For Quick Alerts
  ALLOW NOTIFICATIONS  
  For Daily Alerts

  'ಕದ್ದು ಮುಚ್ಚಿ ವ್ಯವಹಾರ ಮಾಡಿ': ದರ್ಶನ್ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತು

  |
  ದರ್ಶನ್ ಚಟದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು | Mukya Mantri Chandru | Darshan | Aditya

  'ಮುಂದುವರೆದ ಅಧ್ಯಾಯ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹೊಸ ವಿವಾದ ಹುಟ್ಟುಹಾಕಿದೆ. ಕಾರ್ಯಕ್ರಮದಲ್ಲಿ ಸುದೀಪ್ ರನ್ನು ಕಡೆಗಣಿಸಿರುವುದು ಕಿಚ್ಚನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

  ಒಂದು ಕಡೆ ವಿವಾದವಾದರೆ, ಮತ್ತೊಂದು ಕಡೆ ಇದೇ ಕಾರ್ಯಕ್ರಮದಲ್ಲಿ ತಮಾಷೆಯೂ ತುಂಬಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಎಲ್ಲರನ್ನು ಹಾಸ್ಯದ ಕಡಲಲ್ಲಿ ತೇಲುವಂತೆ ಮಾಡಿದರು.

  ದಚ್ಚು ಇದ್ದ ಕಡೆ ಕಿಚ್ಚನ ಕಡೆಗಣನೆ: 'ಮುಂದುವರೆದ' ಸುದೀಪ್-ದರ್ಶನ್ ಶೀತಲ ಸಮರ 'ಅಧ್ಯಾಯ'.!ದಚ್ಚು ಇದ್ದ ಕಡೆ ಕಿಚ್ಚನ ಕಡೆಗಣನೆ: 'ಮುಂದುವರೆದ' ಸುದೀಪ್-ದರ್ಶನ್ ಶೀತಲ ಸಮರ 'ಅಧ್ಯಾಯ'.!

  'ಮುಂದುವರೆದ ಅಧ್ಯಾಯ' ಸಿನಿಮಾದಲ್ಲಿ ಮುಖ್ಯಮಂತ್ರಿ ಚಂದ್ರು ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್ ಬಂದಿದ್ದು, ಇಬ್ಬರು ಕಲಾವಿದರ ಸಮಾಗಮ ಆಗಿದೆ.

  ಈ ವೇಳೆ ದರ್ಶನ್ ಸಾಧನೆಯನ್ನು ಹೊಗಳುವುದರ ಜೊತೆಗೆ, ಅವರನ್ನು ಮುಖ್ಯಮಂತ್ರಿ ಚಂದ್ರು ಕಿಚ್ಚಾಯಿಸಿದರು. ದರ್ಶನ್ ಕೂಡ ಮುಖ್ಯಮಂತ್ರಿ ಚಂದ್ರು ಮಾಡಿದ ತಮಾಷೆಯನ್ನು ತುಂಬ ಎಂಜಾಯ್ ಮಾಡಿದರು.

  ದರ್ಶನ್ ತಂದೆ, ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ

  ದರ್ಶನ್ ತಂದೆ, ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ

  ''ದರ್ಶನ್ ತಂದೆ ಜೊತೆಗೆ ನಾನು ತುಂಬ ಸಿನಿಮಾ ಮಾಡಿದ್ದೇನೆ. ಇಬ್ಬರು ದೊಡ್ಡ ಖಳನಾಯಕರಾಗಿದ್ದೆವು. ನಾನು ಅಭಿನಯಿಸಿದ ಕೆಲವು ಸಿನಿಮಾಗಳಲ್ಲಿ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಅವರನ್ನು ಬಾರೋ... ಹೋಗೋ... ಎಂದೆಲ್ಲ ಕರೆದಿದ್ದೆ. ಅಂತಹ ಹುಡುಗ ಈ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ಗೊತ್ತಿರಲಿಲ್ಲ.'' ಎಂದು ಮುಖ್ಯಮಂತ್ರಿ ಚಂದ್ರು ಸಂತಸ ವ್ಯಕ್ತ ಪಡಿಸಿದರು.

