twitter
    For Quick Alerts
    ALLOW NOTIFICATIONS  
    For Daily Alerts

    ರಜನಿ-ಪ್ರಕಾಶ್ ರೈಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಚಂದ್ರು

    By Bharath Kumar
    |

    ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನ ರಿಲೀಸ್ ಮಾಡಬಾರದು ಎಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಹುಭಾಷಾ ನಟ ಪ್ರಕಾಶ್ ರೈ, ಸಿನಿಮಾ ಬೇರೆ ರಾಜಕೀಯ ಬೇರೆ, ಸಿನಿಮಾ ಬ್ಯಾನ್ ಮಾಡೋದ್ರಿಂದ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿ ಕಾಲಾ ಪರವಾಗಿ ಮಾತನಾಡಿದ್ದಾರೆ.

    ಪ್ರಕಾಶ್ ರೈ ಅವರ ನಡೆಯನ್ನ ಬಹಳಷ್ಟು ಮಂದಿ ವಿರೋಧಿಸಿದ್ದಾರೆ. ಇದೀಗ, ಕನ್ನಡದ ಖ್ಯಾತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ''ಪ್ರಕಾಶ್ ರೈ, ರಜನಿಕಾಂತ್ ಹಾಗೂ ಕಮಲ್ ಹಾಸನ್ ಸೇರಿದಂತೆ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

    'ಕಾಲಾ' ವಿವಾದ ಬಗ್ಗೆ ಪ್ರಕಾಶ್ ರೈ ಕೊಟ್ಟ ಹೇಳಿಕೆ 'ಕಾಲಾ' ವಿವಾದ ಬಗ್ಗೆ ಪ್ರಕಾಶ್ ರೈ ಕೊಟ್ಟ ಹೇಳಿಕೆ

    ''ನಾಡು, ನುಡಿ, ಗಡಿ ವಿಚಾರ ಬಂದಾಗ ನಾನು ಕಠಿಣ ಹೃದಯಿ. ಎಂತಹ ಸ್ನೇಹಿತರಾದರು ಕೂಡ ಅಂತಹವರ ವಿರುದ್ಧ ಧ್ವನಿ ಎತ್ತುತ್ತೇನೆ. ರಾಜ್ಯದ ಭಾಷೆಗೆ ಧಕ್ಕೆ ಬಂದರೆ ರಜನಿಕಾಂತ್ ಆಗಲಿ, ಕಮಲಹಾಸನ್ ಆಗಲಿ, ಪ್ರಕಾಶ್ ರೈಯನ್ನು ಧಿಕ್ಕರಿಸುತ್ತೇನೆ'' ಎಂದು ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    mukhyamantri chandru react on kaala controversy

    ಇನ್ನು ಕಾಲಾ ಚಿತ್ರದ ವಿವಾದಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ''ಕಾಲಾ ಚಿತ್ರ ಬಿಡುಗಡೆ ಮಾಡದಂತೆ ಕಾನೂನು ಪ್ರಕಾರ ಹೇಳಲಿಕ್ಕೆ ಆಗದಿದ್ದರೂ ವಿತರಿಕರಿಗೆ ಮತ್ತು ಪ್ರದರ್ಶಕರಿಗೆ ಅರಿವು ಮೂಡಿಸುತ್ತೇವೆ. ರಾಜ್ಯದ ಹಿತ ಮುಖ್ಯವಾದರೆ, ಪ್ರದರ್ಶಕರು ವಿತರಕರು ಈ ಸಿನಿಮಾ ತೆಗೆದುಕೊಳ್ಳಬಾರದು. ಒಂದು ವೇಳೆ ಪ್ರದರ್ಶನ ಮಾಡಿದರೆ ನಾವು ದಂಗೆ ಏಳುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

    'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್ 'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್

    ಇದೇ ವೇಳೆ ಪ್ರಕಾಶ್ ರೈ ಅವರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು ''ಪ್ರಕಾಶ್ ರೈ ಪ್ರಚಾರ ಗಿಟ್ಟಿಸಿಕೊಳ್ಳಲು ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುತ್ತಾರೆ, ಒಂದು ರೀತಿಯಲ್ಲಿ ಅವರು ಬಾಯಿ ಕೂಡ ಬಚ್ಚಲೇ ಎಂದಿದ್ದಾರೆ.

    English summary
    Kannada Actor mukhyamantri chandru opposed Rajanikanth and Paraksh rai for kaala movie.
    Wednesday, June 6, 2018, 10:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X