»   » ಹುಬ್ಬಳ್ಳಿ ಮಂದಿ ಜೊತೆ ಹೆಜ್ಜೆ ಹಾಕಲಿರುವ ಗೋಲ್ಡನ್ ಸ್ಟಾರ್ ಗಣೇಶ್

ಹುಬ್ಬಳ್ಳಿ ಮಂದಿ ಜೊತೆ ಹೆಜ್ಜೆ ಹಾಕಲಿರುವ ಗೋಲ್ಡನ್ ಸ್ಟಾರ್ ಗಣೇಶ್

Written By:
Subscribe to Filmibeat Kannada

ಗಾಂಧಿನಗರದಲ್ಲಿ ಗಣೇಶ್ ಈಗ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅಂದರೆ ಅವರ ಅಭಿನಯದ 'ಮುಗುಳುನಗೆ' ಸಿನಿಮಾ. 'ಮುಗುಳುನಗೆ' ಸಿನಿಮಾ ಈಗ ತುಂಬಾ ವಿಚಾರಗಳಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ ಹುಬ್ಬಳ್ಳಿಗೆ ಇಡೀ ಚಿತ್ರತಂಡ ಆಗಮಿಸಲಿದೆ.

'ಮುಗುಳುನಗೆ' ಸಿನಿಮಾದ ಒಂದು ಹಾಡನ್ನು ಚಿತ್ರತಂಡ ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಧಾರ ಮಾಡಿದೆ. ಚಿತ್ರದಲ್ಲಿನ 'ಹೊಡಿ ಒಂಬತ್..' ಹಾಡನ್ನು ವಿಶೇಷವಾಗಿ ಹುಬ್ಬಳ್ಳಿ ಜನತೆಗಾಗಿಯೇ ಮಾಡಿದ್ದು, ಅಲ್ಲಿಯೇ ಹಾಡನ್ನು ಬಿಡುಗಡೆ ಮಾಡಿದರೆ ಚೆನ್ನಾಗಿರುತ್ತೆ ಎನ್ನುವುದು ಭಟ್ಟರ ಅಭಿಪ್ರಾಯ.

mugulu-nage-song-will-be-releasing-hubballi

ಅಂದಹಾಗೆ, ಚಿತ್ರದ ಈ ಹಾಡು ನಾಳೆ ಹುಬ್ಬಳ್ಳಿಯಲ್ಲಿ ಬಿಡುಗಡೆ ಆಗಲಿದ್ದು, ಕಾರ್ಯಕ್ರಮದಲ್ಲಿ ಇಡೀ 'ಮುಗುಳುನಗೆ' ಚಿತ್ರತಂಡ ಭಾಗಿಯಾಗಲಿದೆ. ಇನ್ನೂ ಚಿತ್ರದ ಉಳಿದ ಹಾಡುಗಳನ್ನು ಬೆಂಗಳೂರಿನಲ್ಲಿಯೇ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.

English summary
Kannada Movie 'Mugulu Nage' song 'Hodi Ombath' will be releasing on tomorrow in Hubballi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada