ಹೊಸ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ 'Mr.ಐರಾವತ'

By Harshitha

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 1 ರಂದು ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಸಿನಿಮಾ 'Mr.ಐರಾವತ' ತೆರೆಗೆ ಅಪ್ಪಳಿಸುತ್ತಿದೆ.

ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'Mr.ಐರಾವತ' ದರ್ಶನವಾಗಲಿದೆ. ಇದರೊಂದಿಗೆ ವಿದೇಶದಲ್ಲೂ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ 'Mr.ಐರಾವತ' ಹೊಸ ದಾಖಲೆ ನಿರ್ಮಿಸಿದೆ. [ಮಿಸ್ಟರ್ ಐರಾವತನ ಬಗ್ಗೆ ಚಾಲೆಂಜಿಂಗ್ ಸ್ಟಾರ್ಗೇ ಡೌಟು!]

'Mr.Airavata' to release in record breaking 45 theaters in USA

ಅದೇನಪ್ಪಾ ಅಂದ್ರೆ, ಯು.ಎಸ್.ಎ ನಲ್ಲಿ ಬರೋಬ್ಬರಿ 45 ಚಿತ್ರಮಂದಿರಗಳಲ್ಲಿ 'Mr.ಐರಾವತ' ತೆರೆ ಕಾಣಲಿದೆ. ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಇದು ಪ್ರಪ್ರಥಮ ಬಾರಿಗೆ..!

ಅಂದ್ಹಾಗೆ, 'Mr.ಐರಾವತ' ಈ ದಾಖಲೆ ನಿರ್ಮಾಣ ಮಾಡಲು ಕಾರಣ ಲಹರಿ ಆಡಿಯೋ ಸಂಸ್ಥೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರ ವಿತರಣೆ ಮಾಡುವುದಕ್ಕೆ ಧುಮುಕಿರುವ ಲಹರಿ ಸಂಸ್ಥೆ, iDream Media ಸಹಯೋಗದೊಂದಿಗೆ 'Mr.ಐರಾವತ' ಚಿತ್ರವನ್ನ ಉತ್ತರ ಅಮೇರಿಕದಲ್ಲಿ ದಾಖಲೆ ಮಟ್ಟದ 45 ಥಿಯೇಟರ್ ಗಳಿಗೆ ವಿತರಣೆ ಮಾಡಿದೆ. ಇದರಿಂದ ಅಮೇರಿಕನ್ನಡಿಗರಿಗೆ 'Mr.ಐರಾವತ' ದರ್ಶನ ಅಕ್ಟೋಬರ್ 1 ರಂದೇ ಆಗಲಿದೆ. ['Mr.ಐರಾವತ' ಟಿಕೆಟ್ ಬೆಲೆ ಅಬ್ಬಬ್ಬಾ...ಅಷ್ಟೊಂದಾ.?!]

ಎ.ಪಿ.ಅರ್ಜುನ್ ನಿರ್ದೇಶಿಸಿರುವ 'Mr.ಐರಾವತ' ಚಿತ್ರದಲ್ಲಿ ದರ್ಶನ್ ಜೊತೆ ಊರ್ವಶಿ ರೌಟೇಲ ಡ್ಯುಯೆಟ್ ಹಾಡಿದ್ದಾರೆ. ವಿಲನ್ ಆಗಿ ಪ್ರಕಾಶ್ ರಾಜ್ ಘರ್ಜಿಸಿದ್ದಾರೆ. ಅದ್ದೂರಿಯಾಗಿ ಸಂದೇಶ್ ನಾಗರಾಜ್ ಚಿತ್ರ ನಿರ್ಮಿಸಿದ್ದಾರೆ.

More from Filmibeat

English summary
Kannada Actor Darshan starrer 'Mr.Airavata' will be hitting the theaters on 1st October, 2015. A record of 45 theater release is planned in the USA, for a simultaneous release on the same day by Lahari Music, in association with iDream Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X