ಜೇಮ್ಸ್ ಬಾಂಡ್ ಆದ ರಾಜುವಿಗೆ ರಾಣಿ ಸಿಕ್ಕಳು
ನಟ ಗುರುನಂದನ್ ಮತ್ತೆ ರಾಜು ಆಗಿದ್ದಾರೆ. 'ಫಸ್ಟ್ ರಾಂಕ್ ರಾಜು' ಬಳಿಕ 'ರಾಜು ಕನ್ನಡ ಮೀಡಿಯಂ' ಚಿತ್ರವನ್ನು ಮಾಡಿದ್ದ ಇವರು ಈಗ ಜೇಮ್ಸ್ ಬಾಂಡ್ ರಾಜು ಹೆಸರಿನಲ್ಲಿ ಬಂದಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಜೇಮ್ಸ್ ಬಾಂಡ್ ಆಗಿ ಗುರುನಂದನ್ ಪೋಸ್ ನೀಡಿದ್ದಾರೆ.
'ರಾಜು ಜೇಮ್ಸ್ ಬಾಂಡ್' ಇದು ಗುರುನಂದನ್ ನಟನೆಯ ಹೊಸ ಸಿನಿಮಾವಾಗಿದೆ. ಈ ಸಿನಿಮಾವನ್ನು ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. 'ಭಾಗ್ಯರಾಜ್' ಸಿನಿಮಾದ ಮೂಲಕ ನಿರ್ದೇಶಕನಾಗಿದ್ದ ದೀಪಕ್ ಮಧುವನಹಳ್ಳಿ ಸದ್ಯಕ್ಕೆ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

ಸದ್ಯ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದ್ದು, ಮೃದುಲ ಪಟ್ಟನಶೆಟ್ಟಿ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕ ಹುಡುಗಿಯಾಗಿ ಮೃದುಲ ಕಾಣಿಸಿಕೊಳ್ಳುತ್ತಿದ್ದಾರೆ.

ಕರ್ಮ ಬ್ರೋಸ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇದೇ ತಿಂಗಳ 23 ರಂದು ಸಿನಿಮಾ ಲಾಂಚ್ ಆಗಲಿದ್ದು, ಟ್ರೇಲರ್ ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರ ಚಿತ್ರದ ಶೂಟಿಂಗ್ ಶುರು ಆಗಲಿದೆ.


Click it and Unblock the Notifications











