Exclusive: ಹೊಂಬಾಳೆ- ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಸಿನಿಮಾ?: ಮೌನ ಮುರಿದ ನರ್ತನ್

ಸ್ಯಾಂಡಲ್‌ವುಡ್‌ನಲ್ಲೀಗ ದೊಡ್ಡ ದೊಡ್ಡ ಸಿನಿಮಾಗಳ ದರ್ಬಾರ್ ನಡೀತಿದೆ. ನೂರಾರು ಕೋಟಿ ಬಂಡವಾಳ ಹೂಡಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗಳು ಭಾರೀ ಸಾಹಸಕ್ಕೆ ಕೈಹಾಕುತ್ತಿದೆ. ಕ್ರೇಜಿ ಕಾಂಬಿನೇಷನ್‌ಗಳಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಿವೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಧ್ರುವ ಸರ್ಜಾ ಹಾಗೂ ನರ್ತನ್ ಜೋಡಿ ಸಿನಿಮಾ ಮಾಡುವ ಬಗ್ಗೆ ಇತ್ತೀಚೆಗೆ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಕೇಳಿ ಸಿನಿರಸಿಕರು ಖುಷಿಯಾಗಿದ್ದರು. ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ಊಹಿಸಿಕೊಂಡೇ ಥ್ರಿಲ್ಲಾಗಿದ್ದರು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ನರ್ತನ್ 'ಭೈರತಿ ರಣಗಲ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ ನಟನೆಯ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ.

Mufti Director Narthan Issues Clarification Over collaboration with Dhruva Sarja And hombale films

ಸೂಪರ್ ಹಿಟ್ 'ಮಫ್ತಿ' ಸಿನಿಮಾ ಪ್ರೀಕ್ವೆಲ್ 'ಭೈರತಿ ರಣಗಲ್'. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಶೇ. 60ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು ಹೊಸ ಶೆಡ್ಯೂಲ್‌ ಪ್ಲ್ಯಾನಿಂಗ್ ನಡೀತಿದೆ. ಸದ್ಯ ಶಿವಣ್ಣ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ರಿಲೀಸ್ ಎದುರು ನೋಡುತ್ತಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಧ್ರುವ ಸರ್ಜಾ ನಟನೆಯ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಚರ್ಚೆ ಬಗ್ಗೆ ಸ್ವತಃ ನಿರ್ದೇಶಕರೇ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ಸದ್ಯ ನಾನು 'ಭೈರತಿ ರಣಗಲ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದೀನಿ. ಬಳಿಕ ಕೆವಿಎನ್‌ ಪ್ರೊಡಕ್ಷನ್ಸ್‌ಗೆ ಒಂದು ಸಿನಿಮಾ ಮಾಡಿ ಕೊಡಬೇಕಿದೆ. ತೆಲುಗು ನಟ ರಾಮ್‌ ಚರಣ್ ಜೊತೆಗೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ಏನಾಗುತ್ತದೆ ಅನ್ನೋದನ್ನು ನೋಡಬೇಕು. ಧ್ರುವ ಸರ್ಜಾ- ಹೊಂಬಾಳೆ ಫಿಲ್ಮ್ಸ್ ಜೊತೆ ಸಿನಿಮಾ ಮಾಡ್ತೀನಿ ಎನ್ನುವ ಸುದ್ದಿ ಹೇಗೆ ಬಂತು ಗೊತ್ತಿಲ್ಲ. ಸದ್ಯಕ್ಕೆ ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ" ಎಂದು ಹೇಳಿದ್ದಾರೆ.

Mufti Director Narthan Issues Clarification Over collaboration with Dhruva Sarja And hombale films

6 ವರ್ಷಗಳ ಹಿಂದೆ ಬಂದಿದ್ದ ಬಂದಿದ್ದ ಆಕ್ಷನ್ ಎಂಡರ್‌ಟೈನರ್ 'ಮಫ್ತಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಪ್ರತಿ ಫ್ರೇಮ್ ಸಿನಿರಸಿಕರಿಗೆ ಥ್ರಿಲ್ ಕೊಟ್ಟಿತ್ತು. ಇನ್ನು ಶಿವಣ್ಣನನ್ನು ಭೈರತಿ ರಣಗಲ್ ಆಗಿ ವಿಭಿನ್ನ ಅವತಾರದಲ್ಲಿ ತೋರಿಸಿ ನರ್ತನ್ ಗೆದ್ದಿದ್ದರು. ಅದ್ಯಾವ ಮಟ್ಟಿಗೆ ಅಂದ್ರೆ ಅದೇ ಪಾತ್ರವನ್ನಿಟ್ಟುಕೊಂಡು ಮತ್ತೊಂದು ಸಿನಿಮಾ ಮಾಡುವಂತೆ ಕ್ರೇಜ್ ಸೃಷ್ಟಿಯಾಗಿತ್ತು.

'ಮಫ್ತಿ' ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ನರ್ತನ್ ಸಿನಿಮಾ ಮಾಡ್ತಾರೆ ಎನ್ನುವ ಚರ್ಚೆ ಶುರುವಾಯಿತು. ಅದಕ್ಕಾಗಿ ನರ್ತನ್ ಕಥೆ ಕೂಡ ಸಿದ್ಧಪಡಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ. ಯಶ್‌19 ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗಿತ್ತು. ಆದರೆ ಕೊನೆಗೆ 'ಭೈರತಿ ರಣಗಲ್' ಸಿನಿಮಾ ಶುರುವಾಯಿತು. ಅತ್ತ ಯಶ್ ಕೂಡ 'ಟಾಕ್ಸಿಕ್' ಸಿನಿಮಾ ಘೋಷಣೆ ಮಾಡಿದ್ದಾರೆ. ಗೀತು ಮೋಹನ್ ದಾಸ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ಈಗಾಗಲೇ ಬಳ್ಳಾರಿ, ಬೆಂಗಳೂರು, ಮೈಸೂರಿನಲ್ಲಿ 'ಭೈರತಿ ರಣಗಲ್' ಚಿತ್ರೀಕರಣ ನಡೆದಿದೆ. ದೇವನಹಳ್ಳಿ ಬಳಿ ಸೆಟ್ ಹಾಕಲಾಗುತ್ತಿದ್ದು ಶೀಘ್ರದಲ್ಲೇ ಹೊಸ ಶೆಡ್ಯೂಲ್ ಶುರುವಾಗುತ್ತದೆ ಎಂದು ನರ್ತನ್ ಹೇಳಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಹುಲ್ ಬೋಸ್, ಛಾಯಾ ಸಿಂಗ್, ವಸಿಷ್ಠ ಸಿಂಹ ಕೂಡ ತಾರಾಗಣದಲ್ಲಿದ್ದಾರೆ.

ಸದ್ಯ ಧ್ರುವ ಸರ್ಜಾ 'ಮಾರ್ಟಿನ್' ಹಾಗೂ 'KD' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆವಿಎನ್ ಸಂಸ್ಥೆಯೇ 'KD' ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Director Narthan reacts to Dhruva Sarja And hombale films film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X