ಅಮೆರಿಕಾದಲ್ಲಿ ದಾಖಲೆ ಬರೆದ ಭಟ್-ಗಣಿಯ 'ಮುಗುಳುನಗೆ'
Recommended Video

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯಲ್ಲಿ ಮೂಡಿಬಂದ 'ಮುಗುಳುನಗೆ' ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಶಕದ ನಂತರ ಭಟ್ ಮತ್ತು ಗಣಿ ಒಟ್ಟಿಗೆ ಸಿನಿಮಾ ಮಾಡಿರುವುದು ದೊಡ್ಡ ಮಟ್ಟದ ನಿರೀಕ್ಷೆ, ಕುತೂಹಲ ಹುಟ್ಟಿಸಿತ್ತು. ಈ ಎಲ್ಲಾ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಗೆದ್ದಿದೆ.
ನಮ್ಮ ರಾಜ್ಯದ ಕನ್ನಡ ಪ್ರೇಕ್ಷಕರ ಮನಗೆದ್ದ 'ಮುಗುಳುನಗೆ' ಈಗ ಹೊರ ದೇಶದಲ್ಲಿ 'ನಗು' ಬೀರಲು ಹೋಗುತ್ತಿದೆ. ಸೆಪ್ಟಂಬರ್ 14 ರಿಂದ ಯುಎಸ್ ಎ ಮತ್ತು ಕೆನಡಾದಲ್ಲಿ ದೇಶಗಳಲ್ಲಿ 'ಮುಗುಳುನಗೆ' ಸಿನಿಮಾ ದಾಖಲೆ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದುವರೆಗೂ ಯಾವ ಕನ್ನಡದ ಚಿತ್ರವೂ ಮಾಡಿರದ ರೆಕಾರ್ಡ್ ಈಗ 'ಮುಗುಳುನಗೆ' ತನ್ನದಾಗಿಸಿಕೊಳ್ಳುತ್ತಿದೆ.

ಹೌದು, ಅಮೆರಿಕಾದಲ್ಲಿ ಬರೋಬ್ಬರಿ 50 ಸ್ಕ್ರೀನ್ ನಲ್ಲಿ 'ಮುಗುಳುನಗೆ' ತೆರೆಕಾಣುತ್ತಿದೆ. ಇದು ಕನ್ನಡದ ಮಟ್ಟಿಗೆ ಯುಎಸ್ ಎ ನಲ್ಲಿ ಅತಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಇನ್ನು ಇದರ ಜೊತೆಗೆ ಕೆನಡಾದ 4 ಚಿತ್ರಮಂದಿರದಲ್ಲಿ ಗಣೇಶ್ ಚಿತ್ರ ತೆರೆ ಕಾಣುತ್ತಿದೆ. ಇದುವರೆಗೂ 'ರಂಗಿತರಂಗ' ಸಿನಿಮಾ ಅತಿ ಹೆಚ್ಚು ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದ ಸಿನಿಮಾ ಆಗಿತ್ತು. ಈಗ ಮುಗುಳುನಗೆ ಈ ದಾಖಲೆಯನ್ನ ಬ್ರೇಕ್ ಮಾಡುತ್ತಿದೆ.

ಅಂದ್ಹಾಗೆ, ಸೈಯಾದ್ ಸಲಾಂ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಗಣೇಶ್ ನಾಯಕನಾಗಿ ಅಭಿನಯಿಸಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಅರೋರ ಹಾಗೂ ಅಮೂಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಸೆಪ್ಟಂಬರ್ 1 ರಂದು ಕರ್ನಾಟಕ ಹಾಗೂ ಭಾರತದಲ್ಲಿ 'ಮುಗುಳುನಗೆ' ಬಿಡುಗಡೆಯಾಗಿತ್ತು.


Click it and Unblock the Notifications