»   » 'ಉಪ್ಪಿಟ್ಟು' ರುಚಿ ನೋಡಿದ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ನಿರ್ದೇಶಕರು

'ಉಪ್ಪಿಟ್ಟು' ರುಚಿ ನೋಡಿದ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ನಿರ್ದೇಶಕರು

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಕಂಡ ಒಬ್ಬ ಡಿಪರೆಂಟ್ ಹಾಗೂ ಅದ್ಭುತ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ವಿಶೇಷ ಚಿತ್ರ 'ಉಪ್ಪಿ 2' ನಿನ್ನೆ ತೆರೆ ಕಂಡಿದ್ದು, ಅಭಿಮಾನಿಗಳ ಬಹುದಿನಗಳ ಕನಸು ಈಡೇರಿದಂತಾಗಿದೆ.

ಇನ್ನೂ ಮೆದುಳಿಗೆ ಕೆಲಸ ಕೊಡುವ 'ಉಪ್ಪಿ 2' ಚಿತ್ರವನ್ನು ಬರೀ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಮಾತ್ರವಲ್ಲದೇ, ಸ್ಯಾಂಡಲ್ ವುಡ್ ನ ಕೆಲವು ನಿರ್ದೇಶಕರುಗಳು ನೋಡಿ ಉಪೇಂದ್ರ ಅವರ ಫ್ಯಾನ್ ಆಗಿಬಿಟ್ಟಿದ್ದಾರೆ.

Santhosh upendra

ಅಂದಹಾಗೆ ಈ ವರ್ಷದ ಸೈಮಾ ಆವಾರ್ಡ್ ನಲ್ಲಿ ಅತೀ ಹೆಚ್ಚು ಪ್ರಶಸ್ತಿ ಗಳಿಸಿಕೊಂಡ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮನ್ 'ಉಪ್ಪಿ 2' ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.['ರಾಮಾಚಾರಿ' ನಿರ್ದೇಶಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..! ]

ಇಂತಹ ಡಿಫರೆಂಟ್ ಚಿತ್ರಗಳು ಕನ್ನಡದಲ್ಲಿ ಬಂದರೆ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದೀಗ ಬಹುದಿನಗಳ ನಂತರ ಉಪೇಂದ್ರ ಅವರು ಒಳ್ಳೆಯ ಚಿತ್ರದ ಮೂಲಕ ಗಾಂಧಿನಗರಕ್ಕೆ ವಾಪಸಾಗಿದ್ದಾರೆ. ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Santhosh Anandram


ಜೊತೆಗೆ ಸಂತೋಷ್ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ದೊಡ್ಡ ಅಭಿಮಾನಿಯಾಗಿದ್ದು, ಸಂತೋಷ್ ಸೇರಿದಂತೆ ಇನ್ನೂ ಹಲವರು ಚಿತ್ರರಂಗಕ್ಕೆ ಬರಲು ಉಪೇಂದ್ರ ಅವರ ಸ್ಪೂರ್ತಿ ಕೊಟ್ಟಿದ್ದಾರಂತೆ.

ಇನ್ನೂ ಉಪೇಂದ್ರ ಅವರ 'ಉಪ್ಪಿ 2' ಚಿತ್ರವನ್ನು ಸಂತೋಷ್ ಅವರು ನಿರ್ದೇಶಕನಾಗಿ ಅಲ್ಲದೇ ಒಬ್ಬ ಸಾಮಾನ್ಯ ಪ್ರೆಕ್ಷಕನಾಗಿ ನೋಡಿದ ಅವರು ಕೂಡ ಉಪ್ಪಿ ಅವರ ಡಿಫರೆಂಟ್ ನಿರ್ದೇಶನಕ್ಕೆ ಮನಸೋತಿದ್ದಾರಂತೆ.

ಸುಮಾರು 15 ವರ್ಷಗಳ ನಂತರ ನಾನು ಕೂಡ ಈಗ ಒಬ್ಬ ನಿರ್ದೇಶಕ ಆದ್ರೆ ಈಗ ಒಬ್ಬ ಸಾಮಾನ್ಯ ಅಭಿಮಾನಿಯಾಗಿ 'ಉಪ್ಪಿ 2' ಚಿತ್ರ ನೋಡಲು ಹೋಗುತ್ತಿದ್ದೇನೆ, ನಾನು ಕೂಡ ಉಪೇಂದ್ರ ಅವರ ದೊಡ್ಡ ಅಭಿಮಾನಿ ಎಂದು ಚಿತ್ರ ವೀಕ್ಷಿಸುವ ಮೊದಲು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅದೇನೇ ಇರಲಿ ಒಟ್ನಲ್ಲಿ ಉಪೇಂದ್ರ ಅವರು ಬಹು ದಿನಗಳ ನಂತರ ಪ್ರೇಕ್ಷಕರಿಗೊಂದು ಟ್ವಿಸ್ಟ್ ಚಿತ್ರ ನೀಡಿದ್ದು, ಅರ್ಥ ಆದವರಿಗೆ ಇಷ್ಟವಾದರೆ, ಆರ್ಥವಾಗದೇ ಇದ್ದವರು ಮಾತ್ರ ಸಖತ್ ತಲೆ ಕೆರೆದುಕೊಂಡಿದ್ದಾರೆ ಅಂದ್ರೂ ಸರಿಯೇ.

English summary
Kannada movie 'Mr and Mrs Ramachari' fame Director Santhosh is an Upendra fan and watched UPPI 2'. 'Uppi 2' movie feature Kannada actor Upendra, Actress Kristina Akheeva, Actress Parul Yadav in the lead role. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada