ಗಾಂಧಿನಗರದಲ್ಲಿ 'ಮಫ್ತಿ' ಸಿನಿಮಾಗೆ ಸಿಕ್ಕ ಚಿತ್ರಮಂದಿರ ಯಾವುದು.?
ಪ್ರತಿ ವಾರ ಬರುವ ಕನ್ನಡ ಸಿನಿಮಾಗಳು ರಾಜ್ಯಾದಂತ್ಯ ಬಿಡುಗಡೆಯಾಗುತ್ತದೆ. ಆದರು ಕೂಡ ಗಾಂಧಿನಗರದಲ್ಲಿ ಯಾವ ಚಿತ್ರಮಂದಿರದಲ್ಲಿ ಆ ಚಿತ್ರ ರಿಲೀಸ್ ಆಗುತ್ತದೆ ಎನ್ನುವ ಸಣ್ಣ ಕುತೂಹಲ ಸಿನಿಮಾಭಿಮಾನಿಗಳಲ್ಲಿ ಇದ್ದೇ ಇರುತ್ತದೆ.
ಅದೇ ರೀತಿ ಮುಂದಿನ ವಾರ ಬರುತ್ತಿರುವ 'ಮಫ್ತಿ' ಸಿನಿಮಾಗೆ ಕೆ.ಜಿ ರಸ್ತೆಯ ಯಾವ ಚಿತ್ರಮಂದಿರ ಸಿಗುತ್ತದೆ ಎನ್ನುವ ಪ್ರಶ್ನೆ ಇತ್ತು. ಆದರೆ ಈಗ ಗಾಂಧಿನಗರದ ಪ್ರಮುಖ ಚಿತ್ರಮಂದಿರ ಸಂತೋಷ್ ಚಿತ್ರಮಂದಿರ 'ಮಫ್ತಿ' ಸಿನಿಮಾದ ಪಾಲಾಗಿದೆ. ಸದ್ಯ ಚೇತನ್ ನಟನೆಯ 'ಅತಿರಥ' ಸಿನಿಮಾ ಇಂದು ಸಂತೋಷ್ ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ.

ಅಂದಹಾಗೆ, 'ಮಫ್ತಿ' ಸಿನಿಮಾ ಶ್ರೀ ಮುರಳಿ ಮತ್ತು ಶಿವಣ್ಣ ನಟನೆಯ ಸಿನಿಮಾವಾಗಿದೆ. ನರ್ತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 1ಕ್ಕೆ ಈ ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ.
English summary
'Mufti' movie will be releasing on December 1. ಮಫ್ತಿ ಸಿನಿಮಾ ಡಿಸೆಂಬರ್ 1ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications