ಗಣೇಶ್ ಹುಟ್ಟುಹಬ್ಬಕ್ಕೆ ಭಟ್ಟರಿಂದ ಸ್ಪೆಷಲ್ ಉಡುಗೊರೆ

By Bharath Kumar

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜುಗಲ್ ಬಂದಿಯಲ್ಲಿ ಮೂಡಿ ಬರುತ್ತಿರುವ 'ಮುಗುಳುನಗೆ' ಹಲವು ವಿಚಾರಗಳಿಗೆ ಕುತೂಹಲ ಮೂಡಿಸಿದೆ. ಈಗಾಗಲೇ, ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ.

ಹೀಗಿರುವಾಗ, ನಿರ್ದೇಶಕ ಯೋಗರಾಜ್ ಭಟ್, ಗಣೇಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆ ಕೊಡಲು ಸಜ್ಜಾಗಿದ್ದಾರೆ. ಹೌದು, ಗೋಲ್ಡನ್ ಸ್ಟಾರ್ ಬರ್ತ್ ಡೇ ಗೆ 'ಮುಗುಳುನಗೆ' ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಂದ್ಹಾಗೆ, ಜುಲೈ 2 ರಂದು ಗಣೇಶ್ ಅವರ ಹುಟ್ಟುಹಬ್ಬಯಿದೆ. ಅದೇ ದಿನ 'ಮುಗುಳುನಗೆ' ಹಾಡುಗಳು ಮಾಡುಕಟ್ಟೆಗೆ ಲಗ್ಗೆಯಿಡಲಿದೆ.

Mugulunage Audio will Release on July 2nd

ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಸೈಯದ್ ಸಲಾಂ ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ಹಾಗೂ ಗಣೇಶ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಚಿತ್ರದಲ್ಲಿ ಒಟ್ಟು ನಾಲ್ಕು ನಾಯಕಿಯರಿದ್ದು, 'ಸಿದ್ಧಾರ್ಥ್' ಖ್ಯಾತಿಯ ಅಪೂರ್ವ ಆರೋರ, ಆಶಿಕಾ, ನಿಖಿತಾ ನಾರಾಯಣ್ ಮತ್ತು ವಿಶೇಷ ಪಾತ್ರದಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

More from Filmibeat

English summary
Golden Star Ganesh starrer Kannada Movie 'Mugulunage' Audio will Release on Ganesh Birthday (July 2nd). The movie is directed by Yograj Bhat, features Nikhitha Narayan, Ashika, Apoorva Aroora and Amulya in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X