ಮುಂದಿನ ತಿಂಗಳ ಬಿಡುಗಡೆಯಾಗ್ತಿದೆ 'ಮುಗಿಲು' ಚಿತ್ರ

ಯುವ ನಿರ್ದೇಶಕ ಅರು ಕುಮಾರ್ ಚಿತ್ರರಂಗದಲ್ಲಿ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. 'ಮುಗಿಲು' ಸಿನಿಮಾದ ಮೂಲಕ ಡೈರೆಕ್ಟರ್ ಆಗಿರುವ ಅವರು ತಮ್ಮ ಸಿನಿಮಾವನ್ನು ಮುಂದಿನ ತಿಂಗಳ ಪ್ರೇಕ್ಷಕರ ಮುಂದೆ ತರಲಿದ್ದಾರೆ.

ಈಗಾಗಲೇ ಈ ಸಿನಿಮಾ ಹಾಡುಗಳು ಮತ್ತು ಟ್ರೈಲರ್ ಗಮನ ಸೆಳೆದಿದೆ. 'ಗೂಡು ಇಲ್ಲದ ಪಕ್ಷಿ...' ಹಾಡಿಗೆ ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಹಾಡುಗಳನ್ನು ಅನಾಥಾಶ್ರಮ ಮತ್ತು ವೃದ್ದಾಶ್ರಮದಲ್ಲಿ ರಿಲೀಸ್ ಮಾಡಲಾಗಿದೆ.

ಹಾಡುಗಳಿಗೆ ಸ್ಟನಿಂಗ್ ಬ್ರದರ್ಸ್ (ಸಾಯಿ ಮತ್ತು ಚಕ್ರಿ) ಸಂಗೀತ ಸಂಯೋಜನೆ ಮಾಡಿದ್ದಾರೆ. ಅರು ಕುಮಾರ್ ಸಾಯಿ, ಚಕ್ರಿ, ಸೋಹನ್ ಸಾಹಿತ್ಯ ಇದೆ. ಸಾಯಿ, ಚಕ್ರಿ, ವಿಹಾನ್ ಅಭ್ಯುದಯ, ಸಂಗೀತಾ ಶರತ್ ಧ್ವನಿ ನೀಡಿದ್ದಾರೆ. ಇನ್ನು ಚಿತ್ರದ ಹಾಡುಗಳು ಮತ್ತು ಟ್ರೈಲರ್ ಲಹರಿ ಆಡಿಯೋ ಸಂಸ್ಥೆಯಲ್ಲಿ ಬಿಡುಗಡೆ ಮಾಡಲಾಗಿದೆ.

mugilu kannada movie will be releasing june

ಚಿತ್ರದಲ್ಲಿ ನೀನಾಸಂ ನ ಕಲಾವಿದ ಆರ್ಯ, ಕಾವ್ಯ, ವಿಲಾಸ್ ರಾವ್, ರುಚಿತ್ ರಂಗನಾಥ್, ಸಂತೋಷ್ ಸಾರ್ಥಕ್, ಮಿಮಿಕ್ರಿ ರಾಜ್ ಗೋಪಾಲ್, ಒ.ಎಸ್ ಬಿರಾದಾರ್, ರೇಖಾ ಭದ್ರಾವತಿ, ರಾಘವೇಂದ್ರ ನಾಯ್ಕ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

mugilu kannada movie will be releasing june

'ಮುಗಿಲು' ಒಬ್ಬ ವ್ಯಕ್ತಿಯ ಜೀವನಾಧಾರಿತ ಕಥೆ ಇದ್ದು "ಕಣ್ ಹನಿಗಳ ಕಂಬನಿ" ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಚೆನ್ನಕೇಶವ ಮೂರ್ತಿ ಎಂ. ಟಿ ಚಿತ್ರದ ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರವನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿವೆ.

More from Filmibeat

English summary
'Mugilu' kannada movie will be releasing june 2019. The movie is directed by Aru Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X