ್ಮೀ (ಶಿಕ್ಷಣ), ಎಂ. ರಾಜಗೋಪಾಲ್‌ (ಕ್ರೀಡೆ), ಡಿ.ವಿ. ಸುಧೀಂದ್ರ, ರೇವಣಸಿದ್ಧಯ್ಯ (ಸಾಹಿತ್ಯ), ರವಿಕಿರಣ್‌ (ಕಿರುತೆರೆ), ಬಿ.ಎಂ. ರಾಮಚಂದ್ರ (ರಂಗಭೂಮಿ), ಹೆಬ್ಬಾಣಿ ಮಾದಯ್ಯ (ಜಾನಪದ).

ಪ್ರಶಸ್ತಿ ವಿಜೇತರಿಗೆ ವಿಧಾನಪರಿಷತ್‌ ಸಭಾಪತಿ ಬಿ.ಎಲ್‌. ಶಂಕರ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌, ಮಾಜಿ ಸಚಿವ ಎಂ.ಪಿ. ಪ್ರಕಾಶ್‌, ಸಿ. ಸೋಮಶೇಖರ್‌ ಮತ್ತು ಡೇವಿಡ್‌ ಸಿಮಯೋನ್‌ ಅವರು ಪಾಲ್ಗೊಳ್ಳುತ್ತಿದ್ದಾರೆ.(ಇನ್‌ಫೋ ವಾರ್ತೆ)

English summary
Senior kannada film actor m.p. shankar and others bags Hamsarathna award

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada