For Quick Alerts
  ALLOW NOTIFICATIONS  
  For Daily Alerts

  ಕಾಲಿವುಡ್ 'ಮಫ್ತಿ'ಯ ಪ್ರಮುಖ ದೃಶ್ಯದ ಚಿತ್ರೀಕರಣ

  |

  ಕನ್ನಡದ ಸೂಪರ್ ಹಿಟ್ ಸಿನಿಮಾ 'ಮಫ್ತಿ' ತಮಿಳಿಗೆ ರಿಮೇಕ್ ಆಗುತ್ತದೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

  'ಮಫ್ತಿ' ಸಿನಿಮಾದ ಪ್ರಮುಖ ದೃಶ್ಯದ ಚಿತ್ರೀಕರಣ ಈಗ ನಡೆಯುತ್ತಿದೆ. ಭೈರತಿ ರಣಗಲ್ ಪಾತ್ರದ ಎಂಟ್ರಿ ದೃಶ್ಯದ ಶೂಟಿಂಗ್ ಸಾಗುತ್ತಿದೆ. ಚಿತ್ರೀಕರಣದ ಸ್ಥಳದ ಫೋಟೋವನ್ನು ನಟ ಸಿಂಬು ಹಂಚಿಕೊಂಡಿದ್ದಾರೆ. ಹೆಲಿಕ್ಯಾಪ್ಟರ್ ನಿಂದ ಹೀರೋ ಆಗಮನ ಆಗುವ ದೃಶ್ಯ ಇದಾಗಿದೆ.

  ತಮಿಳಿನಲ್ಲಿ 'ಮಫ್ತಿ' : ಭೈರತಿ ರಣಗಲ್ ಆದ ಸಿಂಬು ತಮಿಳಿನಲ್ಲಿ 'ಮಫ್ತಿ' : ಭೈರತಿ ರಣಗಲ್ ಆದ ಸಿಂಬು

  ಶಿವರಾಜ್ ಕುಮಾರ್ ಮಾಡಿದ್ದ ಭೈರತಿ ರಣಗಲ್ ಪಾತ್ರವನ್ನು ಸಿಂಬು ನಿರ್ವಹಿಸುತ್ತಿದ್ದಾರೆ. ಶ್ರೀ ಮುರಳಿ ಪಾತ್ರದಲ್ಲಿ ಗೌತಮ್ ಕಾರ್ತಿಕ್ ನಟಿಸುತ್ತಿದ್ದಾರೆ. ಸಿಂಬು ಗ್ಯಾಂಗ್ ಸ್ಟರ್ ಹಾಗೂ ಗೌತಮ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ

  ಕನ್ನಡದ ನಿರ್ದೇಶಕ ನರ್ತನ್ ಅವರೇ ಅಲ್ಲಿಯೂ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ದೊಡ್ಡ ಗೆಲುವು ಕಂಡ ಈ ನಿರ್ದೇಶಕ ಈಗ ಕಾಲಿವುಡ್ ಗೆ ಹಾಡಿದ್ದಾರೆ.

  ಬಾಹುಬಲಿ ತಮಿಳು ಚಿತ್ರಕ್ಕೆ ಡೈಲಾಗ್ ಬರೆದಿದ್ದ ಮಾಧವನ್ ಕಾರ್ತಿ ಈ ಸಿನಿಮಾಗೂ ಸಂಭಾಷಣೆ ಬರೆದಿದ್ದಾರೆ. ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

  English summary
  Actor Simbu will be doing Shivaraj Kumar role in 'Mufti' movie tamil remake. Mufti movie tamil remake making photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X