For Quick Alerts
  ALLOW NOTIFICATIONS  
  For Daily Alerts

  ಕನ್ನಡ ನಿರ್ದೇಶಕರ ಜೊತೆ ಯಶ್ ಮುಂದಿನ ಸಿನಿಮಾ: ಇವರಲ್ಲಿ ರಾಕಿ ಭಾಯ್ ಗೆ ನಾಯಕಿ ಯಾರಾಗ್ತಾರೆ?

  |

  ನ್ಯಾಷನಲ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಇನ್ನು ಮುಗಿದಿಲ್ಲ ಆಗಲೆ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಯಶ್ ಮುಂದಿನ ಸಿನಿಮಾ ತೆಲುಗು ನಿರ್ದೇಶಕರ ಜೊತೆ ಮಾಡುತ್ತಾರೆ, ಅವರಜೊತೆ ಇವರ ಜೊತೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಪುರಿ ಜಗನ್ನಾಥ್ ಜೊತೆಗೆ ಯಶ್ 'ಜನ ಗಣ ಮನ' ಮಾಡೋದು ಪಕ್ಕಾ.?ಪುರಿ ಜಗನ್ನಾಥ್ ಜೊತೆಗೆ ಯಶ್ 'ಜನ ಗಣ ಮನ' ಮಾಡೋದು ಪಕ್ಕಾ.?

  ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಈಗಾಗಲೆ ಯಶ್ ಮಾತುಕಥೆ ಮುಗಿಸಿದ್ದಾರೆ. ಮುಂದಿನ ಸಿನಿಮಾ ಅವರ ಜೊತೆ ಫಿಕ್ಸ್ ಎಂದು ಹೇಳಲಾಗುತ್ತಿತ್ತು. ಆದರ ಜೊತೆಗೆ ಕನ್ನಡದಲ್ಲಿ ಮೈ ನೇಮ್ ಈಸ್ ಕಿರಾತಕ ಸಿನಿಮಾ ಕೂಡ ಬಾಕಿ ಇದೆ. ಇದೆಲ್ಲದರ ಜೊತೆಗೆ ಮತ್ತೊಬ್ಬ ನಿರ್ದೇಶಕರ ಹೆಸರು ಕೇಳಿಬರುತ್ತಿದೆ. ಹೌದು, ಯಶ್ ಮುಂದಿನ ಸಿನಿಮಾ ಕನ್ನಡ ನಿರ್ದೇಶಕರ ಜೊತೆಯೇ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಮಫ್ತಿ ನಿರ್ದೇಶಕರ ಜೊತೆ ಯಶ್?

  ಮಫ್ತಿ ನಿರ್ದೇಶಕರ ಜೊತೆ ಯಶ್?

  ನಿರ್ದೇಶಕ ನರ್ತನ್ ಮಫ್ತಿ ಸಿನಿಮಾದ ನಂತರ ಯಾವ ಸಿನಿಮಾವನ್ನು ಕೈಗೆತ್ತಿಕೊಂಡಿಲ್ಲ. ಸದ್ಯ ಕಾಲಿವುಡ್ ನಲ್ಲಿ ಬ್ಯುಸಿ ಇರುವ ನರ್ತನ್ ಯಶ್ ಗೆ ಆಕ್ಷನ್ ಕಟ್ ಹೇಳಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನರ್ತರ್ ಶಿವರಾಜ್ ಕುಮಾರ್ ಭೈರತಿ ರಣಗಲ್ ಸಿನಿಮಾ ಮಾಡಬೇಕಿತ್ತು. ಆದರೆ ಆ ಸಿನಿಮಾ ಕೂಡ ಇನ್ನು ಸೆಟ್ಟೇರಿಲ್ಲ. ಆಗಲೆ ಯಶ್ ಜೊತೆ ಸಿನಿಮಾ ಮಾಡ್ತಾರೆ ಎಂದು ಹೇಳಲಾಗುತ್ತಿದೆ.

  ಆಂಧ್ರ ಪ್ರದೇಶದಲ್ಲಿ ರಾಕಿ ಭಾಯ್ ದರ್ಬಾರ್ ನೋಡಿಆಂಧ್ರ ಪ್ರದೇಶದಲ್ಲಿ ರಾಕಿ ಭಾಯ್ ದರ್ಬಾರ್ ನೋಡಿ

  ಯಶ್ ಗೆ ನಾಯಕಿಯಾಗ್ತಾರಾ ಇವರು?

  ಯಶ್ ಗೆ ನಾಯಕಿಯಾಗ್ತಾರಾ ಇವರು?