  ಹೋಗೋ.. ಬಾರೋ.. ಎಂದು ಕರೆದಿದ್ದೆ

  ಹೋಗೋ.. ಬಾರೋ.. ಎಂದು ಕರೆದಿದ್ದೆ

  ''ಆಗ ಹೋಗೋ.. ಬಾರೋ.. ಎಂದು ದರ್ಶನ್ ಗೆ ಕರೆದಿದ್ದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದಾಗ, ದರ್ಶನ್ ಈಗಲೂ ಹಾಗೆಯೇ ಕರೆಯಿರಿ ಎಂದರು. 'ಜನುಮದ ಜೋಡಿ' ಸಿನಿಮಾದಲ್ಲಿ ಮುಖ್ಯಮಂತ್ರಿ ಚಂದ್ರು ಹಾಗೂ ದರ್ಶನ್ ಒಟ್ಟಿಗೆ ಕೆಲಸ ಮಾಡಿದ್ದರು. ಒಬ್ಬ ನಾಯಕನಾಗಿ ದರ್ಶನ್ ಬೆಳೆದಿರುವ ರೀತಿ ಎಲ್ಲರಿಗೂ ಮಾದರಿ'' ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

  ಶಾಕಿಂಗ್: ಸುದೀಪ್ ಫೋಟೋ ಯಾಕೆ ಹಾಕಿಲ್ಲ ಅಂತ ಕೇಳಿದ್ರೆ 'ನೋ ಕಾಮೆಂಟ್ಸ್' ಎಂದ ಆದಿತ್ಯ.!ಶಾಕಿಂಗ್: ಸುದೀಪ್ ಫೋಟೋ ಯಾಕೆ ಹಾಕಿಲ್ಲ ಅಂತ ಕೇಳಿದ್ರೆ 'ನೋ ಕಾಮೆಂಟ್ಸ್' ಎಂದ ಆದಿತ್ಯ.!

  ಸಣ್ಣ ಪುಟ್ಟ ವ್ಯವಹಾರ

  ಸಣ್ಣ ಪುಟ್ಟ ವ್ಯವಹಾರ

  ''ನಾಯಕ ಬೆಳೆದ ಮೇಲೆ ಅದನ್ನು ತೂಗಿಸಿಕೊಂಡು ಹೋಗುವುದು ಕಷ್ಟ. ಈಗ ನಿಮ್ಮ ಮೇಲೆ ಜವಾಬ್ದಾರಿ ಜಾಸ್ತಿ ಇದೆ. ಬರೀ ಸಿನಿಮಾ ಮಾತ್ರವಲ್ಲದೆ, ರಾಜ್ಯದ ಮೇಲೆ ನಿಮ್ಮ ಜವಾಬ್ದಾರಿ ಇದೆ. ನೀವು ಒಬ್ಬ ಆದರ್ಶ ವ್ಯಕ್ತಿಯಾಗಿ ಇರುತ್ತೀರಿ. ಸಣ್ಣ ಪುಟ್ಟ ವ್ಯವಹಾರ ಇದ್ದರೆ, ಕದ್ದು ಮುಚ್ಚಿ ಮಾಡಿಕೊಳ್ಳಿ, ಆಚೆಗೆ ಬರದೆ ಇರುವ ರೀತಿ ನೋಡಿಕೊಳ್ಳಿ'' ಎಂದು ದರ್ಶನ್ ರನ್ನು ಹೊಗಳುತ್ತಲೇ ಮುಖ್ಯಮಂತ್ರಿ ಚಂದ್ರು ತಮಾಷೆ ಮಾಡಿದರು.

  ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್

  ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್

  ಮುಖ್ಯಮಂತ್ರಿ ಚಂದ್ರು ಮಾಡಿದ ತಮಾಷೆಗೆ ದರ್ಶನ್ ನಕ್ಕರು. ಸಣ್ಣ ಪುಟ್ಟ ವ್ಯವಹಾರ ಇದ್ದರೆ, ಕದ್ದು ಮುಚ್ಚಿ ಮಾಡಿಕೊಳ್ಳಿ, ಆಚೆಗೆ ಬರದೆ ಇರುವ ರೀತಿ ನೋಡಿಕೊಳ್ಳಿ ಎಂದಾಗ ದರ್ಶನ್ ಮುಖದಲ್ಲಿ ಜೋರಾಗಿ ನಗು ಬಂತು. ಎಂದಿನಂತೆ ಮುಖ್ಯಮಂತ್ರಿ ಚಂದ್ರು ತಮ್ಮ ತಮಾಷೆಯ ಮೂಲಕ ಕಾರ್ಯಕ್ರಮಕ್ಕೆ ಕಳೆ ತುಂಬಿದರು. ಅವರ ತಮಾಷೆಯನ್ನು ದರ್ಶನ್ ಎಂಜಾಯ್ ಮಾಡಿದರು.

  English summary
  Actor Mukhyamantri Chandru's funny moments in Munduvareda Adhyaya movie trailer launch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X