twitter
    For Quick Alerts
    ALLOW NOTIFICATIONS  
    For Daily Alerts

    ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಪಡೆದ 'ಮುದ್ದು ಮುದ್ದಾಗಿ' ಕಿರುಚಿತ್ರ

    |

    ಕಲಬುರ್ಗಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನ್ನಡದ 'ಮುದ್ದು ಮುದ್ದಾಗಿ' ಕಿರುಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿವೆ. ಉತ್ತರ ಕರ್ನಾಟಕದಲ್ಲಿ ನಡೆಯುವ ಏಕೈಕ ಚಲನಚಿತ್ರೋತ್ಸವ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲಾಗಿದೆ.

    ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ದೇಶ ವಿದೇಶದ 200ಕ್ಕೂ ಹೆಚ್ಚು ಶಾರ್ಟ್ ಫಿಲ್ಮ್ ಗಳು ಭಾಗಿಯಾಗಿದ್ದು, ಇದರಲ್ಲಿ 'ಮುದ್ದು ಮುದ್ದಾಗಿ' ಕಿರುಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳು ಸಿಕ್ಕಿದೆ. ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನು ಪ್ರಾನ್ಯ ಪಿ ರಾವ್ ಪಡೆದಿದ್ದಾರೆ.

    Muddu Muddagi Kannada Short Film Got 4 Awards In Kalaburagi International Film Festival

    ಉಳಿದಂತೆ, ಕಿರುಚಿತ್ರದ ಸಂಗೀತ, ಸಾಹಿತ್ಯ ಹಾಗೂ ಗಾಯಕಕ್ಕೆ ಪ್ರಶಸ್ತಿಗಳು ಬಂದಿದೆ. ಅಲ್ಲದೆ, ಫಿಲ್ಮ್ ಫೆಸ್ಟಿವಲ್ ನ ನಾಲ್ಕನೇ ಅತ್ಯುತ್ತಮ ಕಿರುಚಿತ್ರ ಇದಾಗಿದೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿರುವ ನಿರ್ದೇಶಕ ಸಾಯಿ ಕಿರಣ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

    ಈ ಚಲನಚಿತ್ರೋತ್ಸವ ಮಾತ್ರವಲ್ಲದೆ, ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೂ ಸಹ 'ಮುದ್ದು ಮುದ್ದಾಗಿ' ಕಿರುಚಿತ್ರ ಆಯ್ಕೆ ಆಗಿದೆ. ಬೆಂಗಾಲಿ ಯಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್ ನಲ್ಲಿ ಸ್ಕ್ರೀನಿಂಗ್ ಆಗಿದೆ. ಗುಜರಾತಿ ನಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ ಆಗಿದೆ.

    Muddu Muddagi Kannada Short Film Got 4 Awards In Kalaburagi International Film Festival

    ಒಬ್ಬ ಪುಟ್ಟ ಹುಡುಗಿಯ ಕಥೆ ಹೇಳಿದ್ದ ಈ ಕಿರುಚಿತ್ರ ಪ್ರಯೋಗಾತ್ಮಕವಾಗಿ ಇತ್ತು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಕಿರುಚಿತ್ರ ಹೊರ ಬಂದಿತ್ತು. ಸದ್ಯ, ಯೂ ಟ್ಯೂಬ್ ನಲ್ಲಿ ಕನ್ನಡದ ಮತ್ತು ತೆಲುಗು ಎರಡು ಭಾಷೆಯಲ್ಲಿ ಕಿರುಚಿತ್ರ ಮೂರು ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.

    English summary
    'Muddu Muddagi kannada short film got 4 awards in Kalaburagi international film festival.
    Saturday, July 27, 2019, 20:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X