  ಯಶ್ ಮತ್ತು ನರ್ತನ್ ಕಾಂಬಿನೇಷನ್ ನಲ್ಲಿ ಬರ್ತಿರುವ ಚಿತ್ರಕ್ಕೆ ಈ ಇಬ್ಬರು ನಾಯಕಿಯರ ಹೆಸರು ಕೇಳಿ ಬರುತ್ತಿದೆ. ಭರಾಟೆ ಖ್ಯಾತಿಯ ನಟಿ ಶ್ರೀಲೀಲಾ ಮತ್ತು ಆಶಿಕಾ ರಂಗನಾಥ್ ಇಬ್ಬರ ಹೆಸರು ಕೇಳಿ ಬರುತ್ತಿದೆ. ಯಶ್ ಮುಂದಿನ ಸಿನಿಮಾಗೆ ಕನ್ನಡದವರೆ ನಾಯಕಿಯಾಗ್ತಾರೆ ಎಂದು ಹೇಳಲಾಗುತ್ತಿದೆ. ಆಶಿಕಾ ಮತ್ತು ಶ್ರೀಲೀಲಾ ಮತ್ತು ನರ್ತರ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರ್ತಿದೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.

  ಹಂಪಿ ಉತ್ಸವದಲ್ಲಿ ಮಿಂಚಿದ ಅಣ್ತಮ್ಮ ಯಶ್ಹಂಪಿ ಉತ್ಸವದಲ್ಲಿ ಮಿಂಚಿದ ಅಣ್ತಮ್ಮ ಯಶ್

  'ಮೈ ನೇಮ್ ಈಸ್ ಕಿರಾತಕ' ಏನಾಯ್ತು?

  'ಮೈ ನೇಮ್ ಈಸ್ ಕಿರಾತಕ' ಏನಾಯ್ತು?

  'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಮುಹೂರ್ತ ಆಗಿದೆ. ಆದರೆ ಯಾವಾಗ ಬರುತ್ತೆ ಎನ್ನುವುದು ಅಭಿಮಾನಿಗಳ ಕುತೂಹಲ. ಕೆಜಿಎಫ್ ಸೂಪರ್ ಹಿಟ್ ಆದ್ಮೇಲೆ ಕಿರಾತಕ ಸಿನಿಮಾ ತಡವಾಗುತ್ತಿದೆ. ಮೂಲಗಳ ಪ್ರಕಾರ ಸಿನಿಮಾ ಬರುವುದು ಪಕ್ಕಾ. ಆದರೆ, ಯಾವಾಗ ಎನ್ನುವುದು ನಿರ್ಧಾರ ಆಗಿಲ್ಲ. 'ಕೆಜಿಎಫ್' ನಂತರ ಯಶ್ ಗೆ ಬರುವ ಕಥೆಗಳು, ಸಂಪರ್ಕ ಮಾಡುವ ನಿರ್ದೇಶಕರು, ನಿರ್ಮಾಪಕರು ಹೆಚ್ಚಾಗಿದ್ದಾರೆ. ಹೀಗಾಗಿ, ಯಶ್ ಯಾವುದಾದರು ಸಿನಿಮಾ ಒಪ್ಪಿಕೊಂಡರೆ, ಅದರಿಂದ ಈ ಸಿನಿಮಾ ತಡ ಆದರೂ ಆಗಬಹುದು ಎನ್ನುತ್ತಿದ್ದಾರೆ.

  ಬೇಸಿಗೆಗೆ ಬರುತ್ತಾ ಕೆಜಿಎಫ್-2?

  ಬೇಸಿಗೆಗೆ ಬರುತ್ತಾ ಕೆಜಿಎಫ್-2?

  ಇಷ್ಟೆಲ್ಲ ಸುದ್ದಿಗಲು ಹರಿದಾಡುತ್ತಿದ್ದರು ಯಶ್ ಯಾವುದಕ್ಕು ಪ್ರತಿಕ್ರಿಯೆ ನೀಡುತ್ತಿಲ್ಲ. ಸದ್ಯ ರಾಕಿ ಭಾಯ್ ಗಮನ ಏನಿದ್ದರು ಕೆಜಿಎಫ್-2 ಕಡೆ. ಈಗಾಗಲೆ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ. ಈ ಮೊದಲ ಚಿತ್ರತಂಡ ಪ್ಲಾನ್ ಮಾಡಿದ ಪ್ರಕಾರ ಸಿನಿಮಾ ಬೇಸಿಗೆ ರಜೆಗೆ ರಿಲೀಸ್ ಮಾಡಬೇಕೆಂದುಕೊಂಡಿದ್ದರು. ಆದರೆ ಚಿತ್ರೀಕರಣ ತಡವಾಗುತ್ತಿರುವುದು ನೋಡಿದ್ರೆ ಸಿನಿಮಾ ತಡವಾಗುವ ಸಾಧ್ಯತೆ ಇದೆ.

  Read more about: yash ಯಶ್
  English summary
  Mufti fame Director Nartan will be direct to Rocking star Yash next film, news is going on viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X