»   » ಫಿಲಂಫೇರ್ ಪ್ರಶಸ್ತಿ ಗೆದ್ದು ಬಿಟ್ಟ ನಮ್ಮ 'ರಾಮಾಚಾರಿ'

ಫಿಲಂಫೇರ್ ಪ್ರಶಸ್ತಿ ಗೆದ್ದು ಬಿಟ್ಟ ನಮ್ಮ 'ರಾಮಾಚಾರಿ'

Posted By:
Subscribe to Filmibeat Kannada

ಪ್ರತಿಷ್ಠಿತ 62ನೇ ಫಿಲಂಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಚೆನ್ನೈನಲ್ಲಿ ನಡೆಯುತ್ತಿದೆ. ಫಿಲಂಫೇರ್ ಪ್ರಶಸ್ತಿ ರೇಸ್ ನಲ್ಲಿದ್ದ ಕನ್ನಡದ ಎಲ್ಲಾ ಚಿತ್ರಗಳನ್ನ ಹಿಂದಕ್ಕೆ ತಳ್ಳಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಬ್ರೇಕಿಂಗ್ ನ್ಯೂಸ್ ಅಂದ್ರೆ, ಇದೇ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಟನೆಗೆ ರಾಕಿಂಗ್ ಸ್ಟಾರ್ ಯಶ್ 'ಉತ್ತಮ ನಟ' ಪ್ರಶಸ್ತಿ ಪಡೆದಿದ್ದಾರೆ.


2014 ಡಿಸೆಂಬರ್ ನಲ್ಲಿ ತೆರೆಕಂಡ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ನಟಿಸಿದ ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದರು.


Mr and Mrs Ramachari wins Filmfare Award in Best film and Best Actor Category

ಗಲ್ಲಪೆಟ್ಟಿಗೆಯನ್ನ ಕೊಳ್ಳೆಹೊಡೆದ 'ರಾಮಾಚಾರಿ' ಇತ್ತೀಚೆಗಷ್ಟೇ 25 ವಾರಗಳನ್ನ ಪೂರೈಸಿ, ಅನೇಕ ಚಿತ್ರಮಂದಿರಗಳಲ್ಲಿ ಮುನ್ನುಗುತ್ತಿದೆ. ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಫಿಲಂಫೇರ್ ಪ್ರಶಸ್ತಿಯನ್ನೂ ಗಿಟ್ಟಿಸುವಲ್ಲಿ ಯಶಸ್ವಿ ಆಗಿದೆ.


ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ದೃಶ್ಯ', ಕೃಷ್ಣ ನಿರ್ದೇಶನದ 'ಗಜಕೇಸರಿ', ಶ್ರೀಮುರುಳಿ ನಟನೆಯ 'ಉಗ್ರಂ' ಮತ್ತು ರಕ್ಷಿತ್ ಶೆಟ್ಟಿ ನಟಿಸಿರುವ 'ಉಳಿದವರು ಕಂಡಂತೆ' ಚಿತ್ರ ಅತ್ತ್ಯುತ್ತಮ ಚಿತ್ರ ರೇಸ್ ನಲ್ಲಿತ್ತು. [ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ 'ಉಳಿದವರು ಕಂಡಂತೆ' ಲೀಡಿಂಗ್]


ಇನ್ನೂ 'ಪವರ್ ***' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್, 'ಉಳಿದವರು ಕಂಡಂತೆ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ, 'ಅಧ್ಯಕ್ಷ' ಚಿತ್ರಕ್ಕೆ ಶರಣ್, 'ಉಗ್ರಂ' ಸಿನಿಮಾಗೆ ನಾಮಿನೇಟ್ ಆಗಿದ್ದ ಶ್ರೀಮುರುಳಿ ಅವರನ್ನ ಬೀಟ್ ಮಾಡಿ ಶ್ರೇಷ್ಠ ನಟ ಪ್ರಶಸ್ತಿಯನ್ನ ಯಶ್ ಗಿಟ್ಟಿಸಿಕೊಂಡಿದ್ದಾರೆ.


ಪ್ರಶಸ್ತಿ ಪಡೆಯುವುದಕ್ಕೆ ಈಗ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ತಂಡ ಚೆನ್ನೈಗೆ ಹಾರಿದೆ.

English summary
Rocking Star Yash starrer 'Mr and Mrs Ramachari' has won Filmfare Award in 'Best Film' and 'Best Actor' Category.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada