MS Dhoni: ಧೋನಿ ಮನೆಗೆ ಬಂದವ್ರಿಗೆ ಕುಳಿತುಕೊಳ್ಳಲು ಚೇರ್ ಇರಲಿಲ್ಲ, ಅಂಬರೀಶ್ 2 ಲಕ್ಷ ಕೊಟ್ಟಿದ್ರು: ಸುಮಲತಾ

ರೆಬೆಲ್ ಸ್ಟಾರ್ ಅಂಬರೀಶ್ ಕಲಿಯುಗದ ಕರ್ಣ ಎಂದೇ ಖ್ಯಾತಿಯನ್ನು ಹೊಂದಿದ್ದ ನಟ. ಅಂಬರೀಶ್ ತಮ್ಮ ಜತೆಗಿದ್ದ ಅದೆಷ್ಟೋ ಸಹ ಕಲಾವಿದರಿಗೆ ಕಷ್ಟದ ಸಮಯದಲ್ಲಿ ಹಣ ಸಹಾಯ ಮಾಡಿ ಹೆಗಲು ಕೊಟ್ಟಿದ್ದಾರೆ. ಮಾತಿನಲ್ಲಿ ಎಷ್ಟೇ ಒರಟಾದರೂ ಸಹ ಅಂಬರೀಶ್ ಅವರ ಹೃದಯ ಮಾತ್ರ ತುಂಬಾ ಮೃದು ಎಂಬುದಕ್ಕೆ ಈ ಸಹಾಯಗಳೇ ಸಾಕ್ಷಿ. ಇನ್ನು ಅಂಬರೀಶ್ ಎಲ್ಲಿಯೂ ಸಹ ತಾವು ಮಾಡಿದ ಸಹಾಯವನ್ನು ಹೇಳಿಕೊಳ್ಳುತ್ತಿರಲಿಲ್ಲ. ಆದರೂ ಸಹ ಕೆಲವೊಮ್ಮೆ ಅವರು ಮಾಡಿದ್ದ ಸಹಾಯಗಳನ್ನು ಫಲನುಭವಿಗಳೇ ಬಿಚ್ಚಿಟ್ಟಿದ್ದರು.

ಇನ್ನು ಅಂಬರೀಶ್ ಕೇವಲ ಕನ್ನಡದ ಕಲಾವಿದರಿಗೆ ಮಾತ್ರವಲ್ಲದೇ ಹೊರ ರಾಜ್ಯದ ಹಲವರಿಗೂ ಸಹ ಸಹಾಯ ಮಾಡಿದ ಉದಾಹರಣೆಗಳಿವೆ. ಇನ್ನು ಎಂಎಸ್ ಧೋನಿಗೂ ಸಹ ರೆಬೆಲ್ ಸ್ಟಾರ್ ಅಂಬರೀಶ್ ನೆರವಿಗೆ ಬಂದಿದ್ದರು. ಹೌದು, ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಅಂಬರೀಶ್ ಎರಡು ಲಕ್ಷ ರೂಪಾಯಿಗಳ ಚೆಕ್ ನೀಡಿದ್ದರು.

MS Dhoni: Sumalatha shared the pic of Ambareesh issuing 2 lakhs cheque to MS Dhoni

ಈ ಸುದ್ದಿ ಈ ಹಿಂದೆ ಹಲವಾರು ಬಾರಿ ಹರಿದಾಡಿತ್ತೂ ಕೂಡ. ಆದರೆ ಎಲ್ಲಿಯೂ ಸಹ ಇದಕ್ಕೆ ಪುರಾವೆ ಇರಲಿಲ್ಲ. ಈ ಸುದ್ದಿಯನ್ನು ಕೇಳಿ ಹಲವರು ಸಾಕ್ಷಿಯೇನು ಎಂಬ ಕಾಮೆಂಟ್ ಸಹ ಮಾಡಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಂಬರೀಶ್ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಶ್ ಅವರು ಟ್ವೀಟ್ ಮಾಡುವ ಮೂಲಕ ಅಂಬರೀಶ್ ಎಂಎಸ್ ಧೋನಿಗೆ ಹಣ ನೀಡಿದ್ದು ನಿಜ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

"ಇಂದು ಈ ಅಮೂಲ್ಯವಾದ ಫೋಟೊ ಸಿಕ್ಕಿತು! 2006 ರಲ್ಲಿ KSCA ಸ್ಟೇಡಿಯಂನಲ್ಲಿ ಅಂಬರೀಶ್ ಅವರು 2 ಲಕ್ಷಗಳ ಚೆಕ್ ಅನ್ನು ಎಂ ಎಸ್ ಧೋನಿ ಅವರಿಗೆ ನೀಡಿದ್ದರ ಚಿತ್ರವಿದು. ಆಗ ಧೋನಿ ಮುಂಬರುವ ದಿನಗಳಲ್ಲಿ ಮಿಂಚುವ ಉಜ್ವಲ ಕ್ರಿಕೆಟಿಗರಾಗಿದ್ದರು! ಅಂಬರೀಶ್ ಸಂದರ್ಶನವೊಂದನ್ನು ನೋಡಿದ್ದರು. ಅದರಲ್ಲಿ ಧೋನಿ ತಂದೆ ಧೋನಿ ಈಗ ಜನಪ್ರಿಯವಾಗುತ್ತಿದ್ದಾರೆ , ಮನೆಗೆ ಹಲವಾರು ಜನರು ಬರುತ್ತಿದ್ದಾರೆ, ಆದರೆ ಅವರಿಗೆ ನೀಡಲು ಸಾಕಷ್ಟು ಸೀಟುಗಳಿಲ್ಲ ಎಂದು ಹೇಳಿಕೊಂಡಿದ್ದರು. ಇದು ಅಪಾರ ಕ್ರೀಡಾ ಮತ್ತು ಕ್ರಿಕೆಟ್ ಅಭಿಮಾನಿಯಾಗಿದ್ದ ಅಂಬರೀಶ್ ಅವರನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿತ್ತು. ನಾವು ಈ ಫೋಟೊವನ್ನು ಕಳೆದುಕೊಂಡಿದ್ದೇವೆ ಎಂದು ಭಾವಿಸಿದ್ದೆವು ಮತ್ತು ವರ್ಷಗಳಿಂದ ಅದಕ್ಕಾಗಿ ತೀವ್ರವಾಗಿ ಹುಡುಕಿದ್ದೆವು. ಇಂದು ಥಟ್ಟನೆ ಸಿಕ್ಕ ಈ ಫೋಟೊ ಅಮೂಲ್ಯವಾದ ನೆನಪನ್ನು ಮರಳಿ ತಂದಿದೆ!

ಧೋನಿ ಅವರೇ ನಿಮಗಿದು ನೆನಪಿದೆ ಎಂಬುದು ನನಗೆ ಅನುಮಾನ. ಆದರೆ ನಿಮ್ಮ ಜರ್ನಿಯ ಬಗ್ಗೆ ತುಂಬಾ ಹೆಮ್ಮೆ ಇದೆ" ಎಂದು ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ.

More from Filmibeat

English summary
MS Dhoni: Sumalatha shared the pic of Ambareesh issuing 2 lakhs cheque to MS Dhoni
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X