ಮೊನ್ನೆ ಟ್ರೆಂಡಿಂಗ್, ಇವತ್ತು ಮಿಲಿಯನ್: ಇದು ದರ್ಶನ್ ಸಿನಿಮಾ

By Bharath Kumar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಮಿಸ್ಟರ್ 'ಐರಾವತ' ಬಿಡುಗಡೆಯಾಗಿ ಮೂರು ವರ್ಷದ ಬಳಿಕ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಈಗ ಈ ಸಿನಿಮಾ ಇನ್ನೊಂದು ದಾಖಲೆ ಮಾಡಿದೆ.

ಹೌದು, 2015ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ 'ಐರಾವತ' ಚಿತ್ರವನ್ನ ಇತ್ತೀಗಷ್ಟೆ (ಜುಲೈ 12) ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಈಗ ಈ ಚಿತ್ರದ ವೀಕ್ಷಕರ ಸಂಖ್ಯೆ 1 ಮಿಲಿಯಿನ್ ದಾಟಿದೆ.

ಸಿನಿಮಾ ಬಂದು ಮೂರು ವರ್ಷವಾಗಿದ್ದರೂ, ಆನ್ ಲೈನ್ ನಲ್ಲಿ ಕೂತೂ ಸಿನಿಮಾ ನೋಡುವ ಪ್ರೇಕ್ಷಕರಿದ್ದಾರೆ ಅಂದ್ರೆ ಅದು ನಿಜಕ್ಕೂ ವಿಶೇಷವೇ ಸರಿ.

mr airavata crossed 1 million views on youtube

ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ದರ್ಶನ್ ಪೊಲೀಸ್ ಆಫೀಸರ್ ಆಗಿದ್ದರು. ಬಾಲಿವುಡ್ ಬ್ಯೂಟಿ ಉರ್ವಶಿ ರೌಟೆಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಹರಿಕೃಷ್ಣ ಸಂಗೀತ ನೀಡಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದರು. ಇನ್ನುಳಿದಂತೆ ಪ್ರಕಾಶ್ ರಾಜ್, ಅನಂತ್ ನಾಗ್, ಸಿತಾರ, ಅವಿನಾಶ್, ಸಾಧುಕೋಕಿಲಾ, ಬಿಲೆಟ್ ಪ್ರಕಾಶ್, ಚಿಕ್ಕಣ್ಣ ಅಭಿನಯಿಸಿದ್ದರು.

ಐರಾವತ ಚಿತ್ರದ ನಂತರ 'ಜಗ್ಗುದಾದ' ಹಾಗೂ 'ಚಕ್ರವರ್ತಿ' ಸಿನಿಮಾದಲ್ಲಿ ದರ್ಶನ್ ನಟಿಸಿದ್ದಾರೆ. ಈಗ 'ಕುರುಕ್ಷೇತ್ರ' ಶೂಟಿಂಗ್ ಮುಗಿಸಿ 'ಯಜಮಾನ' ಸಿನಿಮಾ ಮಾಡ್ತಿದ್ದಾರೆ.

More from Filmibeat

English summary
Challenging star darshan starrer mr airavata movie crossed 1 million views on youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X